ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tumkur News: ಡಿ.27ಕ್ಕೆ ಸಂಸ್ಕೃತಿ ಚಿಂತನ ಚಾರಣ ಕಾರ್ಯಕ್ರಮ

ತಲ್ಲಣದಲ್ಲಿರುವ ಯುವ ಮನಸ್ಸುಗಳಿಗೆ ತಿಳಿ ಹೇಳುವ ನಿಟ್ಟಿನಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ತಲ್ಲಣಿಸದಿರುವ ಮನವೇ ಕಾರ್ಯಕ್ರಮ ಬಹಳ ಮೆಚ್ಚುಗೆ ಪಡೆದಿದೆ. ಇದುವರೆಗೂ ನಾಲ್ಕು ಕಾರ್ಯಕ್ರಮಗಳ ಜರುಗಿದ್ದು, ಶ್ರೀದೇವಿ ಮೆಡಿಕಲ್‌ ಕಾಲೇಜು ಸಭಾಂಗಣದಲ್ಲಿ ಡಿ.27ರ ಶನಿವಾರ ನಡೆಯುವುದು 5ನೇ ಕಾರ್ಯಕ್ರಮವಾಗಿದೆ

Tumkur News:  ಡಿ.27ಕ್ಕೆ ಸಂಸ್ಕೃತಿ ಚಿಂತನ ಚಾರಣ ಕಾರ್ಯಕ್ರಮ

-

Ashok Nayak
Ashok Nayak Dec 25, 2025 4:57 PM

ತುಮಕೂರು: ಕನಕದಾಸರ ಕೀರ್ತನೆ ತಲ್ಲಣಿಸದಿರುವ ಮನವೇ ಎಂಬ ಶೀರ್ಷಿಕೆಯೊಂದಿಗೆ ರಾಜ್ಯಾ ದ್ಯಂತ ವಿನೂತನ ಸಂಸ್ಕೃತಿ ಚಿಂತನ ಚಾರಣ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ನಗರ ದಲ್ಲಿ ಡಿ.27ರಂದು ಶನಿವಾರ ಶ್ರೀದೇವಿ ಮೆಡಿಕಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ತಿಳಿಸಿದರು.

ಸುದ್ದಿಗೋಷ್ಠ್ಟಿಯಲ್ಲಿ ಮಾತನಾಡಿದ, ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಜಾತಿ, ವರ್ಗ, ವರ್ಣ, ಲಿಂಗ ಭೇದವಿಲ್ಲದೆ ಎಲ್ಲಾ ಸಮುದಾಯಗಳ, ಅದರಲ್ಲಿಯೂ ಹಿಂದುಳಿದ ಸಮುದಾಯಗಳ ಸಾಮಾಜಿಕ ಏಳಿಗೆಗೆ ನಿರಂತರವಾಗಿ ಪ್ರಯತ್ನಿಸುತ್ತಿದ್ದು ಇದರ ಮುಂದುವರೆದ ಭಾಗವೇ ತಲ್ಲಣ್ಣಿಸ ದಿರು ಮನವೆ ಕಾರ್ಯಕ್ರಮವಾಗಿದೆ ಎಂದರು.

ಇದನ್ನೂ ಓದಿ: Tumkur News: ಕಾರ್ಯ ಒತ್ತಡ ನಡುವೆ ಖಾಸಗಿ ಬದುಕಿಗೂ ಆದ್ಯತೆ ನೀಡಿ

ಸಂಯೋಜಕ ಡಾ.ಮಂಜಪ್ಪ ಮಾಗೋಡಿ ಮಾತನಾಡಿ, ತಲ್ಲಣದಲ್ಲಿರುವ ಯುವ ಮನಸ್ಸುಗಳಿಗೆ ತಿಳಿ ಹೇಳುವ ನಿಟ್ಟಿನಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ತಲ್ಲಣಿಸದಿರುವ ಮನವೇ ಕಾರ್ಯಕ್ರಮ ಬಹಳ ಮೆಚ್ಚುಗೆ ಪಡೆದಿದೆ.ಇದುವರೆಗೂ ನಾಲ್ಕು ಕಾರ್ಯಕ್ರಮಗಳ ಜರುಗಿದ್ದು, ಶ್ರೀದೇವಿ ಮೆಡಿಕಲ್‌ಕಾಲೇಜು ಸಭಾಂಗಣದಲ್ಲಿ ಡಿ.27ರ ಶನಿವಾರ ನಡೆಯುವುದು 5ನೇ ಕಾರ್ಯ ಕ್ರಮವಾಗಿದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀರಾಮಕೃಷ್ಣವಿವೇಕಾನಂದ ಆಶ್ರಮದ ಡಾ. ವೀರೇಶಾ ನಂದ ಸರಸ್ವತಿ ಸ್ವಾಮೀಜಿ ವಹಿಸಲಿದ್ದು, ಶ್ರೀಕ್ಷೇತ್ರ ಕಾಗಿನೆಲೆ ಗುರುಪೀಠದಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮಿಜಿ ಅವರ ಘನ ಉಪಸ್ಥಿತಿಯಲ್ಲಿ, ಉದ್ಯೋಗ ಸಿರಿ ಕಾರ್ಯಕ್ರಮವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಉದ್ಘಾಟಿಸುವರು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಡಾ.ರಮಣ್ ಹುಲಿನಾಯ್ಕರ್, ಡಾ.ಲಾವಣ್ಯ ರಮಣ್ ಹುಲಿನಾಯ್ಕರ್, ರೇವಣಸಿದ್ದೇಶ್ವರ ಮಠದ ಶ್ರೀ ಬಿಂದುಶೇಖರ್‌ ಓಡೆಯರ್, ಮುಖಂಡರಾದ ಟಿ.ಇ.ರಘುರಾಮ್, ಕೆಂಪರಾಜು, .ಧರ್ಮರಾಜ್, ಸುನಿತ ,ರೇಣುಕಾ ಪ್ರಸಾದ್, ಲಕ್ಷ್ಮೀನರಸಿಂಹರಾಜು, ಇಂದ್ರ ಕುಮಾರ್, ಬಸವರಾಜು, ಚಿಕ್ಕಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.