Gubbi News: ಗುಬ್ಬಿಯಲ್ಲಿ ಆರ್‌ಎಸ್ಎಸ್ ಪಥ ಸಂಚಲನ
ಪಟ್ಟಣದ ಜೂನಿಯರ್ ಕಾಲೇಜು ಮೈದಾನ ಸಮಾವೇಶಗೊಂಡ ಗಣ ವೇಷಧಾರಿಗಳು ಪಟ್ಟಣದ ವಿನಾಯಕನಗರ ಮೊದಲ ಕ್ರಾಸ್ ಮೂಲಕ ಎಂಜಿ ರಸ್ತೆ, ಗುಬ್ಬಿ ವೀರಣ್ಣ ಸರ್ಕಲ್, ಹೆದ್ದಾರಿ ಮೂಲಕ ಬಸ್ ನಿಲ್ದಾಣ, ಮಾರ್ಕೆಟ್ ರಸ್ತೆ, ಕಾಯಿಪೇಟೆ ಹೀಗೆ ಎಲ್ಲಡೆ ಸಂಚರಿಸಿ ಮೆರವಣಿಗೆ ಮತ್ತೇ ಜೂನಿಯರ್ ಕಾಲೇಜು ಮೈದಾನ ಸೇರಿತು.

-

ಗುಬ್ಬಿ : ರಾಷ್ಟ್ರೀಯ ಸ್ವಯಂ ಸಂಘ ಪ್ರಾರಂಭಗೊಂಡು ನೂರು ವರ್ಷ ತುಂಬಿದ ಹಿನ್ನಲೆ ಶತಾಬ್ದಿ ಪಥ ಸಂಚಲನ ಕಾರ್ಯಕ್ರಮ ದೇಶದೆಲ್ಲೆಡೆ ನಡೆದಿರುವಂತೆ ಗುಬ್ಬಿ ಪಟ್ಟಣದ ಪ್ರಮುಖ ಬೀದಿ ಗಳಲ್ಲಿ ಪಥ ಸಂಚಲನ ನಡೆಸಲಾಯಿತು.
ಪಟ್ಟಣದ ಜೂನಿಯರ್ ಕಾಲೇಜು ಮೈದಾನ ಸಮಾವೇಶಗೊಂಡ ಗಣ ವೇಷಧಾರಿಗಳು ಪಟ್ಟಣದ ವಿನಾಯಕನಗರ ಮೊದಲ ಕ್ರಾಸ್ ಮೂಲಕ ಎಂಜಿ ರಸ್ತೆ, ಗುಬ್ಬಿ ವೀರಣ್ಣ ಸರ್ಕಲ್, ಹೆದ್ದಾರಿ ಮೂಲಕ ಬಸ್ ನಿಲ್ದಾಣ, ಮಾರ್ಕೆಟ್ ರಸ್ತೆ, ಕಾಯಿಪೇಟೆ ಹೀಗೆ ಎಲ್ಲಡೆ ಸಂಚರಿಸಿ ಮೆರವಣಿಗೆ ಮತ್ತೇ ಜೂನಿಯರ್ ಕಾಲೇಜು ಮೈದಾನ ಸೇರಿತು.
ಪಥ ಸಂಚಲನ ಹೋಗುವ ಪ್ರತಿ ಬೀದಿಯಲ್ಲಿ ಜನರು ಸಾಂಕೇತಿಕವಾಗಿ ರಸ್ತೆಗೆ ನೀರು ಹಾಕಿ ರಂಗೋಲಿ ಬಿಡಿಸಿದ್ದರು. ಬರುವ ಗಣವೇಷಧಾರಿಗಳ ಮೇಲೆ ಹೂವು ಎರಚಿ ಸ್ವಾಗತಿಸಿದ್ದು ವಿಶೇಷ ವಾಗಿತ್ತು.
ಇದನ್ನೂ ಓದಿ: Gubbi News: ಪ್ರಜಾ ಸಂಗ್ರಾಮ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಷೇರು ಪ್ರಮಾಣ ಪತ್ರ ವಿತರಣೆ
ಪಟ್ಟಣದ ತುಂಬೆಲ್ಲ ಕೋಲು ಹಿಡಿದು, ಬೂಟು ಧರಿಸಿದ ಖಾಕಿ ಪ್ಯಾಂಟಿನ ಬಿಳಿ ಅಂಗಿಯ ನೂರಾರು ಗಣವೇಷಧಾರಿಗಳು ಘೋಷಣೆ ಕೂಗುತ್ತಾ ಸಾಗಿದ್ದು ಮೆರವಣಿಗೆಗೆ ಪೊಲೀಸರ ಬಂದೋ ಬಸ್ತ್ ಸಹ ವಿಶೇಷವಾಗಿತ್ತು. ಪಟ್ಟಣದ ಪ್ರಮುಖ ಹಾಗೂ ಸಣ್ಣ ಗಲ್ಲಿಗಳಲ್ಲೂ ಪೆರೇಡ್ ನಡೆಸಿದ್ದು ವಿಶೇಷ ಎನಿಸಿತ್ತು.
ಪಥ ಸಂಚಲನದಲ್ಲಿ ಗೊಲ್ಲಹಳ್ಳಿ ಮಠದ ಶ್ರೀ ವಿಭವ ವಿದ್ಯಾಶಂಕರ ಸ್ವಾಮೀಜಿ, ತೊರೆಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಸಂಘದ ವಿಭಾಗ ಸಂಯೋಜಕ ದಯಾನಂದ ಮೂರ್ತಿ, ನಟರಾಜ್, ಸುಧೀರ್, ಬಿಜೆಪಿ ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ಹೆಚ್.ಟಿ.ಭೈರಪ್ಪ, ಎನ್.ಸಿ.ಪ್ರಕಾಶ್, ಚಂದ್ರಶೇಖರ್ ಬಾಬು, ಪಪಂ ಸದಸ್ಯರಾದ ಜಿ.ಆರ್.ಶಿವಕುಮಾರ್, ಜಿ.ಎನ್.ಅಣ್ಣಪ್ಪಸ್ವಾಮಿ, ಜಿ.ಸಿ.ಕೃಷ್ಣಮೂರ್ತಿ, ಮುಖಂಡರಾದ ಬಲರಾಮಯ್ಯ, ಪಂಚಾಕ್ಷರಿ, ಪಾರ್ಥಸಾರಥಿ, ಗಂಗಣ್ಣ, ವಿಜಯ್ ಕುಮಾರ್, ಸಿದ್ದರಾಮಯ್ಯ, ನಂಜೇಗೌಡ, ಪ್ರಮೋದ್, ಅನಿಲ್, ಲೋಕೇಶ್, ಅರ್ಜುನ್ ಹಾಗೂ ಗ್ರಾಮೀಣ ಭಾಗದ ಗಣವೇಷಧಾರಿಗಳು ಸೇರಿದ್ದರು.