ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತುಮಕೂರು ಜಿಲ್ಲೆ ಅಭಿವೃದ್ಧಿಗೆ ಗೃಹಸಚಿವ ಪರಮೇಶ್ವರ್ ಕೊಡುಗೆ ಏನು?; ಬಹಿರಂಗ ಚರ್ಚೆಗೆ ಕೆಆರ್‌ಎಸ್‌ ಪಕ್ಷ ಆಹ್ವಾನ

ತುಮಕೂರು ಜಿಲ್ಲೆಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಅಕ್ರಮಗಳ ಬಗ್ಗೆ ನಮ್ಮ ಬಳಿ ದಾಖಲೆಗಳಿದೆ. ಈ ವಿಷಯಗಳ ಕುರಿತು ಬಹಿರಂಗ ಚರ್ಚೆ ನಡೆಸಲು ನೀವು ಸ್ಥಳ ಮತ್ತು ದಿನಾಂಕವನ್ನು ನಿಗದಿಪಡಿಸಬೇಕು ಗೃಹ ಸಚಿವ ಜಿ.ಪರಮೇಶ್ವರ್‌ ಅವರಿಗೆ ಕೆಆರ್‌ಎಸ್‌ ಪಕ್ಷ ಆಗ್ರಹಿಸಿದೆ.

ಅಭಿವೃದ್ಧಿ ಬಗ್ಗೆ ಪರಮೇಶ್ವರ್ ಬಹಿರಂಗ ಚರ್ಚೆಗೆ ಬರಲಿ: ಕೆಆರ್‌ಎಸ್‌ ಪಕ್ಷ

ತುಮಕೂರಿನಲ್ಲಿ ಕೆಆರ್‌ಎಸ್‌ ಪಕ್ಷದ ಮುಖಂಡರಿಂದ ಸುದ್ದಿಗೋಷ್ಠಿ. -

Prabhakara R
Prabhakara R Apr 19, 2026 7:54 PM

ತುಮಕೂರು: ಗೃಹಸಚಿವ ಪರಮೇಶ್ವರ್ (Minister Parameshwar( ಅವರು ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕುರಿತು ಶ್ವೇತಪತ್ರ ಹೊರಡಿಸಿ ಮತ್ತು ಬಹಿರಂಗ ಚರ್ಚೆಗೆ ಬರಲಿ ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ ಆಹ್ವಾನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಕುರಿತು ಸಚಿವರು ಸ್ಪಷ್ಟ ಮಾಹಿತಿ ನೀಡಲಿ, ರಾಜ್ಯದಲ್ಲಿ ಎಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳು ಇವೆಯೋ, ಅಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಿಲ್ಲ ಎಂಬುದು ಗಮನಾರ್ಹ ಸಂಗತಿ. ಇದಲ್ಲದೆ, ಜಿಲ್ಲೆಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಸಂಭವಿಸಿರುವ ಅಕ್ರಮಗಳ ಬಗ್ಗೆ ನಮ್ಮ ಬಳಿ ದಾಖಲೆಗಳಿದೆ. ಈ ವಿಷಯಗಳ ಕುರಿತು ಬಹಿರಂಗ ಚರ್ಚೆ ನಡೆಸಲು ನೀವು ಸ್ಥಳ ಮತ್ತು ದಿನಾಂಕವನ್ನು ನಿಗದಿಪಡಿಸಬೇಕು ಸಚಿವರಿಗೆ ಆಗ್ರಹಿಸಿದರು.

ಜಿಲ್ಲಾಧಿಕಾರಿ ಡಿಜಿಟರ್ ಸಹಿಯ ದುರ್ಬಳಕೆ ಪ್ರಕರಣದಲ್ಲಿ ಇನ್ನೂ ಕ್ರಿಮಿನಲ್ ಪ್ರಕರಣ ದಾಖಲಿಸದಿರುವುದು, ಸಾರ್ವಜನಿಕ ಹಕ್ಕುಗಳನ್ನು ಕಸಿದುಕೊಂಡಿದ್ದಾರೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ನಡೆದ ಲಾಕಪ್ ಡೆತ್ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಂಡಿಲ್ಲ, ಲಂಚದ ಆರೋಪದ ವಿಡಿಯೊಗಳಿದ್ದರೂ ಕ್ರಮ ಜರುಗಿಸಿಲ್ಲ ಹಾಗೂ ಹಲವು ಪ್ರಕರಣಗಳಲ್ಲಿ ನಿರ್ಲಕ್ಷ್ಯ ತೋರಲಾಗಿದೆ. ನಿಮ್ಮ ಕೆಲಸಕ್ಕೆ ಒತ್ತಡವಿದ್ದರೆ ರಾಜೀನಾಮೆ ನೀಡಿ ಎಂದು ಎಸ್‌ಪಿಗೆ ಒತ್ತಾಯಿಸಿದರು.

ಇಲಾಖೆಯ ಕಾರ್ಯವೈಖರಿಯಿಂದ ಸಾರ್ವಜನಿಕರಲ್ಲಿ ಆಸಮಾಧಾನ ಹೆಚ್ಚುತ್ತಿದೆ. ಜಿಲ್ಲಾಧಿಕಾರಿ ಡಿಜಿಟಲ್ ಸಹಿ ದುರ್ಬಳಕೆ ಪ್ರಕರಣದ ತನಿಖಾ ವರದಿ ಇನ್ನೂ ಹೊರಬಂದಿಲ್ಲವಿರುವುದೇಕೆ, ಜಿಲ್ಲೆಯಲ್ಲಿ ಜನಸ್ಪಂದನಾ ಕಾರ್ಯಕ್ರಮಗಳಲ್ಲಿ ಸ್ವೀಕರಿಸಿದ ಅರ್ಜಿಗಳ ವಿವರಗಳು ಏನು, ಕಳೆದ ಮೂರು ವರ್ಷಗಳಲ್ಲಿ ದಲಿತರು ಹಾಗೂ ಭೂರಹಿತರಿಗೆ ಎಷ್ಟು ನಿದೇಶನಗಳನ್ನು ನೀಡಲಾಗಿದೆ ಎಂಬುದನ್ನು ಉಸ್ತುವಾರಿ ಸಚಿವರು ತಿಳಿಸಬೇಕು ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ದೀಪಕ್, ರಾಜ್ಯ ಎಸ್ಸಿ ಎಸ್‌ಟಿ ಘಟಕದ ಪ್ರಧಾನ ಕಾರ್ಯದರ್ಶಿ ನರಸಿಂಹರಾಜು, ಜಿಲ್ಲಾ ಉಪಾಧ್ಯಕ್ಷ ಪ್ರದೀಪ್ ಕುಮಾರ್, ರವಿಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Women's Reservation Bill: ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಎಂದೂ ವಿರೋಧ ಮಾಡಿಲ್ಲ ಎಂದ ಸಿಎಂ

ಸಚಿವರ ಬೆಂಬಲಿಗರಿಂದ ಪ್ರತಿಭಟನೆ

ಪತ್ರಿಕಾಗೋಷ್ಠಿ ನಡೆಯುವ ಮುನ್ನ ಗೃಹ ಸಚಿವರ ಬೆಂಬಲಿಗರು ಪತ್ರಿಕಾ ಭವನದ ಮುಂದೆ ಪ್ರತಿಭಟನೆ ನಡೆಸಿ, ಕೆಆರ್‌ಎಸ್ ಪಕ್ಷವು ಪತ್ರಿಕಾಗೋಷ್ಠಿ ನಡೆಸಬಾರದು ಎಂದು ಒತ್ತಾಯಿಸಿದರು. ಕೆಆರ್.ಎಸ್ ಪಕ್ಷವು ಆಧಾರ ರಹಿತ ಹಾಗೂ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಬಾಯಿಗೆ ಬಂದ ಹಾಗೆ ಕೇವಲವಾಗಿ ಸಚಿವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ವೇಳೆ ಭದ್ರತಾ ಕ್ರಮವಾಗಿ ಪತ್ರಿಕಾ ಭವನದ ಮುಂದೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಪರಿಸ್ಥಿತಿ ನಿಯಂತ್ರಿಸಿ ಸುದ್ದಿಗೋಷ್ಠಿ ನಡೆಯಲು ಅನುವು ಮಾಡಿಕೊಟ್ಟರು.