ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gubbi News: ರಜತ ಮಹೋತ್ಸವ ಸ್ಥಾಪನಾ ದಿನಾಚರಣೆ ಆಚರಿಸಿಕೊಳ್ಳುವ ಗುಬ್ಬಿಯ ಸಿಐಟಿ ಕಾಲೇಜು

25 ವರ್ಷಗಳ ರಜತ ಮಹೋ ತ್ಸವಕ್ಕೆ ಸಕಲ ಸಜ್ಜು ನಡೆಸಿ ಪ್ರಧಾನಮಂತ್ರಿಗಳ ಸಲಹೆಗಾರರು ವಿಜ್ಞಾನ ತಾಂತ್ರಿಕ ಶಿಕ್ಷಣ ಸಾಧನೆ ಗೈದ ಡಾ.ರಿಷಿ ಮೋಹನ್ ಭಟ್ನಗಾರ್ ಹಾಗೂ ಕಿತ್ತಲೆಹಣ್ಣು ಮಾರಿ ಶಾಲೆ ಕಟ್ಟಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೆಕಾಲ್ ಹಜ್ಜಬ್ಬ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮ ಆಗಮಿಸುತ್ತಿದ್ದಾರೆ

ಸ್ಥಾಪನಾ ದಿನಾಚರಣೆ ಆಚರಿಸಿಕೊಳ್ಳುವ ಗುಬ್ಬಿಯ ಸಿಐಟಿ ಕಾಲೇಜು

-

Ashok Nayak
Ashok Nayak Nov 28, 2025 11:27 PM

ಗುಬ್ಬಿ: ತಾಂತ್ರಿಕ ಶಿಕ್ಷಣದಲ್ಲಿ ಗಣನೀಯ ಸೇವೆ ಸಲ್ಲಿಸಿ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಮಾರ್ಗ ತೋರಿ 25 ವರ್ಷ ಪೂರೈಸಿದ ಚನ್ನಬಸವೇಶ್ವರ ತಾಂತ್ರಿಕ ಕಾಲೇಜು ಇದೇ ತಿಂಗಳ 29 ರಂದು ರಜತ ಮಹೋತ್ಸವ ಸ್ಥಾಪನಾ ದಿನಾಚರಣೆ ಆಚರಿಸಿಕೊಳ್ಳುತ್ತಿದೆ ಎಂದು ಕಾಲೇಜಿನ ಆಡಳಿತ ಮುಖ್ಯಸ್ಥ ಗಿರಿಧರ್ ಕುಲಕರ್ಣಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಪ್ರತಿ ವರ್ಷ ನಾಲ್ಕು ಸಾವಿರ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಒದಗಿಸುವ ಸಿಐಟಿ ಕಾಲೇಜು ಈಗಾಗಲೇ ದೇಶದಾಂತ್ಯ ತನ್ನದೇ ಹೆಗ್ಗುರುತಿನಲ್ಲಿ ಕಾಣಿಸಿಕೊಂಡಿದೆ. 25 ವರ್ಷಗಳ ರಜತ ಮಹೋ ತ್ಸವಕ್ಕೆ ಸಕಲ ಸಜ್ಜು ನಡೆಸಿ ಪ್ರಧಾನಮಂತ್ರಿಗಳ ಸಲಹೆಗಾರರು ವಿಜ್ಞಾನ ತಾಂತ್ರಿಕ ಶಿಕ್ಷಣ ಸಾಧನೆ ಗೈದ ಡಾ.ರಿಷಿ ಮೋಹನ್ ಭಟ್ನಗಾರ್ ಹಾಗೂ ಕಿತ್ತಲೆಹಣ್ಣು ಮಾರಿ ಶಾಲೆ ಕಟ್ಟಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೆಕಾಲ್ ಹಜ್ಜಬ್ಬ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮ ಆಗಮಿಸುತ್ತಿದ್ದಾರೆ ಎಂದರು.

ಇದನ್ನೂ ಓದಿ: Gubbi News: ಗುಬ್ಬಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಲೋಕಾರ್ಪಣೆ

ಅಂತರಾಷ್ಟ್ರೀಯ ಕೌಶಲ್ಯ ವಿಭಾಗದ ಸಲಹೆಗಾರ ಡಾ.ಆನಂದ್ ಕೆ.ಜೋಷಿ, ಮಾಜಿ ಸಂಸದ, ಸಿಐಟಿ ಕಾಲೇಜು ಚೇರ್ಮನ್ ಜಿ.ಎಸ್.ಬಸವರಾಜು ವಿಶೇಷ ಆಹ್ವಾನಿತರಾಗಿ ಸಿಐಟಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ, ಶಾಸಕ ಜಿ.ಬಿ.ಜ್ಯೋತಿ ಗಣೇಶ್, ನಿರ್ದೇಶಕ ಡಾ.ಡಿ.ಎಸ್.ಸುರೇಶ್, ಉಪ ಪ್ರಾಚಾರ್ಯ ರಾದ ಡಾ.ಸಿ.ಪಿ.ಶಾಂತಲಾ ಉಪಸ್ಥಿತಿಯಲ್ಲಿ ಬೆಳಿಗ್ಗೆ 10.30 ಕ್ಕೆ ರಜತ ಮಹೋತ್ಸವ ಸ್ಥಾಪನಾ ಕಾರ್ಯಕ್ರಮ ಹಾಗೂ 2025-26 ನೇ ಸಾಲಿನ ಪ್ರಥಮ ವರ್ಷದ ಬಿಇ ತರಗತಿಗಳ ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ 2.30 ಕ್ಕೆ ಕನ್ನಡ ರಾಜ್ಯೋತ್ಸವ ಹಾಗೂ ಸಂಜೆ 6.30 ಕ್ಕೆ ಸಂಗೀತ ಸಂಜೆ ಕಾರ್ಯಕ್ರಮವನ್ನು ಗಾಯಕ ಕಂಬದ ರಂಗಯ್ಯ ತಂಡ ನಡೆಸಿಕೊಡಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪಿ ಆರ್ ಓ ಶ್ರೀಹರ್ಷ ಇದ್ದರು.