ಗುಬ್ಬಿ: ಛತ್ರಪತಿ ಶಿವಾಜಿ ಮಹಾರಾಜ(Chhatrapati Shivaji Maharaja)ರು ಸ್ವರಾಜ್ಯಕ್ಕಾಗಿ ಹೋರಾಟವನ್ನು ಹುಟ್ಟು ಹಾಕಿ 'ಗೆರಿಲ್ಲಾ ಯುದ್ಧದ ಪ್ರವರ್ತಕ' ಎಂದೆನಿಸಿ ವಿಭಜಿತ ಭೂಮಿಯಲ್ಲಿ ಧಾರ್ಮಿಕ ಸಹಿಷ್ಣುತೆಯ ರಾಜ್ಯವನ್ನು ಸ್ಥಾಪಿಸಿದ ಕೀರ್ತಿ ಛತ್ರಪತಿ ಶಿವಾಜಿ ಅವರಿಗೆ ಸಲ್ಲುತ್ತದೆ ಎಂದು ಯುವ ಮುಖಂಡ ರಂಜಿತ್ ಕಾಳೆ ತಿಳಿಸಿದರು.
ತಾಲ್ಲೂಕಿನ ಮರಾಠಿಪಾಳ್ಯ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ಜೀವನ, ದಾರ್ಶನಿಕ ನಾಯಕನಿಂದ ಗೌರವಾನ್ವಿತ ರಾಜನವರೆಗಿನ ಅವರ ಪ್ರಯಾಣ ಇಂದು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಇದನ್ನೂ ಓದಿ: Gubbi News ಮಾದಾರ ಮಹಾಸಭಾದ ಕಡಬ ಹೋಬಳಿ ಘಟಕದ ಅಧ್ಯಕ್ಷರಾಗಿ ಲಕ್ಷ್ಮಣ್ ಉಪಾಧ್ಯಕ್ಷರಾಗಿ ಸುರೇಶ್ ಆಯ್ಕೆ
ಶಿವಾಜಿ ಮಹಾರಾಜರ ಧೈರ್ಯ ಮತ್ತು ಸ್ಪೂರ್ತಿದಾಯಕ ಕಾರ್ಯಗಳನ್ನು ಗೌರವಿಸ ಬೇಕಿದೆ. ಶಿವಾಜಿಯ ತಾಯಿ ಜೀಜಾಬಾಯಿ ಮತ್ತು ಮಾರ್ಗದರ್ಶಕ ದಾದಾಜಿ ಕೊಂಡದೇವ ಅವರು ಶಿವಾಜಿ ರೂಪ ನಿರ್ಮಾಣ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಚಿಕ್ಕ ವಯಸ್ಸಿನಿಂದಲೇ ಅವರಿಗೆ ಧೈರ್ಯ ಮತ್ತು ನ್ಯಾಯಯುತತೆಯಂತಹ ಮೌಲ್ಯಗಳನ್ನು ಕಲಿಸಿದ್ದರು. ಇವರ ಆದರ್ಶಗಳನ್ನು ಯುವ ಜನಾಂಗ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಾಮರಾವ್ ಕಾಳೆ ಮಾತನಾಡಿ, ಉತ್ತಮ ಮಿಲಿಟರಿ ಕೌಶಲ್ಯ ಮತ್ತು ಬುದ್ಧಿವಂತ ತಂತ್ರ ಗಳನ್ನು ಬೆಳೆಸಿಕೊಂಡಿದ್ದ ಶಿವಾಜಿ ಅವರು ತಮ್ಮ ಜನರನ್ನು ದಮನಿಸಿದ ಮೊಘಲ್ ಮತ್ತು ಆದಿಲ್ ಶಾಹಿ ಆಡಳಿತಗಾರರ ವಿರುದ್ಧ ದಿಟ್ಟ ಹೋರಾಟ ನಡೆಸಿದ್ದರು. ಅವರಲ್ಲಿನ ಧೈರ್ಯ ಮತ್ತು ನಾಯಕತ್ವವು ಅವರನ್ನು ಜನರಲ್ಲಿ ನಾಯಕನನ್ನಾಗಿ ಮಾಡಿತು. ಅವರ ಜನ್ಮದಿನಾಚರಣೆಯನ್ನು ನಿರಂತರ ಆಚರಿಸಬೇಕಿದೆ ಎಂದರು.
ಮುಖಂಡ ರಘು ಗಾಯಕ್ವಾಡ್ ಮಾತನಾಡಿ ಶಿವಾಜಿ ಸ್ಮರಣೆ ಹಿಂದೂ ಧರ್ಮದಲ್ಲಿ ವಿಶೇಷ ಗೌರವ ಪಡೆದುಕೊಂಡಿದೆ. ಅವರ ಧೈರ್ಯ ಮತ್ತು ಸ್ಥಿತಿಸ್ಥಾಪಕತ್ವದ ಮಹತ್ವವನ್ನು ಎಲ್ಲರಿಗೂ ತಿಳಿಯಪಡಿಸುವ ಅರ್ಥಪೂರ್ಣ ಜಯಂತಿ ನಡೆಯಲಿ ಎಂದರು.
ಈ ಸಂದರ್ಭದಲ್ಲಿ ಮೆರವಣಿಗೆ ಅದ್ದೂರಿಯಾಗಿ ನಡೆಸಿ ಎಲ್ಲರಿಗೂ ದಾಸೋಹ ಪ್ರಸಾದ ವಿನಿಯೋಗ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಕೃಷ್ಣೋಜಿರಾವ್ ಕಾಳೆ, ನರಸಿಂಹರಾವ್ ಗಾಯಕ್ವಾಡ್, ಮಧುರಾವ್ ಘನ್ನಿ ವಾಲೆ, ರಘು ಕಾಳೆ, ಕೃಷ್ಣಕುಮಾರ್ ಕಾಳೆ, ಹನುಮಂತರಾವ್ ಕಾಳೆ ಇತರರು ಇದ್ದರು.