ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹೈನುಗಾರರ ಧ್ವನಿ ದಿ. ಹಳೆಮನೆ ಶಿವನಂಜಪ್ಪ 'ಶಿವಗಣಾರಾಧನೆ' ನಾಳೆ

Chikkanayakanahalli News: ತುಮಕೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ತುಮುಲ್) ಮಾಜಿ ಅಧ್ಯಕ್ಷರು ಹಾಗೂ ಸಹಕಾರಿ ರಂಗದ ಅಪ್ರತಿಮ ನಾಯಕ ದಿ. ಹಳೆಮನೆ ಶಿವನಂಜಪ್ಪ ಅವರ 'ಶಿವಗಣಾರಾಧನೆ' ಕಾರ್ಯಕ್ರಮವು ಜನವರಿ 7ರಂದು ಬುಧವಾರ ಚಿಕ್ಕನಾಯಕನಹಳ್ಳಿ ತಾಲೂಕಿನ ಹಾಲುಗೊಣದ ಸ್ವಗೃಹದಲ್ಲಿ ನೆರವೇರಲಿದೆ.

ಜ.7ರಂದು ಹೈನುಗಾರರ ಧ್ವನಿ ದಿ. ಹಳೆಮನೆ ಶಿವನಂಜಪ್ಪ 'ಶಿವಗಣಾರಾಧನೆ'

ದಿ. ಹಳೆಮನೆ ಶಿವನಂಜಪ್ಪ (ಸಂಗ್ರಹ ಚಿತ್ರ) -

Profile
Siddalinga Swamy Jan 6, 2026 9:32 PM

ಚಿಕ್ಕನಾಯಕನಹಳ್ಳಿ, ಜ.6: ತುಮಕೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ತುಮುಲ್) ಮಾಜಿ ಅಧ್ಯಕ್ಷರು ಹಾಗೂ ಸಹಕಾರಿ ರಂಗದ ಅಪ್ರತಿಮ ನಾಯಕ ದಿ. ಹಳೆಮನೆ ಶಿವನಂಜಪ್ಪ (Halemane Shivananjappa) ಅವರ 'ಶಿವಗಣಾರಾಧನೆ' ಕಾರ್ಯಕ್ರಮವು ಜನವರಿ 7ರಂದು ಬುಧವಾರ ಚಿಕ್ಕನಾಯಕನಹಳ್ಳಿ ತಾಲೂಕಿನ ಹಾಲುಗೊಣದ ಸ್ವಗೃಹದಲ್ಲಿ ನೆರವೇರಲಿದೆ.

ಸಹಕಾರಿ ಕ್ಷೇತ್ರದಲ್ಲಿ ತಮ್ಮದೇ ಆದ ಮೈಲಿಗಲ್ಲು ಸ್ಥಾಪಿಸಿದ್ದ ಶಿವನಂಜಪ್ಪ ಅವರು ತುಮುಲ್ ಸಂಸ್ಥೆಯಲ್ಲಿ ಸತತ 3 ಬಾರಿ ನಿರ್ದೇಶಕರಾಗಿ ಹಾಗೂ 2 ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಜಿಲ್ಲೆಯ ಹೈನುಗಾರರ ಆರ್ಥಿಕ ಪ್ರಗತಿಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ರೈತ ಕುಟುಂಬದಿಂದ ಬಂದ ಇವರು, ಅಧಿಕಾರಾವಧಿಯಲ್ಲಿ ಪಾರದರ್ಶಕ ಆಡಳಿತದ ಮೂಲಕ ಸಂಸ್ಥೆಯನ್ನು ಲಾಭದಾಯಕ ಹಾದಿಗೆ ತಂದಿದ್ದರು.

ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರ ಆಪ್ತ ಒಡನಾಡಿಯಾಗಿದ್ದ ಶಿವನಂಜಪ್ಪ ಅವರು, ಸಹಕಾರಿ ತತ್ವದ ಅಡಿಯಲ್ಲಿ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದರು. ಕುಪ್ಪೂರು ಸಹಕಾರ ಸಂಘದ ನಿಕಟಪೂರ್ವ ಅಧ್ಯಕ್ಷ ಅರಳೀಕೆರೆ ಉಮೇಶ್ ಮತ್ತು ಮತಿಘಟ್ಟ ಸಹಕಾರ ಸಂಘದ ನಿರ್ದೇಶಕ ನಂಜೇಗೌಡ ಅವರಂತಹ ಕಾರ್ಯಕರ್ತರೊಂದಿಗೆ ಸೇರಿ ಗ್ರಾಮೀಣ ಭಾಗದ ಹಾಲು ಉತ್ಪಾದಕ ಸಂಘಗಳ ಬಲವರ್ಧನೆಗೆ ಶ್ರಮಿಸಿದ್ದರು. ಕೇವಲ ರಾಜಕೀಯ ಅಥವಾ ಸಹಕಾರಿ ರಂಗಕ್ಕೆ ಸೀಮಿತವಾಗದೆ, ಅವರು ಜಿಲ್ಲೆಯ ರೈತ ಕುಟುಂಬಗಳಿಗೆ ಮನೆಮಗನಂತಿದ್ದರು. ಇವರ ಈ ಸುದೀರ್ಘ ಸಾರ್ವಜನಿಕ ಸೇವೆಯ ಹಾದಿಯಲ್ಲಿ ಅಣ್ಣನ ಮಗ ಸುರೇಶ್ ಹಳೆಮನೆ ಹಾಗೂ ಇಡೀ ಕುಟುಂಬ ವರ್ಗ ಬೆನ್ನೆಲುಬಾಗಿ ನಿಂತಿತ್ತು.

Halemane Shivananjappa: ತುಮುಲ್ ಮಾಜಿ ಅಧ್ಯಕ್ಷ ಹಳೇಮನೆ ಶಿವನಂಜಪ್ಪ ನಿಧನ

ಜನವರಿ 7ರಂದು ಚಿಕ್ಕನಾಯಕನಹಳ್ಳಿ ತಾಲೂಕಿನ ಹಾಲುಗೊಣ ಗ್ರಾಮದ ಸ್ವಗೃಹದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶಿವಗಣಾರಾಧನೆ ಹಾಗೂ ಪುಣ್ಯಸ್ಮರಣೆ ನಡೆಯಲಿದ್ದು, ಇಂದು ಸುರೇಶ್ ಹಳೆಮನೆ ಹಾಗೂ ಕುಟುಂಬಸ್ಥರು ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಲಿಂಗೈಕ್ಯ ಚೇತನಕ್ಕೆ ಭಾವಪೂರ್ಣ ನಮನ ಸಲ್ಲಿಸಲಿದ್ದಾರೆ. ಸಜ್ಜನ ವ್ಯಕ್ತಿತ್ವದ ಹಳೆಮನೆ ಶಿವನಂಜಪ್ಪ ಅವರು ಹಾಕಿಕೊಟ್ಟ ದಾರಿ ಸಹಕಾರಿ ರಂಗಕ್ಕೆ ಸದಾ ಮಾದರಿ. ಅವರ ಪವಿತ್ರ ಆತ್ಮಕ್ಕೆ ಶಿವಸಾಯುಜ್ಯ ಪ್ರಾಪ್ತಿಯಾಗಲಿ ಎಂದು ಜಿಲ್ಲೆಯ ಹೈನುಗಾರರು ಹಾಗೂ ಅಭಿಮಾನಿ ಬಳಗ ಪ್ರಾರ್ಥಿಸಿದೆ.