ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚಿಕ್ಕನಾಯಕನಹಳ್ಳಿಯ ಬೆಸ್ಕಾಂ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

Chikkanayakanahalli News: ಚಿಕ್ಕನಾಯಕನಹಳ್ಳಿ ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಂ ಜಯಂತಿ ಆಚರಿಸಲಾಯಿತು. ಮಹಾನ್ ನಾಯಕರಿಗೆ ಗಣ್ಯರು ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಿದರು.

ಚಿಕ್ಕನಾಯಕನಹಳ್ಳಿ ಬೆಸ್ಕಾಂ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಚಿಕ್ಕನಾಯಕನಹಳ್ಳಿಯ ಬೆಸ್ಕಾಂ ಕಚೇರಿಯಲ್ಲಿ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಜಯಂತಿ ಆಚರಣೆ. -

Profile
Siddalinga Swamy Apr 14, 2026 9:49 PM

ಚಿಕ್ಕನಾಯಕನಹಳ್ಳಿ, ಏ.14: ಡಾ. ಬಿ.ಆರ್. ಅಂಬೇಡ್ಕರ್ ಎಂದರೆ ಕೇವಲ ಸೂಟು-ಬೂಟು ಧರಿಸಿದ ವ್ಯಕ್ತಿತ್ವವಲ್ಲ, ಆ ದಿರಿಸಿನ ಹಿಂದೆ ಜಗತ್ತೇ ಬೆರಗಾಗುವಂತಹ ಅಪ್ರತಿಮ ಪಾಂಡಿತ್ಯ ಹಾಗೂ ಶೋಷಿತರ ಪರವಾದ ನೋವು-ನಲಿವಿನ ಮಿಡಿತವಿತ್ತು ಎಂದು ಕೆಡಿಪಿ ಸದಸ್ಯ ಶಂಕರ್ ತಿಳಿಸಿದರು. ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಂ ಅವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾಗತಿಕ ಮಟ್ಟದ ಮೇಧಾವಿ

ಭಾರತಕ್ಕೆ ಸಂವಿಧಾನ ಬರೆಯುವ ಜವಾಬ್ದಾರಿ ಬಂದಾಗ, ನಮ್ಮ ದೇಶದ ಪ್ರಮುಖರು ದಕ್ಷಿಣ ಆಫ್ರಿಕಾದ ನಾಯಕರ ನೆರವು ಕೋರಿದ್ದರು. ಆದರೆ ಅವರು ಭಾರತದ ಧರ್ಮ, ಜಾತಿ ಮತ್ತು ಪ್ರಾಂತ್ಯಗಳ ವೈವಿಧ್ಯತೆಯನ್ನು ನೋಡಿ, 'ಇಂತಹ ಸಂಕೀರ್ಣ ದೇಶಕ್ಕೆ ಸಂವಿಧಾನ ಬರೆಯಲು ನಮ್ಮಿಂದ ಸಾಧ್ಯವಿಲ್ಲ; ನಿಮ್ಮಲ್ಲೇ ಜ್ಞಾನದ ಭಂಡಾರವಾಗಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಇದ್ದಾರೆ, ಅವರನ್ನೇ ವಿನಂತಿಸಿ' ಎಂದು ಅವರ ಹೆಸರನ್ನು ಸೂಚಿಸಿದ್ದರು. ಇದು ಅಂಬೇಡ್ಕರ್ ಅವರ ಜಾಗತಿಕ ಮಟ್ಟದ ಮೇಧಾಶಕ್ತಿಗೆ ಸಾಕ್ಷಿ" ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪ್ರಾಧ್ಯಾಪಕ ನಾಗರಾಜ್ ಮಾತನಾಡಿದರು. ಇದೇ ವೇಳೆ ಎಸ್.ಓ. ಇರ್ಫಾನ್ ಮಾತನಾಡಿ, ಸಂವಿಧಾನವು ಪ್ರತಿಯೊಬ್ಬ ಭಾರತೀಯನ ಹಕ್ಕುಗಳ ರಕ್ಷಾಕವಚ. ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಆಶಯಗಳನ್ನು ಧರ್ಮಗ್ರಂಥದಂತೆ ಗೌರವಿಸಬೇಕು ಮತ್ತು ಪೂಜಿಸಬೇಕು ಎಂದು ಕರೆ ನೀಡಿದರು.

Ambedkar Jayanti 2026: ಸಂವಿಧಾನವೇ ನಮ್ಮ ದೇಶದ ಭಗವದ್ಗೀತೆ, ಕುರಾನ್‌, ಬೈಬಲ್‌: ಡಿ.ಕೆ. ಶಿವಕುಮಾರ್‌

ಕಾರ್ಯಕ್ರಮದಲ್ಲಿ ಬೆಸ್ಕಾಂ ಎಇಇ ಗವಿರಂಗಯ್ಯ, ಹಣಕಾಸು ಅಧಿಕಾರಿ ಧನರಾಜ್, ಜೆಇ ರಕ್ಷಿತ್ ಮತ್ತು ಎಸ್.ಓ. ಮಂಜುನಾಥ್ ಉಪಸ್ಥಿತರಿದ್ದರು. ಬೆಸ್ಕಾಂ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಧ್ಯಕ್ಷರಾದ ಗೂಳೂರು ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ದಿವ್ಯ, ಚಂದ್ರಕಿರಣ್, ಮುನಿಸಿದ್ದಪ್ಪ, ಲೈನ್‌ಮನ್‌ಗಳಾದ ಧರಣಿ, ಸಿದ್ದು ಸೇರಿದಂತೆ ಇಲಾಖೆಯ ಸಿಬ್ಬಂದಿ ವರ್ಗ ಹಾಜರಿದ್ದು ಮಹಾನ್ ನಾಯಕರಿಗೆ ಪುಷ್ಪನಮನ ಸಲ್ಲಿಸಿದರು.