ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MLA M.T.Krishnappa: ಪ್ರಜಾಪ್ರಭುತ್ವ ಎತ್ತಿ ಹಿಡಿಯುವ ಕೆಲಸ ಪತ್ರಕರ್ತರದ್ದು: ಎಂ.ಟಿ.ಕೃಷ್ಣಪ್ಪ

ಸಮಾಜದ ಆಗು ಹೋಗುಗಳ ಬಗ್ಗೆ ನಿಖರ ಮಾಹಿತಿ ನೀಡುವ ಜೊತೆಗೆ ಯಾವುದೇ ವಿಚಾರದ ಸತ್ಯಾ ಸತ್ಯತೆ ಬಿತ್ತರಿಸುವ ಕೆಲಸ ಮಾಧ್ಯಮದವರು ಮಾಡುತ್ತಾರೆ. ತಾಲ್ಲೂಕಿನಲ್ಲಿ ನಡೆಯುವ ಸಣ್ಣ ವಿಚಾರ ದಿಂದ ದೊಡ್ಡ ವಿಚಾರಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವ ಮಾಧ್ಯಮ ಕ್ಷೇತ್ರಕ್ಕೆ ತನ್ನದೇ ಕಚೇರಿ ಅವಶ್ಯವಿದೆ. ಭ್ರಷ್ಟಾಚಾರ ವಿರೋಧಿಗಳಾಗಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪತ್ರಕರ್ತರು ಪಣ ತೊಡಬೇಕು

ಪ್ರಜಾಪ್ರಭುತ್ವ ಎತ್ತಿಹಿಡಿಯುವ ಕೆಲಸ ಪತ್ರಕರ್ತರದ್ದು: ಎಂ.ಟಿ.ಕೃಷ್ಣಪ್ಪ

-

Profile
Ashok Nayak Apr 7, 2026 8:34 PM

ಗುಬ್ಬಿ: ಸಮಾಜದಲ್ಲಿ ಪ್ರಜಾಪ್ರಭುತ್ವ ಮೌಲ್ಯ ಎತ್ತಿ ಹಿಡಿಯುವ ಕೆಲಸ ಪತ್ರಕರ್ತರು ಮಾಡುತ್ತಾರೆ. ಅವರಿಗೆ ಕಚೇರಿ ಸರ್ಕಾರವೇ ನಿರ್ಮಿಸಿ ಕೊಡಬೇಕು ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ( Turuvekere MLA M.T.Krishnappa) ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಆರಂಭವಾದ ನೂತನ ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಕಚೇರಿ ಉದ್ಘಾಟಿಸಿ ಮಾತನಾಡಿ, ಪತ್ರಕರ್ತರು ಸಮಾಲೋಚನೆ ಮಾಡಿಕೊಳ್ಳಲು ಸೂಕ್ತ ಕಚೇರಿ ಅವಶ್ಯವಿದೆ. ಅದನ್ನು ಈಗ ತಾಲ್ಲೂಕು ಘಟಕ ಆರಂಭಿಸಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.

ಇದನ್ನೂ ಓದಿ: Gubbi News: ಕೋಟೆ ಶ್ರೀ ದುರ್ಗಾಪರಮೇಶ್ವರಿ ಜಾತ್ರಾ ಮಹೋತ್ಸವ

ಸಮಾಜದ ಆಗು ಹೋಗುಗಳ ಬಗ್ಗೆ ನಿಖರ ಮಾಹಿತಿ ನೀಡುವ ಜೊತೆಗೆ ಯಾವುದೇ ವಿಚಾರದ ಸತ್ಯಾ ಸತ್ಯತೆ ಬಿತ್ತರಿಸುವ ಕೆಲಸ ಮಾಧ್ಯಮದವರು ಮಾಡುತ್ತಾರೆ. ತಾಲ್ಲೂಕಿನಲ್ಲಿ ನಡೆ ಯುವ ಸಣ್ಣ ವಿಚಾರದಿಂದ ದೊಡ್ಡ ವಿಚಾರಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವ ಮಾಧ್ಯಮ ಕ್ಷೇತ್ರಕ್ಕೆ ತನ್ನದೇ ಕಚೇರಿ ಅವಶ್ಯವಿದೆ. ಭ್ರಷ್ಟಾಚಾರ ವಿರೋಧಿಗಳಾಗಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪತ್ರಕರ್ತರು ಪಣ ತೊಡಬೇಕು ಎಂದು ಕರೆ ನೀಡಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ಪತ್ರಕರ್ತರು ತಾಲ್ಲೂಕಿನಲ್ಲಿ ನಡೆಯುವ ಎಲ್ಲಾ ವಿಚಾರವನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಸಮಾಜದಲ್ಲಿ ಪತ್ರಕರ್ತರ ಕೆಲಸ ಪವಿತ್ರ ಎನಿಸಿದೆ. ಬಡವರ ಪರ ನಿಂತು ನ್ಯಾಯ ಒದಗಿಸುವ ಕೆಲಸದಿಂದ ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳನ್ನು ತಪ್ಪಿತಸ್ಥರನ್ನಾಗಿ ನಿಲ್ಲಿಸುವ ಶಕ್ತಿ ಪತ್ರಕರ್ತರಿಗೆ ಇದೆ. ಕಾನೂ ನು ಸುವ್ಯವಸ್ಥೆ ಕಾಪಾಡುವ ಕೆಲಸ ಪೊಲೀಸರಷ್ಟೇ ಪತ್ರಕರ್ತರಿಗೂ ಜವಾಬ್ದಾರಿ ಇದೆ ಎಂದರು.

ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಡಿ.ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ದೊಡ್ಡಗುಣಿ, ಜಿಲ್ಲಾ ನಿರ್ದೇಶಕ ಯೋಗೀಶ್ ಮೆಳೆಕಲ್ಲಹಳ್ಳಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕೆ.ಸಂಜಯ್, ಖಜಾಂಚಿ ಆನಂದ್ ದೀಕ್ಷಿತ್, ಜೆಡಿಎಸ್ ಮುಖಂಡರಾದ ಬೋರಪ್ಪನಹಳ್ಳಿ ಕುಮಾರ್, ಜಗದೀಶ್, ಗಿರೀಶ್ ಇನ್ನಿತರರು ಇದ್ದರು.