ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Summer Lifestyle: ಸಮ್ಮರ್‌ ಸೀಸನ್‌ಗೆ ನಟಿ ಭೂಮಿ ಪಡ್ನೆಕರ್‌ ನೀಡಿದ 3 ಪರ್ಫೆಕ್ಟ್ ಸಲಹೆ

Star Summer Lifestyle: ಬಾಲಿವುಡ್‌ ನಟಿ ಭೂಮಿ ಪಡ್ನೆಕರ್‌ಗೆ ಸಮ್ಮರ್‌ ಸೀಸನ್‌ ಕೂಡ ಇಷ್ಟವಾಗುತ್ತದಂತೆ. ಈ ಸೀಸನ್‌ನಲ್ಲಿ ಸರಿಯಾದ ಲೈಫ್‌ಸ್ಟೈಲ್‌ ಪಾಲಿಸಿದಲ್ಲಿ ಎಲ್ಲರೂ ಎಂಜಾಯ್‌ ಮಾಡಬಹುದು. ಕೇವಲ ಫ್ಯಾಷನ್‌ನಲ್ಲಿ ಬದಲಾವಣೆ ತರುವುದು ಮಾತ್ರವಲ್ಲ, ಡೈಲಿ ರುಟೀನ್‌ನಲ್ಲೂ ಆರೋಗ್ಯಕರ ಬದಲಾವಣೆ ತರಬೇಕು ಎನ್ನುತ್ತಾರೆ ಅವರು.

ಸಮ್ಮರ್‌ ಸೀಸನ್‌ಗೆ ನಟಿ ಭೂಮಿ ಪಡ್ನೆಕರ್‌ ನೀಡಿದ 3 ಪರ್ಫೆಕ್ಟ್ ಸಲಹೆ

ಚಿತ್ರಗಳು: ಭೂಮಿ ಪಡ್ನೆಕರ್‌, ಬಾಲಿವುಡ್‌ ನಟಿ

- ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸಮ್ಮರ್‌ ಸೀಸನ್‌ ಕೂಡ ನನಗಿಷ್ಟ. ಯಾಕೆಂದರೆ ಈ ಸೀಸನ್‌ನಲ್ಲಿ ಬಿಂದಾಸ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಬಹುದು. ಜತೆಗೆ ಸುಲಭವಾಗಿ ಡಯಟ್‌ ಫಾಲೋ ಮಾಡಬಹುದು ಎನ್ನುತ್ತಾರೆ ಬಾಲಿವುಡ್‌ ತಾರೆ ಭೂಮಿ ಪಡ್ನೆಕರ್‌ (Star Summer Lifestyle). ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಲೈಫ್‌ಸ್ಟೈಲ್‌ ಹಾಗೂ ಫ್ಯಾಷನ್‌ ಕುರಿತ ಸಂದರ್ಶನದಲ್ಲಿ ಸಾಕಷ್ಟು ವಿಷಯಗಳನ್ನು ಹಂಚಿಕೊಳ್ಳುವುದರೊಂದಿಗೆ ಅವರು ತಮ್ಮ ಫಾಲೋವರ್ಸ್‌ಗೆ ಸಿಂಪಲ್‌ ಸಲಹೆ ಕೂಡ ನೀಡಿದ್ದಾರೆ. ಅಂದಹಾಗೆ, ಭೂಮಿ ಪಡ್ನೇಕರ್‌ ಫ್ಯಾಷನ್‌ನಲ್ಲಿ ಸಾಕಷ್ಟು ಪ್ರಯೋಗಾತ್ಮಕ ಫ್ಯಾಷನ್‌ವೇರ್‌ಗಳಿರುತ್ತವಂತೆ. ಡೈಲಿ ರುಟೀನ್‌ ಹೊರತುಪಡಿಸಿದಲ್ಲಿ, ನಾನಂತೂ ಸಾಕಷ್ಟು ಬಗೆಯ ವೈವಿಧ್ಯಮಯ ಹೊಸ ಪ್ರಯೋಗ ಮಾಡಿರುವ ಉಡುಗೆಗಳನ್ನು ಧರಿಸುತ್ತೇನೆ ಎನ್ನುತ್ತಾರೆ ಭೂಮಿ. ಇನ್ನು, ನನ್ನ ದೇಹವನ್ನು ಆದಷ್ಟೂ ನನಗೆ ಬೇಕಾದಂತೆ ಬದಲಿಸುತ್ತಿರುತ್ತೇನೆ. ಇದಕ್ಕಾಗಿ ಸೂಕ್ತ ಡಯಟ್‌ ಹಾಗೂ ವ್ಯಾಯಮ ಮಾಡುತ್ತೇನೆ ಎಂದಿದ್ದಾರೆ.

Star Summer Lifestyle 1

ಬೇಸಿಗೆಯಲ್ಲಿ ಆರೋಗ್ಯದಲ್ಲಿಯೂ ಏರುಪೇರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಆಹಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕೆಲವೊಂದು ಸಲಹೆ ಪಾಲಿಸಿದಾಗ ಆರೋಗ್ಯಯುತವಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎನ್ನುವ ನಟಿ ಭೂಮಿ ಪಡ್ನೆಕರ್‌ ಪರ್ಫೆಕ್ಟ್ ಲೈಫ್‌ಸ್ಟೈಲ್‌ಗೆ ಒಂದಿಷ್ಟು ಸಿಂಪಲ್‌ ಸಲಹೆಗಳನ್ನು ನೀಡಿದ್ದಾರೆ.

ಸಮ್ಮರ್‌ವೇರ್ಸ್‌ ಧರಿಸಿ

ಈ ಬಿರು ಬೇಸಿಗೆಯಲ್ಲಿ ಆದಷ್ಟೂ ಬ್ರಿಥಬಲ್‌ ಉಡುಗೆಗಳನ್ನು ಧರಿಸಿ. ಇಲ್ಲವಾದಲ್ಲಿ ಸ್ಕಿನ್‌ ಅಲರ್ಜಿಯಾಗಬಹುದು. ಸುಸ್ತಾಗಬಹುದು. ಕಾಟನ್‌, ಲೆನಿನ್‌ ಔಟ್‌ಫಿಟ್ಸ್‌ ಧರಿಸಿ.

Star Summer Lifestyle 2

ಸಮ್ಮರ್‌ನಲ್ಲಿ ಆರೋಗ್ಯದ ಕಡೆ ಗಮನ ನೀಡಿ

ಈ ಸೀಸನ್‌ನಲ್ಲೂ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರಿನಂಶ ಬೇಕು. ಕಡಿಮೆ ನೀರು ಕುಡಿಯುವುದರಿಂದ ಆರೋಗ್ಯವು ಹದಗೆಡುತ್ತದೆ. ಕನಿಷ್ಠ 3 ರಿಂದ 4 ಲೀಟರ್‌ ನೀರು ಕುಡಿಯುವುದನ್ನು ಮರೆಯಬೇಡಿ.

ಜಂಕ್‌ ಪುಡ್‌ ತಿನ್ನುವುದನ್ನು ಬಿಟ್ಟು ಬಿಡಿ. ಪೋಷಕಾಂಶಗಳಿಂದ ಕೂಡಿದ ಹಸಿರು ತರಕಾರಿಗಳು, ಮೊಟ್ಟೆ, ಮೀನು, ಮಾಂಸ ಸೇವನೆ ಇರಲಿ. ವಿವಿಧ ಬಗೆಯ ಹಣ್ಣುಗಳ ರುಚಿಯನ್ನು ಸವಿಯಿರಿ. ಇದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುವುದರ ಜತೆಗೆ ಆರೋಗ್ಯವು ಉತ್ತಮವಾಗಿರುತ್ತದೆ.

Star Summer Lifestyle 3

ವ್ಯಾಯಾಮ ಅಗತ್ಯ

ಬೆಳಗ್ಗೆ ವರ್ಕೌಟ್‌ ಮಾಡಲು ಸಾಧ್ಯವಾಗದಿದ್ದಲ್ಲಿ, ಸಂಜೆಯ ಸಮಯ ಬಿಡುವು ಮಾಡಿಕೊಂಡು ವರ್ಕೌಟ್‌ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ದೇಹದಲ್ಲಿರುವ ಕೊಬ್ಬು ಕೂಡ ಕರಗುವುದರ ಜತೆಗೆ ದಿನಪೂರ್ತಿ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಕೂಡ ಹೆಚ್ಚಾಗುತ್ತದೆ ಎನ್ನುತ್ತಾರೆ ಭೂಮಿ ಪಡ್ನೆಕರ್‌.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Summer Fashion: ಸಮ್ಮರ್‌ ಗ್ಲಾಮರಸ್‌ ಲುಕ್‌ಗಾಗಿ ಬಾರ್ಡಟ್‌ ಸ್ಟೈಲಿಂಗ್‌ಗೆ ಸೈ ಎಂದ ಯುವತಿಯರು!