Gubbi News: ಏ.21ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಾಕಥಾನ್-2026
ಗುಬ್ಬಿಯಿಂದ ಆರಂಭವಾಗುವ ವಾಕಥಾನ್ ಮಾರ್ಗ ಮಧ್ಯೆ ಹಲವು ಮಂದಿ ಅಂಬೇಡ್ಕರ್ ಅನುಯಾ ಯಿಗಳು, ಅಭಿಮಾನಿಗಳು ಸೇರ್ಪಡೆಗೊಳ್ಳಲಿದ್ದಾರೆ. ಜೊತೆಗೆ ಅಂಬೇಡ್ಕರ್ ಅವರ ಮಾರ್ಗದರ್ಶನ, ಆದರ್ಶಗಳ ಜಾಗೃತಿ ಮೂಡಿಸುವ ಕರಪತ್ರ ಹಂಚುವ ಜೊತೆಗೆ ಯುವಕರಿಗೆ ಸಂವಿಧಾನ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ
-
ಗುಬ್ಬಿ: ವಿಶ್ವದಲ್ಲೇ ಅತ್ಯುನ್ನತ ಪ್ರಜಾತಂತ್ರ ರಚಿಸಿದ ಸಂವಿಧಾನ ಶಿಲ್ಪ ಡಾ.ಬಿ.ಆರ್.ಅಂಬೇಡ್ಕರ್ ಅವರ ನೂರು ವರ್ಷದ ದಿಕ್ಸೂಚಿ ನಮ್ಮ ಸಮಾಜಕ್ಕೆ ತಿಳಿಸುವ ಉದ್ದೇಶದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಕೀಲ ಆರ್.ನಿಧೀಶ್ ಅವರ ತಂಡ ಗುಬ್ಬಿಯಿಂದ ತುಮಕೂರುವರೆಗೆ ನಡಿಗೆ ಜಾಥಾವನ್ನು ಹಮ್ಮಿಕೊಂಡಿದ್ದು ಡಾ.ಬಿ.ಆರ್.ಅಂಬೇಡ್ಕರ್ ವಾಕಥಾನ್-2026 ಇದೇ ತಿಂಗಳ 21ರಂದು ಹಮ್ಮಿಕೊಂಡಿದ್ದಾರೆ ಎಂದು ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಟಿ.ಈರಣ್ಣ ತಿಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿನ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮುಂಜಾನೆ 5 ಗಂಟೆಗೆ ನಡಿಗೆ ಜಾಥಾಕ್ಕೆ ಚಾಲನೆ ನೀಡಲಾಗುವುದು ಎಂದರು.
ಇದನ್ನೂ ಓದಿ: Gubbi News: ದೇವಾಲಯದ ಜಾಗ ಅತಿಕ್ರಮಣ : ತೆರವು ಮಾಡಲು ಗ್ರಾಮಸ್ಥರ ಆಗ್ರಹ
ಗುಬ್ಬಿಯಿಂದ ಆರಂಭವಾಗುವ ವಾಕಥಾನ್ ಮಾರ್ಗ ಮಧ್ಯೆ ಹಲವು ಮಂದಿ ಅಂಬೇಡ್ಕರ್ ಅನುಯಾಯಿಗಳು, ಅಭಿಮಾನಿಗಳು ಸೇರ್ಪಡೆಗೊಳ್ಳಲಿದ್ದಾರೆ. ಜೊತೆಗೆ ಅಂಬೇಡ್ಕರ್ ಅವರ ಮಾರ್ಗದರ್ಶನ, ಆದರ್ಶಗಳ ಜಾಗೃತಿ ಮೂಡಿಸುವ ಕರಪತ್ರ ಹಂಚುವ ಜೊತೆಗೆ ಯುವಕರಿಗೆ ಸಂವಿಧಾನ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ ಎಂದರು.
ವಕೀಲ ಆರ್.ನಿಧೀಶ್ ಮಾತನಾಡಿ, ಅಂಬೇಡ್ಕರ್ ಅವರು ಕೊಡುಗೆ ನೀಡಿದ ಸಂವಿಧಾನ ನಮಗೆ ಸಿಕ್ಕ ದೊಡ್ಡ ಗ್ರಂಥವಾಗಿದೆ. ಅದರಲ್ಲಿನ ಸಮಾನತೆ, ಸರ್ವರಿಗೂ ಸಮಪಾಲು ಸಮಬಾಳು ತತ್ವ, ಕಾನೂನಿನ ಚೌಕಟ್ಟಿನಲ್ಲಿ ಮನುಷ್ಯನ ಬದುಕು ಹೀಗೆ ಹಲವು ವಿಚಾರ ಪ್ರಸ್ತುತ ಯುವಜನಾಂಗಕ್ಕೆ ತಿಳಿಸುವ ಉದ್ದೇಶದಲ್ಲಿ ವಾಕಾಥಾನ್ ಆಯೋಜನೆ ಮಾಡಿದ್ದೇವೆ. ಪಾಲ್ಗೊಳ್ಳುವ ಸಾರ್ವಜನಿಕರಿಗೆ ಟೀ ಶರ್ಟ್ ನೀಡಲಾಗುತ್ತದೆ. ತುಮಕೂರು ನಗರದವರೆಗೆ ನಡೆಯುವ ನಡಿಗೆ ಜಾಥಾ ವಿವಿಧ ಸಂಘ ಸಂಸ್ಥೆಗಳ ಜೊತೆ ಪ್ರತಿವರ್ಷ ಆಯೋಜನೆ ಮಾಡುವ ಆಲೋಚನೆ ಹೊಂದಿದ್ದೇವೆ. ಈ ಕಾರ್ಯ ಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಂಬೇಡ್ಕರ್ ಅಭಿಮಾನಿಗಳು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಛಲವಾದಿ ಮಹಾಸಭಾದ ಯುವ ಘಟಕದ ಅಧ್ಯಕ್ಷ ಮಧು ಮಾತನಾಡಿ ಅಂಬೇಡ್ಕರ್ ಅವರ ಬಗ್ಗೆ ಇರುವ ಅಪಾರ ಪ್ರೀತಿ ವ್ಯಕ್ತಪಡಿಸುವ ಜೊತೆಗೆ ಅವರ ಬರವಣಿಗೆ, ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಜಾಗೃತಿ ಮೂಡಿಸುವ ವಾಕಥಾನ್ ನಡಿಗೆ ಜಾಥಾದ ಯಶಸ್ವಿಗೆ ಗುಬ್ಬಿಯ ಜನರು ಸಹಕರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ತಾಲ್ಲೂಕು ಉಪಾಧ್ಯಕ್ಷ ಕಿಟ್ಟದಕುಪ್ಪೆ ನಾಗರಾಜು, ಅಮ್ಮನಘಟ್ಟ ಶಿವಣ್ಣ, ಮುನಿರಾಜು, ಇಮ್ರಾನ್ ಪಾಷ, ರಾಜು, ಗೋಪಾಲ್ ಇತರರು ಇದ್ದರು.