#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Cyber Crime: ಆನ್‌ಲೈನ್‌ ಟ್ರೇಡಿಂಗ್‌ ನಂಬಿ 98 ಲಕ್ಷ ಕಳೆದುಕೊಂಡ ನಿವೃತ್ತ ವೈದ್ಯ!

Cyber Crime: ಫೇಸ್‌ಬುಕ್‌ನಲ್ಲಿ ಪ್ರಕಟವಾದ ಜಾಹೀರಾತು ಮೂಲಕ ಟ್ರೇಡಿಂಗ್‌ ಬಗ್ಗೆ ತಿಳಿದ ನಿವೃತ್ತ ವೈದ್ಯ, ಆ್ಯಪ್‌ನಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ. ಇದೀಗ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.

ಆನ್‌ಲೈನ್‌ ಟ್ರೇಡಿಂಗ್‌ ನಂಬಿ 98 ಲಕ್ಷ ಕಳೆದುಕೊಂಡ ನಿವೃತ್ತ ವೈದ್ಯ!

Profile Prabhakara R Feb 3, 2025 8:14 PM

ತುಮಕೂರು: ಆನ್ ಲೈನ್ ವಂಚಕರಿಗೆ ವಿದ್ಯಾವಂತರೇ ಹೆಚ್ಚಾಗಿ ಮೋಸ ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಆನ್‌ಲೈನ್‌ ಟ್ರೇಡಿಂಗ್‌ ನಂಬಿ ನಿವೃತ್ತ ವೈದ್ಯರೊಬ್ಬರು 98 ಲಕ್ಷ ಕಳೆದುಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಆದರ್ಶ ನಗರದ ನಿವೃತ್ತ ವೈದ್ಯ ಕೆ.ಪಿ.ಕಲ್ಲೇಶ್ವರ ಅವರು ಆನ್‌ಲೈನ್‌ ವಂಚನೆಗೆ ಒಳಗಾಗಿ, ಹಣ ಕಳೆದುಕೊಂಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಪ್ರಕಟವಾದ ಜಾಹೀರಾತು ಮೂಲಕ ಟ್ರೇಡಿಂಗ್‌ ಬಗ್ಗೆ ಹಣ ಹೂಡಿಕೆಗೆ ಆಸಕ್ತಿ ತೋರಿದಾಗ, ಕಲ್ಲೇಶ್ವರ ಅವರನ್ನು V-35 Hem Securities Group ಎಂಬ ಗ್ರೂಪ್‌ಗೆ ವಂಚಕರು ಸೇರಿಸಿದ್ದಾರೆ. ಆ ಗ್ರೂಪ್‌ನಲ್ಲಿ ಆನ್‌ಲೈನ್‌ ಟ್ರೇಡಿಂಗ್‌ ಕುರಿತು ವಿವರಿಸಿದ್ದಾರೆ. ಕೆಲವರು ಹಣ ಹೂಡಿಕೆ ಮಾಡಿ, ಒಳ್ಳೆಯ ಲಾಭ ಗಳಿಸಿದ್ದೇವೆ ಎಂದು ಮೆಸೇಜ್‌ ಮಾಡಿದ್ದಾರೆ. ಇದನ್ನು ನಂಬಿದ ವೈದ್ಯ ಕಲ್ಲೇಶ್ವರ ಅವರು ಒಳ್ಳೆಯ ಲಾಭ ಪಡೆಯಬಹುದು ಎಂಬ ಆಮಿಷಕ್ಕೆ ಒಳಗಾಗಿ Hem Securitie ಎಂಬ ಟ್ರೇಡಿಂಗ್‌ ಆ್ಯಪ್ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.

ನಂತರ ವಂಚಕರು ತಿಳಿಸಿದ ಖಾತೆಗಳಿಗೆ ಜ.6ರಿಂದ 25ರ ವರೆಗೆ ಹಂತ ಹಂತವಾಗಿ ಒಟ್ಟು 98.49 ಲಕ್ಷ ಹಣ ವರ್ಗಾಯಿಸಿದ್ದಾರೆ. ಹಣ ವಿತ್‌ ಡ್ರಾ ಮಾಡಿಕೊಳ್ಳುವ ಬಗ್ಗೆ ಗ್ರೂಪ್‌ನಲ್ಲಿ ಚರ್ಚಿಸಿದ್ದಾರೆ. ಆದರೆ, ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಎಲ್ಲವನ್ನು ಒಂದೇ ಬಾರಿಗೆ ನೀಡುತ್ತೇವೆ ಎಂದು ವಂಚಕರು ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ವೈದ್ಯ ಸೈಬರ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ | Jaya Bachchan: ಕಾಲ್ತುಳಿತದಲ್ಲಿ ಸತ್ತವರ ಶವಗಳನ್ನು ನದಿಗೆ ಎಸೆಯಲಾಗಿದೆ; ಜಯಾ ಬಚ್ಚನ್‌ ಕಿಡಿ!

ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ಪಂಗನಾಮ: ಆಕಾಶ್‌ ಜ್ಯುವೆಲ್ಲರ್ಸ್‌ ಮಾಲೀಕ, ಪತ್ನಿ ಬಂಧನ

Akash jewellers

ತುಮಕೂರು: ಕಡಿಮೆ ಬೆಲೆಗೆ ಚಿನ್ನ ಖರೀದಿಸಿ‌, ಬೆಲೆ ಹೆಚ್ಚಾದಾಗ ಮಾರಾಟ ಮಾಡಿ ದುಪ್ಪಟ್ಟು ಲಾಭ ಕೊಡುವುದಾಗಿ ಗ್ರಾಹಕರಿಗೆ ನಂಬಿಸಿ ಕೋಟ್ಯಂತರ ರುಪಾಯಿ ವಂಚಿಸಿ ಪರಾರಿಯಾಗಿದ್ದ ನಗರದ ಆಕಾಶ್‌ ಜ್ಯುವೆಲ್ಲರ್ಸ್‌, ಆಕಾಶ್ ಕೋ ಆಪರೇಟಿವ್ ಸೊಸೈಟಿ ಮಾಲೀಕ ಶಿವಾನಂದಮೂರ್ತಿ, ಪತ್ನಿ ಅನ್ನಪೂರ್ಣ ಅವರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಸೊಸೈಟಿ ಗ್ರಾಹಕರಾಗಿದ್ದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಸಿದ್ಧಲಿಂಗಪ್ಪ ನೀಡಿದ ದೂರಿನ ಮೇರೆಗೆ ಶಿವಾನಂದಮೂರ್ತಿ, ಅನ್ನಪೂರ್ಣ, ಪುತ್ರ ಆಕಾಶ್ ಮತ್ತು ಇತರರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಬೆಂಗಳೂರಿನಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.

ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪೊಲೀಸ್‌ ವಶಕ್ಕೆ ಪಡೆದು ತನಿಖೆ ನಡೆಸಲಾಗುವುದು. ಜನರಿಂದ ಪಡೆದ ಹಣ ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ ಎಂಬುವುದು ತನಿಖೆಯಿಂದ ತಿಳಿಯಲಿದೆ.

ಆಕಾಶ್‌ ಜ್ಯುವೆಲ್ಲರ್ಸ್‌ ಮಾಲೀಕರ ವಿರುದ್ಧ ಜ.29ರಿಂದ ಫೆ.2ರ ವರೆಗೆ ನಗರ ಠಾಣೆಯಲ್ಲಿ 56 ದೂರುಗಳು ಸಲ್ಲಿಕೆಯಾಗಿವೆ. ಮೊದಲ ದಿನ 50 ಕ್ಕೂ ಹೆಚ್ಚು ದೂರು ಸಲ್ಲಿಕೆಯಾಗಿತ್ತು. ಸಲ್ಲಿಕೆಯಾದ ದೂರುಗಳನ್ವಯ ಈವರೆಗೆ ಸುಮಾರು 18 ಕೋಟಿ ವಂಚಿಸಿರುವುದು ಬೆಳಕಿಗೆ ಬಂದಿದೆ.

ಈ ಸುದ್ದಿಯನ್ನೂ ಓದಿ | Viral Video: ಇದೆಂಥಾ ಅಸಹ್ಯ! ತಯಾರಿಸಿಟ್ಟ ಜಾಮೂನ್‌ ಗೆ ಮೂತ್ರ ವಿಸರ್ಜನೆ ಮಾಡಿದ ಕೊಳಕ! ವಿಡಿಯೊ ವೈರಲ್!

ಜ್ಯುವೆಲರಿ ಹಾಗೂ ಸೊಸೈಟಿಯಲ್ಲಿ ವಂಚನೆ

ಹಣ ಹೂಡಿಕೆ ಮಾಡಿ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾದಾಗ ಚಿನ್ನ ಖರೀದಿಸಿ ದರ ಹೆಚ್ಚಾದಾಗ ಮಾರಾಟ ಮಾಡಿ ಅಧಿಕ ಲಾಭ ನೀಡುವುದಾಗಿ ಜ್ಯುವೆಲ್ಲರ್ಸ್‌ ಮಾಲೀಕ ನಂಬಿಸಿದ್ದರು. ಹಣಕ್ಕೆ ಪ್ರತಿಯಾಗಿ ಆಕಾಶ್ ಜ್ಯುವೆಲ್ಲರ್ಸ್‌ಗೆ ಸಂಬಂಧಿಸಿದ ಠೇವಣಿ ಪ್ರಮಾಣ ಪತ್ರ ನೀಡುವುದಾಗಿ ತಿಳಿಸಿದ್ದರು. ಇದನ್ನು ನಂಬಿ ಹಣ ಹೂಡಿಕೆ ಮಾಡಿದ್ದರು.