2023-24ನೇ ಸಾಲಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯಿಂದ ಸಿದ್ದಪ್ಪನವರಿಗೆ ಪ್ರಶಸ್ತಿ ನೀಡಿ ಗೌರವ
ಹಂದಿಜೋಗಿ ವಂಶಸ್ಥರಾದ ಸಿದ್ದಪ್ಪ ಅವರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲಾ ಗ್ರಾಮಗಳಲ್ಲಿ ಮತ್ತು ಬೇರೆ ಬೇರೆ ಪ್ರಾಂತ್ಯಗಳಲ್ಲಿಯೂ ಸಹ ಜನಪದ ಕಲೆಯನ್ನು ವಿಸ್ತರಿಸು ತ್ತಿದ್ದು ಇವರು ಹೋದ ಕಡೆಗಳಲ್ಲಿ ನೆಲೆಯಿಲ್ಲದೆ ಗುಡಿಸಲು ಮತ್ತು ಮರದಡಿಗಳಲ್ಲಿ ವಾಸ ವಿದ್ದುಕೊಂಡು ಈ ಗೀತೆಗಳನ್ನು ಹಳ್ಳಿಯಿಂದ ಹಳ್ಳಿಗೆ ಹಾಡಿಕೊಂಡು ಜನಪದ ಸಂಸ್ಕೃತಿ ಬೆಳಸಿಕೊಂಡು ಬಂದಿದ್ದಾರೆ.

ಕಿನ್ನರಿ ಕಲಾವಿದ ಸಿದ್ದಪ್ಪ

ಶಿರಾ: ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ತಾವರೆಕೆರೆ (ಹಂದಿ ಜೋಗಿ ಕಾಲೋನಿ) ಗ್ರಾಮದ ಕಿನ್ನರಿ ಕಲಾವಿದ ಸಿದ್ದಪ್ಪ ಅವರು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶಿರಾ ಸೀಮೆ ಜಾನಪದ ಸೊಗಡಿನ ತವರೂರು. ಶಿರಾ ತಾಲ್ಲೂಕು, ಗೌಡಗೆರೆ ಹೋಬಳಿ, ಜೋಗೀರಹಟ್ಟಿ ಗ್ರಾಮದಲ್ಲಿ ವಾಸವಾಗಿರುವ ಶೆಟ್ಟಿಯಪ್ಪರವರ ಮಗನಾದ ಸುಮಾರು 65 ವರ್ಷದ ಸಿದ್ದಪ್ಪ ಅವರು ಸುಮಾರು 40 ವರ್ಷಗಳಿಂದ ಜಾನ ಪದ ಕಲೆಯಾದ ಜೋಗಿಪದಗಳಾದ ಅರ್ಜುನ್ ಜೋಗಿ ಹಾಡು, ಪಾಂಡವರ 12 ವರ್ಷಗಳ ವನವಾಸದ ಹಾಡು, ಮತ್ತು ಅರಗಿನ ಪರ್ವ ಜನಪದ ಸಂಸ್ಕೃತಿಯ ಗೀತೆಗಳನ್ನು ಹಾಡಿ ಕೊಂಡು ಬಂದಿದ್ದಾರೆ.
ಹಂದಿಜೋಗಿ ವಂಶಸ್ಥರಾದ ಸಿದ್ದಪ್ಪ ಅವರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲಾ ಗ್ರಾಮಗಳಲ್ಲಿ ಮತ್ತು ಬೇರೆ ಬೇರೆ ಪ್ರಾಂತ್ಯಗಳಲ್ಲಿಯೂ ಸಹ ಜನಪದ ಕಲೆಯನ್ನು ವಿಸ್ತರಿಸುತ್ತಿದ್ದು ಇವರು ಹೋದ ಕಡೆಗಳಲ್ಲಿ ನೆಲೆಯಿಲ್ಲದೆ ಗುಡಿಸಲು ಮತ್ತು ಮರದಡಿ ಗಳಲ್ಲಿ ವಾಸವಿದ್ದುಕೊಂಡು ಈ ಗೀತೆಗಳನ್ನು ಹಳ್ಳಿಯಿಂದ ಹಳ್ಳಿಗೆ ಹಾಡಿಕೊಂಡು ಜನ ಪದ ಸಂಸ್ಕೃತಿ ಬೆಳಸಿಕೊಂಡು ಬಂದಿದ್ದಾರೆ. ಹುಳಿಯಾರು, ಗುಬ್ಬಿ, ನಿಟ್ಟೂರು, ಬಾಣ ಸಂದ್ರ ಚಿಕ್ಕನಾಯಕನಹಳ್ಳಿ ಬೆಳ್ಳಾರ ಕೆ.ಬಿ.ಕ್ರಾಸ್ ಬುಕ್ಕಾಪಟ್ಟಣ, ಹಾಗಲವಾಡಿ, ಕುರುಬರ ಹಳ್ಳಿ ಇನ್ನು ಬೇರೆ ಊರುಗಳಿಗೆ ಇವರು ಜಾನಪದ ಗೀತೆಗಳನ್ನು ಹಾಡಿದ್ದಾರೆ.
ಇದನ್ನೂ ಓದಿ: Tumkur (Sira) News: ವಿಜ್ಞಾನ ಪ್ರದರ್ಶನವು ಶೈಕ್ಷಣಿಕ ಮತ್ತು ಮನರಂಜನಾ ಕಾರ್ಯಕ್ರಮ
ಕನ್ನಡನಾಡಿನ ಸಾಂಸ್ಕೃತಿಕ ಪರಂಪರೆಯ ಜಾನಪದ ಕಲೆಯ ಜೋಗಿ ಪದಗಳನ್ನು ಹಳ್ಳಿ ಹಳ್ಳಿಗಳಲ್ಲಿ ಮನೆಯ ಮುಂದೆ ಹಾಡುವ ಮೂಲಕ ಈ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ತಾವರೆಕೆರೆ ಗ್ರಾಮದ ಸ್ವಲ್ಪ ದೂರದಲ್ಲಿರುವ ಹಂದಿ ಜೋಗಿಗಳ ಕುಟೀರಗಳಲ್ಲಿ ವಾಸ ಮಾಡುತ್ತಿರುವ ಜಾನಪದ ಕಲಾವಿದ ಸಿದ್ದಪ್ಪನವರಿಗೆ ರಾಮಾಯಣ, ಮಹಾಭಾರತ ದ ಸನ್ನಿವೇಶಗಳನ್ನು ತಮ್ಮ ಹಾಡುಗಳ ಮೂಲಕ ಹಾಡುವ ಕಲೆಯನ್ನು ಈ ಕುಟುಂಬಗಳು ಕಳೆದ ಐದು ದಶಕಗಳಿಂದ ಮಾಡುತ್ತಾ ಬಂದಿವೆ. ಇಂತಹ ಜಾನಪದ ಕಲೆಯನ್ನು ಉಳಿಸಿ ಪ್ರೋತ್ಸಾಹಿಸಲು 2023-24ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಸಿದ್ದಪ್ಪನವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಶಸ್ತಿ ಜೊತೆಗೆ 25 ಸಾವಿರ ರೂಪಾಯಿ ಗೌರವ ಧನ ಸಿಗಲಿದೆ.
ಇಂತಹ ಕಲಾವಿದರನ್ನು ಗುರ್ತಿಸಿ ಪ್ರಶಸ್ತಿ ಆಯ್ಕೆಗೆ ಸಹಕರಿಸಿದ ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಟಿ.ಬಿ. ಜಯಚಂದ್ರ ಹಾಗೂ ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಕೆಂಕೆರೆ ಮಲ್ಲಿಕಾರ್ಜುನ್ ಅವರಿಗೆ ಕಲಾಭಿಮಾನಿಗಳು ಧನ್ಯವಾದ ಅರ್ಪಿಸಿದ್ದಾರೆ.