Gubbi (Tumkur) News: ಅಂಗನವಾಡಿ ಮಕ್ಕಳಿಗೆ ಹಾಲು ಬ್ರೆಡ್ ವಿತರಿಸಿ ಶಾಸಕ ವಾಸಣ್ಣ ಹುಟ್ಟುಹಬ್ಬ ಆಚರಣೆ
ಗುಬ್ಬಿ ಕ್ಷೇತ್ರದಲ್ಲಿ ಸತತ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿ ತಾಲ್ಲೂಕಿನ ಜನಮಾನಸದಲ್ಲಿ ನಿಂತ ಶಾಸಕ ವಾಸಣ್ಣ ಅವರ 63 ನೇ ಹುಟ್ಟುಹಬ್ಬ ಸರಳವಾಗಿ ಆಚರಿಸುವ ನಿಟ್ಟಿನಲ್ಲಿ ಬಡ ಹಾಗೂ ದಲಿತ ಮಕ್ಕಳು ಓದುವ ಅಂಗನವಾಡಿ ಕೇಂದ್ರಕ್ಕೆ ತೆರಳಿ ಮಕ್ಕಳಿಗೆ ಹಾಲು ಬಿಸ್ಕತ್ ಬ್ರೆಡ್ ವಿತರಣೆ ಮಾಡಿದ್ದೇವೆ. ಶಾಸಕರಾಗಿ ಗೆದ್ದ ದಿನದಿಂದ ದಲಿತ ಪರ ಕೆಲಸ ನಿರಂತರ ಮಾಡುತ್ತಿದ್ದಾರೆ.


ಗುಬ್ಬಿ: ಶಾಸಕ ಎಸ್ಆರ್.ಶ್ರೀನಿವಾಸ್ ಅವರ 63 ನೇ ಹುಟ್ಟುಹಬ್ಬ ಹಿನ್ನೆಲೆ ಹೊಲೆಯ ಮತ್ತು ಮಾದಿಗ ಸಮನ್ವಯ ಸಮಿತಿ ವತಿಯಿಂದ ಪಟ್ಟಣದ ಎಡಿ ಕಾಲೊನಿ ಹಾಗೂ ಎಕೆ ಕಾಲೋನಿಯ ಅಂಗನವಾಡಿ ಮಕ್ಕಳಿಗೆ ಹಾಲು ಬ್ರೆಡ್ ಬಿಸ್ಕತ್ ವಿತರಿಸಲಾಯಿತು.
ಹೊಲೆಯ ಮತ್ತು ಮಾದಿಗ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಎಚ್.ಜಗನ್ನಾಥ್ ಮಾತನಾಡಿ ಗುಬ್ಬಿ ಕ್ಷೇತ್ರದಲ್ಲಿ ಸತತ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿ ತಾಲ್ಲೂಕಿನ ಜನಮಾನಸದಲ್ಲಿ ನಿಂತ ಶಾಸಕ ವಾಸಣ್ಣ ಅವರ 63 ನೇ ಹುಟ್ಟುಹಬ್ಬ ಸರಳವಾಗಿ ಆಚರಿಸುವ ನಿಟ್ಟಿನಲ್ಲಿ ಬಡ ಹಾಗೂ ದಲಿತ ಮಕ್ಕಳು ಓದುವ ಅಂಗನವಾಡಿ ಕೇಂದ್ರಕ್ಕೆ ತೆರಳಿ ಮಕ್ಕಳಿಗೆ ಹಾಲು ಬಿಸ್ಕತ್ ಬ್ರೆಡ್ ವಿತರಣೆ ಮಾಡಿದ್ದೇವೆ. ಶಾಸಕರಾಗಿ ಗೆದ್ದ ದಿನದಿಂದ ದಲಿತ ಪರ ಕೆಲಸ ನಿರಂತರ ಮಾಡುತ್ತಿದ್ದಾರೆ. ತಾಲ್ಲೂಕಿನ ಕಾಲೋನಿಗಳ ಅಭಿವೃದ್ಧಿಗೆ ಪಣ ತೊಟ್ಟ ನಮ್ಮ ಶಾಸಕರ ಪರ ದಲಿತರು ನಿಲ್ಲಬೇಕು. ಅವರ ಕಾಳಜಿಗೆ ತಕ್ಕಂತೆ ನಮ್ಮ ಪ್ರೀತಿ ವಿಶ್ವಾಸ ವ್ಯಕ್ತ ಪಡಿಸಬೇಕು ಎಂದು ಶ್ಲಾಘಿಸಿದರು.
ಇದನ್ನೂ ಓದಿ: Gubbi (Tumkur) News: ಅರ್ಥ ಪಡೆದ ಜೆಡಿಎಸ್ ಮುಖಂಡ ನಾಗರಾಜು ಹುಟ್ಟುಹಬ್ಬ: ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಯಶಸ್ವಿ
ಹೊಲೆಯ ಮತ್ತು ಮಾದಿಗ ಸಮನ್ವಯ ಸಮಿತಿಯ ಕಾರ್ಯದರ್ಶಿ ಟಿ.ಈರಣ್ಣ ಮಾತನಾಡಿ ಗುಬ್ಬಿ ಶಾಸಕರು ಅಭಿವೃದ್ದಿಯ ಹರಿಕಾರರಾಗಿ ಜನಾನುರಾಗಿಯಾಗಿ ಗುರುತಿಸಿಕೊಂಡು ಬೆಳೆದಿದ್ದಾರೆ. ಬಡವರು, ಮಧ್ಯಮ ವರ್ಗದ ಪರ ಸದಾ ಕೆಲಸ ಮಾಡುತ್ತಾ ಜಾತ್ಯತೀತ ನಿಲುವು ತಾಳಿದ್ದಾರೆ. ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸಿಕೊಂಡು ತಾಲ್ಲೂಕಿನಲ್ಲಿ ಶಾಂತಿ ಸೃಷ್ಟಿಸಿದ್ದಾರೆ. ಸದಾ ಕಾಲ ದಲಿತ ಪರ ಕೆಲಸ ಮಾಡುತ್ತಾರೆ. ಎಲ್ಲಾ ಕಾಲೋನಿಗಳಲ್ಲಿ ಸಿಸಿ ರಸ್ತೆ, ನೀರು, ಬೀದಿ ದೀಪ ಹೀಗೆ ಎಲ್ಲಾ ಅನುಕೂಲ ಮಾಡಿಕೊಟ್ಟು ದಲಿತರ ಮನಸ್ಸು ಗೆದ್ದಿದ್ದಾರೆ. ಈ ನಿಟ್ಟಿನಲ್ಲಿ ಕಾಲೋನಿಗಳ ಅಂಗನ ವಾಡಿ ಮಕ್ಕಳಿಗೆ ಹಾಲು ಬ್ರೆಡ್ ನೀಡಿ ಹುಟ್ಟುಹಬ್ಬ ಸರಳವಾಗಿ ಅಭಿಮಾನಿಗಳು ಸರಳವಾಗಿ ಆಚರಿಸಿ ದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಕೆ.ಆರ್.ವೆಂಕಟೇಶ್, ಪಪಂ ಉಪಾಧ್ಯಕ್ಷೆ ಶ್ವೇತಾ ಜಗದೀಶ್, ಸದಸ್ಯರಾದ ಮಮತಾ ಶಿವಪ್ಪ, ಸಾದಿಕ್ ಮಹಮದ್, ಕುಮಾರ್, ಮುಖಂಡರಾದ ಲಕ್ಷ್ಮೀ ನಾರಾಯಣ್, ಸಮನ್ವಯ ಸಮಿತಿಯ ಸದಸ್ಯರಾದ ಗೋಪಾಲ್, ಕಿಟ್ಟದಕುಪ್ಪೆ ನಾಗರಾಜ್, ಬಸವ ರಾಜು, ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಸರೋಜಾ, ಪದ್ಮ, ಮಂಜುಳಾ ಇತರರು ಇದ್ದರು.