Gubbi News: ದೇವಾಲಯದ ಜಾಗ ಅತಿಕ್ರಮಣ : ತೆರವು ಮಾಡಲು ಗ್ರಾಮಸ್ಥರ ಆಗ್ರಹ
ದೇವಾಲಯದ ಬಳಿ ಜಮಾಯಿಸಿದ್ದ ನೂರಾರು ಭಕ್ತರು ಕಳೆದ ನಲವತ್ತು ವರ್ಷಗಳ ಹಿಂದೆ ದಾನ ವಾಗಿ ನೀಡಿದ ಜಮೀನಿನಲ್ಲಿ ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಾಲಯ ನಿರ್ಮಾಣವನ್ನು ಮಾಡಲಾಗಿತ್ತು. ಈಗ ಪಕ್ಕದ ಜಮೀನಿನ ನವೀನ್ ಕುಮಾರ್ ಮತ್ತು ಕುಟುಂಬ ದೇವಾಲಯದ ಜಾಗ ನಮ್ಮದು ಎಂದು ಅತಿಕ್ರಮಣ ಮಾಡಲು ಮುಂದಾಗಿದ್ದಾರೆ. ಪ್ರಶ್ನೆ ಮಾಡಿದರೆ ನಮ್ಮದು ಎಂದು ದಬ್ಬಾಳಿಕೆ ಮಾಡುತ್ತಾರೆ
-
ಗುಬ್ಬಿ: ತಾಲ್ಲೂಕಿನ ಹಿಂಡಿಸ್ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಲೂರು ಹೊಸಪಾಳ್ಯ ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಾಲಯದ ಸುತ್ತಲಿನ ಪ್ರಕಾರ ಸ್ಥಳವನ್ನು ತನ್ನದು ಎಂದು ಅತಿಕ್ರಮಣ ಮಾಡಿರುವ ಒಂದು ಕುಟುಂಬ ದೇವಾಲಯ ಆವರಣವನ್ನು ಒತ್ತುವರಿ ಮಾಡಿ ದನಕರುಗಳು, ಮೇಕೆಗಳು ಕಟ್ಟಿ ಹಾಕಿ ದೇವಸ್ಥಾನದ ಪಾವಿತ್ರ್ಯತೆ ಹಾಳು ಮಾಡುತ್ತಿದ್ದು, ಪ್ರಶ್ನಿಸಿದರೆ ಅವಾಚ್ಯ ಶಬ್ದಗಳಿಂದ ಜಗಳಕ್ಕೆ ಮುಂದಾಗುತ್ತಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿಗೆ ದೂರು ನೀಡಲಾಗಿದೆ. ಆದರೆ ಯಾವ ಕಾನೂನು ಕ್ರಮಕ್ಕೆ ಯಾವ ಅಧಿಕಾರಿಗಳು ಮುಂದಾಗಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು, ದೇವಾಲಯದ ಭಕ್ತರು ದಿಢೀರ್ ಪ್ರತಿಭಟನೆ ನಡೆಸಿ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.
ದೇವಾಲಯದ ಬಳಿ ಜಮಾಯಿಸಿದ್ದ ನೂರಾರು ಭಕ್ತರು ಕಳೆದ ನಲವತ್ತು ವರ್ಷಗಳ ಹಿಂದೆ ದಾನ ವಾಗಿ ನೀಡಿದ ಜಮೀನಿನಲ್ಲಿ ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಾಲಯ ನಿರ್ಮಾಣವನ್ನು ಮಾಡಲಾಗಿತ್ತು. ಈಗ ಪಕ್ಕದ ಜಮೀನಿನ ನವೀನ್ ಕುಮಾರ್ ಮತ್ತು ಕುಟುಂಬ ದೇವಾಲಯದ ಜಾಗ ನಮ್ಮದು ಎಂದು ಅತಿಕ್ರಮಣ ಮಾಡಲು ಮುಂದಾಗಿದ್ದಾರೆ. ಪ್ರಶ್ನೆ ಮಾಡಿದರೆ ನಮ್ಮದು ಎಂದು ದಬ್ಬಾಳಿಕೆ ಮಾಡುತ್ತಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: Gubbi News: ಏ.6ಕ್ಕೆ ಕಾರ್ಯ ನಿರತ ಪತ್ರಕರ್ತರ ಸಂಘದ ನೂತನ ಕಚೇರಿ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಈಗಾಗಲೇ ದೇವಾಲಯದ ಹೆಸರಿನಲ್ಲಿ ಖಾತೆ ಮಾಡಲಾಗಿದೆ. ನಲವತ್ತು ಅಡಿಗಳ ಜಾಗವನ್ನು ಒತ್ತುವರಿ ಮಾಡಿಕೊಂಡು ದೇವಾಲಯದ ಸುತ್ತಲೂ ಪ್ರಕಾರದ ಜಾಗವನ್ನು ಸ್ವಂತಕ್ಕೆ ಬಳಸಿ ಕೊಂಡು ಜಾನುವಾರು ಸಾಕಾಣಿಕೆ ಹಾಗೂ ಚಪ್ಪಲಿ ಬಿಡುವ ಸ್ಥಳ ಮಾಡಿಕೊಂಡಿದ್ದಾರೆ. ಜೊತೆಗೆ ತಮ್ಮ ವಾಹನವನ್ನು ನಿಲುಗಡೆ ಮಾಡುವ ಸ್ಥಳವಾಗಿ ಮಾಡಿಕೊಂಡು ದೇವಾಲಯವನ್ನು ಮಲೀನ ಗೊಳಿಸಿದ್ದಾರೆ ಎಂದು ಸ್ಥಳೀಯ ಗೌರಮ್ಮ ದೂರಿದರು.
ದೇವಾಲಯದ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಲು ಸಹ ಅನುವು ಮಾಡುತ್ತಿಲ್ಲ. ಯಾವು ದೇ ಅಧಿಕಾರಿಗಳು ದೇವಾಲಯದ ಒತ್ತುವರಿ ಜಾಗ ತೆರೆವು ಮಾಡಿಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿ ಗಳು ಸ್ಥಳಕ್ಕೆ ಭೇಟಿ ನೀಡಿ ನಮ್ಮ ದೇವಾಲಯದ ಸ್ಥಳವನ್ನು ಅಳತೆ ಮೂಲಕ ದೇವಾಲಯಕ್ಕೆ ಬಿಡಿಸಿ ಕೊಡಬೇಕು ಎಂದು ಸ್ಥಳೀಯ ಪರಮೇಶ್ ಪೂಜಾರ್ ಒತ್ತಾಯ ಮಾಡಿದರು.
ದಬ್ಬಾಳಿಕೆ ಮೂಲಕ ದೇವಾಲಯಕ್ಕೆ ಬರುವ ಭಕ್ತರನ್ನು ಬೆದರಿಸುವ ಜೊತೆಗೆ ದೇವಾಲಯದ ಪ್ರಕಾರ ಜಾಗದಲ್ಲಿ ಓಡಾಡುವವರ ಮೇಲೆ ಜಗಳಕ್ಕೆ ಮುಂದಾಗುತ್ತಾರೆ. ಈ ಸ್ಥಳ ನಮ್ಮದು, ದೇವಾ ಲಯಕ್ಕೆ ಸಂಬಂಧಿಸಿದ್ದು ಏನೂ ಇಲ್ಲ ಎಂಬ ಮಾತುಗಳಾಡಿ ವ್ಯಾಜ್ಯಕ್ಕೆ ಕುಟುಂಬವೇ ಬರುತ್ತದೆ. ಈ ಸಂಬಂಧ ಜಿಲ್ಲಾಡಳಿತಕ್ಕೆ ದೂರು ನೀಡಲು ಸಜ್ಜಾಗಿದ್ದೇವೆ. ಸ್ಥಳೀಯ ಗ್ರಾಮ ಪಂಚಾಯಿತಿ ಮೊದಲು ಸ್ಥಳ ಪರಿಶೀಲನೆ ಮಾಡಲಿ ಎಂದು ಪ್ರತಿಭಟನಕಾರರು ಒಕ್ಕೊರಲಿನ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯರಾದ ಜಗದೀಶ್ ಗೌಡ, ಪ್ರಕಾಶ್, ಪಾರ್ವತಮ್ಮ, ಮಂಜಮ್ಮ, ಮಲ್ಲಮ್ಮ, ಶರತ್, ರತ್ನಮ್ಮ, ವಿಮಲಮ್ಮ, ತಿಮ್ಮಕ್ಕ ಇತರರು ಇದ್ದರು.