ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Tiptur News: ಹೈವೇ ಅಧಿಕಾರಿಗಳ ಎಡವಟ್ಟು, ಸಾವಿರಾರು ಗ್ರಾಮಸ್ಥರಲ್ಲಿ ಆತಂಕ

ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಎರಡು ಬದಿಯಲ್ಲು ಸರ್ವಿಸ್ ರಸ್ತೆಗಳು ಇದ್ದು,ಅವುಗಳು ಅಂಡರ್ ಪಾಸ್ ಗಿಂತ ಎತ್ತರವಾಗಿವೆ. ಮಳೆ ಬಂದಾಗಲೆಲ್ಲ ರಸ್ತೆಯ ನೀರೆಲ್ಲ ಅಂಡರ್ ಪಾಸ್ ನಲ್ಲಿ ಆಳೆತರಕ್ಕೆ ಸ್ವಿಮ್ಮಿಂಗ್ ಪೂಲ್ ಆಗಿ ರೂಪುಗೊಳ್ಳುತ್ತದೆ. ಹಾಗಾಗಿ ಹೆದ್ದಾರಿಯ ಮೂಲಕವೇ ಹಾದು ಹೋಗಬೇಕಿದೆ. ವೇಗವಾಗಿ ಸಂಚರಿಸುವ ವಾಹನಗಳ ಕಣ್ತಪ್ಪಿಸಿ ಪ್ರಾಣ ಭಯದಿಂದಲೇ ರಸ್ತೆ ದಾಟುವುದು ದಾಟಬೇಕಿದೆ.

Tiptur News: ಹೈವೇ ಅಧಿಕಾರಿಗಳ ಎಡವಟ್ಟು, ಸಾವಿರಾರು ಗ್ರಾಮಸ್ಥರಲ್ಲಿ ಆತಂಕ

-

Profile
Ashok Nayak Oct 23, 2026 2:14 PM

ತಿಪಟೂರು: ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 206 ಬೈಪಾಸ್ ಹಾದುಹೋಗಿದ್ದು, ನಗರ ಪ್ರದೇಶ ಸಂಪರ್ಕಿಸುವ ಅಂಡರ್ ಪಾಸ್ ನಲ್ಲಿ ಪದೇ ಪದೇ ನೀರು ನಿಲ್ಲುವುದರಿಂದ ರಸ್ತೆ ದಾಟಲು ಅರಸಹಸ ಪಡಬೇಕಾಗಿದೆ ಸ್ಥಿತಿ ಸ್ಥಳೀಯರದ್ದು.

ಕಲ್ಕೆಳಗೆ,ಕೆಂಚರಾಯನಗರ,ಹೊಸ ಬಡಾವಣೆ, ಗೆದ್ದಲಹಳ್ಳಿ,ತೋಟದ ಮನೆಯವರು ಸೇರಿದಂತೆ ಸಾವಿರಾರು ಜನ ವಾಸವಿದ್ದು,ಅವರೆಲ್ಲ ಇದೇ ಅಂಡರ್ ಪಾಸ್ ಮೂಲಕ ಹಳೇಪಾಳ್ಯಕ್ಕೆ ಹೋಗಬೇಕು. ಅಂಡರ್ ಪಾಸ್ ನ ಅವ್ಯವಸ್ಥೆ ಕಂಡು ಈಗಾಗಲೇ ಅಕ್ಕ ಪಕ್ಕದ ಗ್ರಾಮಸ್ಥರು, ವ್ಯವಸ್ಥಿತವಾಗಿ ರಸ್ತೆ ಮಾಡಿಕೊಡುವಂತೆ ಹೋರಾಟಗಳನ್ನು ಮಾಡಿದರು ಕ್ಯಾರೇ ಎನ್ನದ ಎನ್.ಹೆಚ್.ಅಧಿಕಾರಿಗಳು.

ಇದನ್ನೂ ಓದಿ: Tumkur News: ಪದವಿಧರ ಕ್ಷೇತ್ರ: ಸ್ವತಂತ್ರ ಅಭ್ಯರ್ಥಿ ಚಿಕ್ಕರಾಜು ಬಿರುಸಿನ ಪ್ರಚಾರ: ಅಹಿಂದ ವರ್ಗಗಳ ಪದವಿಧರ ಮತದಾರರ ಬೆಂಬಲದ ವಿಶ್ವಾಸ

ಕಳೆದ ಬಾರಿ "ಉಪಯೋಗಕ್ಕೆ ಬಾರದ ಅಂಡರ್ ಪಾಸ್" ಎಂದು ವಿಶ್ವವಾಣಿ ಪತ್ರಿಕೆಯು ಸುದ್ದಿ ಬಿತ್ತರಿಸಿತ್ತು,ವರದಿಯ ನಂತರ ಅಂಡರ್ ಪಾಸ್‌ಗೆ ಮಳೆ ನೀರು ಹೋಗದಂತೆ ಮೇಲ್ಭಾಗಕ್ಕೆ ಸೀಟು ಗಳನ್ನು ಹಾಕಿ ವಿದ್ಯುತ್ ದೀಪಗಳ ವ್ಯವಸ್ಥೆ ಕೂಡ ಮಾಡಲಾಗಿದ್ದು,

WhatsApp Image 2026-10-23 at 11.36.32 tiptur

ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಎರಡು ಬದಿಯಲ್ಲು ಸರ್ವಿಸ್ ರಸ್ತೆಗಳು ಇದ್ದು,ಅವುಗಳು ಅಂಡರ್ ಪಾಸ್ ಗಿಂತ ಎತ್ತರವಾಗಿವೆ. ಮಳೆ ಬಂದಾಗಲೆಲ್ಲ ರಸ್ತೆಯ ನೀರೆಲ್ಲ ಅಂಡರ್ ಪಾಸ್ ನಲ್ಲಿ ಆಳೆತರಕ್ಕೆ ಸ್ವಿಮ್ಮಿಂಗ್ ಪೂಲ್ ಆಗಿ ರೂಪುಗೊಳ್ಳುತ್ತದೆ. ಹಾಗಾಗಿ ಹೆದ್ದಾರಿಯ ಮೂಲಕವೇ ಹಾದು ಹೋಗಬೇಕಿದೆ. ವೇಗವಾಗಿ ಸಂಚರಿಸುವ ವಾಹನಗಳ ಕಣ್ತಪ್ಪಿಸಿ ಪ್ರಾಣ ಭಯದಿಂದಲೇ ರಸ್ತೆ ದಾಟುವುದು ದಾಟಬೇಕಿದೆ.

ಅನೇಕ ಬಾರಿ ಸ್ಥಳೀಯ ಅಧಿಕಾರಿಗಳೊಂದಿಗೆ ಗ್ರಾಮಸ್ಥರು ಚರ್ಚಿಸಿ ಶಾಶ್ವತ ಪರಿಹಾರ ಒದಗಿಸು ವಂತೆ ಮನವಿ ಮಾಡಿದರು ಪ್ರಯೋಜನವಾಗುತ್ತಿಲ್ಲ. ಸ್ಥಳೀಯರು ಸೇರಿದಂತೆ ಅಧಿಕಾರಿಗಳು ಕರೆ ಮಾಡಿದರು ಕೂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕರೆಗಳನ್ನು ಸ್ವೀಕರಿಸದೆ ಚೆಲ್ಲಾಟ ಆಡುತ್ತಿದ್ದಾರೆ.

ಕೂಡಲೇ ಅಂಡರ್ ಪಾಸ್ ಬದಲು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ,ಕ್ರಮ ಕೈಗೊಳ್ಳದಿದ್ದರೆ ಮುಂದೆ ಹೈವೇ ಬಂದ್ ಮಾಡುವುದಾಗಿ ಎಚ್ಚರಿಸಿದ್ದಾರೆ.