ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tumkur (Chikkanayakanahalli) News: ನೂರು ಕೋಟಿ ವೆಚ್ಚದಲ್ಲಿ ಗುಣಮಟ್ಟದ ಸಿಸಿ ರಸ್ತೆ ನಿರ್ಮಾಣ: ಶಾಸಕ ಸಿ.ಬಿ.ಸುರೇಶ್ ಬಾಬು

ರಸ್ತೆ ಕಾಮಗಾರಿ ನಡೆಯುವಾಗ ನಾಗರೀಕರು ಸ್ವಲ್ಪ  ಅಗಲೀಕರಣಕ್ಕೆ ಸಹಕಾರ ನೀಡಬೇಕು  ಯಾವುದೇ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡಬೇಡಿ ಎಂದ ಅವರು  ಈ ಹಿಂದೆ ಹಲ ವಾರು ವರ್ಷಗಳಿಂದ  ನೆನೆಗುದಿಗೆ ಬಿದ್ದಿದ್ದಂತಹ ಈ ಯೋಜನೆಯ ಬಗ್ಗೆ  2012ರಲ್ಲೆ ಈ ಅಭಿವೃದ್ದಿ ಕೆಲಸಗಳಿಗೆ ನಾನು ಅಂದಿನ ಜಿಲ್ಲಾಧಿಕಾರಿ ರಾಜು ಅವರೊಂದಿಗೆ ಚರ್ಚಿಸಿ ಮೂರು ಸಾವಿರ ಕೋಟಿ ಹಣಕ್ಕೆ ಯೋಜನೆ ಮಾಡಿದ್ದು ಅದರಂತೆ ಕೆ.ಬಿ.ಕ್ರಾಸ್ ನಲ್ಲಿ ಒಂದು ನೂರು ಕೋಟಿಯಲ್ಲಿ ಮಲ್ಟಿ ಸ್ಪೆಷಾಲಿಟಿ ಹಾಸ್ಪೆಟ ಲ್ ಮಾಡಿದರೆ ಎರಡು ರಸ್ತೆಗಳಿಗೆ ಅನುಕೂಲವಾಗುತ್ತದೆ

ನೂರು ಕೋಟಿ ವೆಚ್ಚದಲ್ಲಿ ಗುಣಮಟ್ಟದ ಸಿಸಿ ರಸ್ತೆ ನಿರ್ಮಾಣ

ಸಾಲ್ಕಟ್ಟೆ ಕ್ರಾಸ್ ನಿಂದ ಸಾದರಹಳ್ಳಿ, ಕಂದಿಕೆರೆ ಮಾರ್ಗವಾಗಿ ಕಣಿವೆ ಕ್ರಾಸ್ ವರೆಗೆ 33.70ಕೋಟಿ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಯನ್ನು ಶಾಸಕ ಸಿ.ಬಿ.ಸುರೇಶ್ ಬಾಬು ನೆರವೇರಿಸಿದರು.

Profile Ashok Nayak May 16, 2025 12:38 PM

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನಲ್ಲಿ ವಿವಿಧ ಭಾಗಗಳಲ್ಲಿ ಗಣಿಬಾಧಿತ ಪ್ರದೇಶಾಭಿವೃದ್ದಿ ಯೋಜನೆಯಡಿ ನೂರು ಕೋಟಿವೆಚ್ಚದಲ್ಲಿ ಸುಮಾರು 90 ಕಿ.ಮೀ ಸಿಸಿ ರಸ್ತೆಯನ್ನು ನಿರ್ಮಿಸ ಲಾಗುವುದು ಇದರ ಉಪಯೋಗವನ್ನು ಈ ಭಾಗದ ಜನರು ಪಡೆಯಬಹುದಾಗಿದ್ದು ಕಾಮಗಾರಿಗಳು ನಡೆಯುವಾಗ ಸ್ಥಳಿಯರು ಗಮನಹರಿಸಿ ಉತ್ತಮವಾದ ರಸ್ತೆಯನ್ನುಮಾಡಲು ಸಹಕಾರ ನೀಡಿ ಎಂದು ಶಾಸಕ ಸಿ.ಬಿ.ಸುರೆಶ್ ಬಾಬು ತಿಳಿಸಿದರು. ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಸಿಸಿರಸ್ತೆಗಳಿಗೆ ಗುದ್ದಲಿಪೂಜೆ ನೆರೆವೆರೆಸಿ ಮಾತನಾಡಿದ ಅವರು ಮುಂದಿನ ಸುಮಾರು ಮೂವತ್ತರಿಂದ ನಲವತ್ತು ವರ್ಷಗಳು ಬಾಳಿಕೆ ಬರುವಂತಹ ಗುಣಮಟ್ಟದ ಸಿ.ಸಿ.ರಸ್ತೆಗಳನ್ನು ನಿರ್ಮಿಸಲು ಕ್ರಮಕೈಗೊಳ್ಳ ಲಾಗಿದೆ.

ರಸ್ತೆ ಕಾಮಗಾರಿ ನಡೆಯುವಾಗ ನಾಗರೀಕರು ಸ್ವಲ್ಪ  ಅಗಲೀಕರಣಕ್ಕೆ ಸಹಕಾರ ನೀಡಬೇಕು  ಯಾವುದೇ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡಬೇಡಿ ಎಂದ ಅವರು  ಈ ಹಿಂದೆ ಹಲ ವಾರು ವರ್ಷಗಳಿಂದ  ನೆನೆಗುದಿಗೆ ಬಿದ್ದಿದ್ದಂತಹ ಈ ಯೋಜನೆಯ ಬಗ್ಗೆ  2012ರಲ್ಲೆ ಈ ಅಭಿವೃದ್ದಿ ಕೆಲಸಗಳಿಗೆ ನಾನು ಅಂದಿನ ಜಿಲ್ಲಾಧಿಕಾರಿ ರಾಜು ಅವರೊಂದಿಗೆ ಚರ್ಚಿಸಿ ಮೂರು ಸಾವಿರ ಕೋಟಿ ಹಣಕ್ಕೆ ಯೋಜನೆ ಮಾಡಿದ್ದು ಅದರಂತೆ ಕೆ.ಬಿ.ಕ್ರಾಸ್ ನಲ್ಲಿ ಒಂದು ನೂರು ಕೋಟಿಯಲ್ಲಿ ಮಲ್ಟಿ ಸ್ಪೆಷಾಲಿಟಿ ಹಾಸ್ಪೆಟಲ್ ಮಾಡಿದರೆ ಎರಡು ರಸ್ತೆಗಳಿಗೆ ಅನುಕೂಲವಾಗುತ್ತದೆ ಎಂಬ ದೃಷ್ಠಿಯಿಂದ ಮಾಡಿದ್ದು ಇದಕ್ಕೆಲ್ಲ ಸರ್ವೋಚ್ಛ ನ್ಯಾಯಾಲಯ ಕಡಿವಾಣ ಹಾಕಿ ಈಗ 1200 ಕೋಟಿ ನಮ್ಮ ತಾಲ್ಲೂಕಿಗೆ ಬಿಡುಗಡೆ ಮಾಡಿದ್ದು ಅದರಲ್ಲಿ ಸುಮಾರು 400ಕೋಟಿ ರಸ್ತೆಗೆ ಬಿಡುಗಡೆ ಮಾಡಿದೆ ಇನ್ನು ಉಳಿದಂತೆ ಎಲ್ಲಾ ಇಲಾಖೆಗಳಿಗೆ ಹಂಚಿಕೆ ಮಾಡಿದ್ದು ಇದರಿಂದ ನಮ್ಮ ಭಾಗಕ್ಕೆ ಅನುಕೂಲ ವಾಗಲಿದೆ ಎಂದ ಅವರು ಇದು ನಿಮ್ಮ ಕೆಲಸ ನೀಮ್ಮ ಜವಾಬ್ದಾರಿಯಿಂದ ಮಾಡಿಸಿಕೊಳ್ಳಿ ಎಂದರು. 

ಇದನ್ನೂ ಓದಿ: Chikkanayakanahalli News: ಪ್ರತಿಯೊಬ್ಬರೂ ನೀರಿನ ರಕ್ಷಣಾ ಕ್ರಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ

ಸೊಂಡೆನಹಳ್ಳಿ ಗೊಲ್ಲರಹಟ್ಟಿಯಿಂದ ಬಾಣದೇವರ ಹಟ್ಟಿಯವರೆಗೆ 8.25ಕೋಟಿ ವೆಚ್ಚದಲ್ಲಿ ಸಿ.ಸಿ.ರಸ್ತೆ, ಗೋಡೆಕೆರೆ ಗೇಟ್ ನಿಂದ ಗೋಡೆಕೆರೆ ಮಾರ್ಗವಾಗಿ ಬೈರಲಿಂಗನಹಳ್ಳಿ ವರೆಗೆ 17.31ಕೋಟಿ ವೆಚ್ಚದಲ್ಲಿ ಸಿ.ಸಿ.ರಸ್ತೆ, ರಂಗನಾಥಪುರದಿಂದ ಮೈನಿಂಗ್ ಏರಿಯಾದವರೆಗೆ 12.27ಕೋಟಿ ವೆಚ್ಚದಲ್ಲಿ ಸಿ.ಸಿ.ರಸ್ತೆ,  ಗುಡ್ಡದಪಾಳ್ಯದಿಂದ ಬುಳ್ಳೇನಹಳ್ಳಿ ಮಾರ್ಗವಾಗಿ ರಂಗನಾಥಪುರದವರೆಗೆ 23.37ಕೋಟಿ ವೆಚ್ಚದಲ್ಲಿ ಸಿಸಿ.ರಸ್ತೆ , ಭಾವನಹಳ್ಳಿ ಯಿಂದ ಗೊಲ್ಲರಹಳ್ಳಿಯವರೆಗೆ 5.30ಕೋಟಿ ವೆಚ್ಚದಲ್ಲಿ ಸಿ.ಸಿ. ರಸ್ತೆ, ಸಾಲ್ಕಟ್ಟೆ ಕ್ರಾಸ್ ನಿಂದ ಸಾದರಹಳ್ಳಿ, ಕಂದಿಕೆರೆ ಮಾರ್ಗವಾಗಿ ಕಣಿವೆ ಕ್ರಾಸ್ ವರೆಗೆ 33.70 ಕೋಟಿ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಲೋಕೋಪಯೋಗಿ ಇಲಾಖೆಯ ಎಇಇ ತಿಮ್ಮಯ್ಯ ಮಾತನಾಡಿ ಉತ್ತಮ ಗುಣಮಟ್ಟದಲ್ಲಿ ರಸ್ತೆ ನಿರ್ಮಾಣವಾಗಲಿದ್ದು ಈಗಿರುವಂತಹ ರಸ್ತೆಯು ಸ್ವಲ್ಪ ಮಟ್ಟಿಗೆ ಅಗಲವಾಗಲಿದ್ದು ಗ್ರಾಮಗಳು ಸಿಗುವಂತಹ ಜಾಗದಲ್ಲಿ ಸಿಸಿ ಚರಂಡಿಗಳನ್ನು ನಿರ್ಮಿಸಲಾಗುವುದು ಯಂತ್ರಗಳಿಂದ ಕಾಮಗಾರಿಯು ನಡೆಯಲಿದ್ದು ಜನರು ಕಾಮಗಾರಿಯ ವೇಳೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. 

ಈ ಸಂದರ್ಭದಲ್ಲಿ ಗೊಡೆಕೆರೆ ಗ್ರಾ.ಪಂ.ಅಧ್ಯಕ್ಷೆ ತೇಜಸ್ವಿನಿ, ಸದಸ್ಯೆ ರೂಪ, ಹೊನ್ನೇಬಾಗಿ ಗ್ರಾ.ಪಂ. ಪಲ್ಲವಿಮಂಜುನಾಥ್, ಕಂದಿಕೆರೆ ಗ್ರಾ.ಪಂ.ಅದ್ಯಕ್ಷೆ ನಾಗಮ್ಮ, ಉಪಾದ್ಯಕ್ಷ ಪ್ರದೀಪ್ ಕುಮಾರ್,  ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಹೆಚ್.ಆರ್.ಶಶಿಧರ್, ಪುರಸಭಾಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಸುರೇಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.