ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AUS vs ENG: ಶತಕ ಬಾರಿಸಿ ರಿಕಿ ಪಾಂಟಿಂಗ್‌ ದಾಖಲೆ ಸರಿಗಟ್ಟಿದ ಜೋ ರೂಟ್‌!

ಆಸ್ಟ್ರೇಲಿಯಾ ವಿರುದ್ದದ ಐದನೇ ಹಾಗೂ ಆಷಸ್‌ ಟ್ರೋಫಿ ಟೆಸ್ಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಜೋ ರೂಟ್‌ ಅವರು ತಮ್ಮ ಟೆಸ್ಟ್‌ ವೃತ್ತಿ ಜೀವನದ 41ನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಆಸೀಸ್‌ ಮಾಜಿ ನಾಯಕ ರಿಕಿ ಪಾಂಟಿಂಗ್‌ ದಾಖಲೆಯನ್ನು ಸರಿಗಟ್ಟಿದ್ದಾರೆ.

41ನೇ ಶತಕ ಬಾರಿಸಿ ಪಾಂಟಿಂಗ್‌ ದಾಖಲೆ ಸರಿಗಟ್ಟಿದ ಜೋ‌ ರೂಟ್!

ರಿಕಿ ಪಾಂಟಿಂಗ್‌ ದಾಖಲೆಯನ್ನು ಸರಿಗಟ್ಟಿದ ಜೋ ರೂಟ್‌. -

Profile
Ramesh Kote Jan 5, 2026 8:37 PM

ಸಿಡ್ನಿ: ಪ್ರಸ್ತುತ ನಡೆಯುತ್ತಿರುವ ಆಷಸ್‌ ಟ್ರೋಫಿ ಟೆಸ್ಟ್‌ (Ashes 2025-26) ಸರಣಿಯಲ್ಲಿ ಇಂಗ್ಲೆಂಡ್‌ ಮಾಜಿ ನಾಯಕ ಜೋ ರೂಟ್‌ (Joe Root) ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅವರು ಐದನೇ ಹಾಗೂ ಸರಣಿಯ ಕೊನೆಯ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿ ಶತಕವನ್ನು ಬಾರಿಸಿದರು. ಆ ಮೂಲಕ ತಮ್ಮ ಟೆಸ್ಟ್‌ ವೃತ್ತಿ ಜೀವನದ 41ನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಈ ಟೆಸ್ಟ್‌ ಸರಣಿಯಲ್ಲಿ ಜೋ ರೂಟ್‌ ಅವರ ಪಾಲಿಗೆ ಎರಡನೇ ಶತಕವಾಗಿದೆ. ಇದರೊಂದಿಗೆ ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್‌ (Ricky Ponting) ಅವರ ಟೆಸ್ಟ್‌ ಶತಕಗಳ ದಾಖಲೆಯನ್ನು ಜೋ ರೂಟ್‌ ಸರಿಗಟ್ಟಿದ್ದಾರೆ.

ಇಲ್ಲಿನ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 146 ಎಸೆತಗಳಲ್ಲಿ ಜೋ ರೂಟ್‌ ತಮ್ಮ 41ನೇ ಟೆಸ್ಟ್‌ ಶತಕವನ್ನು ಪೂರ್ಣಗೊಳಿಸಿದರು. ಇದಕ್ಕೂ ಮುನ್ನ ಬ್ರಿಸ್ಬೇನ್‌ನ ದಿ ಗಬ್ಬಾ ಕ್ರೀಡಾಂಗಣದಲ್ಲಿ ನಡೆದುದ್ದ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಮಾಜಿ ನಾಯಕ ಆಸ್ಟ್ರೇಲಿಯಾ ನೆಲದಲ್ಲಿ ತಮ್ಮ ಮೊದಲ ಟೆಸ್ಟ್‌ ಶತಕವನ್ನು ಸಿಡಿಸಿದ್ದರು. ಆ ಮೂಲಕ 2021ರ ಬಳಿಕ ಇದು ರೂಟ್‌ ಪಾಲಿಗೆ 24ನೇ ಟೆಸ್ಟ್‌ ಶತಕವಾಗಿದೆ. ಈ ದಾಖಲೆಯನ್ನು ಬರೆದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಂಡರು.

Mustafizur Rahman row: ಐಪಿಎಲ್‌ ಪಂದ್ಯಗಳ ಪ್ರಸಾರವನ್ನು ನಿಷೇಧಿಸಿದ ಬಾಂಗ್ಲಾದೇಶ ಸರ್ಕಾರ!

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಟೆಸ್ಟ್‌ ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ದಕ್ಷಿಣ ಆಫ್ರಿಕಾ ದಿಗ್ಗಜ ಜಾಕ್‌ ಕಾಲಿಸ್‌ ಅವರ ಸನಿಹಕ್ಕೆ ಬಂದಿದ್ದಾರೆ. ಜಾಕ್‌ ಕಾಲಿಸ್‌ 45 ಟೆಸ್ಟ್‌ ಶತಕಗಳನ್ನು ಬಾರಿಸಿದ್ದಾರೆ. ಅಗ್ರ ಸ್ಥಾನದಲ್ಲಿರುವ ಸಚಿನ್‌ ತೆಂಡೂಲ್ಕರ್‌ ಅವರು 51 ಶತಕಗಳ ಮೂಲಕ ಅಗ್ರ ಸ್ಥಾನದಲ್ಲಿದ್ದಾರೆ. ಅಂದ ಹಾಗೆ 41ನೇ ಶತಕದ ಮೂಲಕ ಜೋ ರೂಟ್‌ ಅವರು ರಿಕಿ ಪಾಂಟಿಂಗ್‌ (41) ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಮತ್ತೊಂದು ಕಡೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಜೋ ರೂಟ್‌ ಅವರು 14000 ರನ್‌ಗಳ ಸನಿಹದಲ್ಲಿದ್ದಾರೆ. ಅವರು ಸದ್ಯ 162 ಟೆಸ್ಟ್‌ ಪಂದ್ಯಗಳ 296 ಇನಿಂಗ್ಸ್‌ಗಳಿಂದ 13777 ರನ್‌ಗಳನ್ನು ಗಳಿಸಿದ್ದಾರೆ. ಆಸೀಸ್‌ ಮಾಜಿ ನಾಯಕ ರಿಕಿ ಪಾಂಟಿಂಗ್‌ ಅವರು ತಮ್ಮ ಟೆಸ್ಟ್‌ ವೃತ್ತಿ ಜೀವನದಲ್ಲಿ 168 ಪಂದ್ಯಗಳಿಂದ 51.85ರ ಸರಾಸರಿಯಲ್ಲಿ 41 ಶತಕಗಳು ಹಾಗೂ 62 ಅರ್ಧಶತಕಗಳ ಮೂಲಕ 13378 ರನ್‌ಗಳನ್ನು ಗಳಿಸಿದ್ದಾರೆ.



160 ರನ್‌ ಬಾರಿಸಿದ ಜೋ ರೂಟ್‌

ಅದ್ಭುತವಾಗಿ ಬ್ಯಾಟ್‌ ಮಾಡಿದ ಜೋ ರೂಟ್‌, ಈ ಇನಿಂಗ್ಸ್‌ನಲ್ಲಿ ಆಡಿದ 242 ಎಸೆತಗಳಲ್ಲಿ 15 ಮನಮೋಹಕ ಬೌಂಡರಿಗಳೊಂದಿಗೆ 160 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಇಂಗ್ಲೆಂಡ್‌ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 97.3 ಓವರ್‌ಗಳಿಗೆ 384 ರನ್‌ಗಳನ್ನು ಕಲೆ ಹಾಕಿತು. ಜೋ ರೂಟ್‌ ಅವರ ಜೊತೆಗೆ ಹ್ಯಾರಿ ಬ್ರೂಕ್‌ ಅವರು ಕೂಡ 84 ರನ್‌ಗಳನ್ನು ಗಳಿಸಿದರು. ಜೇಮಿ ಸ್ಮಿತ್‌ 46 ರನ್‌ ಗಳಿಸಿದರು.