ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಫೆ.28, ಮಾ.1ರಂದು ಶ್ರೀ ವನಕಲ್ಲು ಮಲ್ಲೇಶ್ವರ ಜಾತ್ರಾ ಮಹೋತ್ಸವ: ಶ್ರೀ ಬಸವ ರಮಾನಂದ ಸ್ವಾಮೀಜಿ

ಜಾತ್ರಾ ಮಹೋತ್ಸವ ಅಂಗವಾಗಿ ಇದೇ ತಿಂಗಳ 21 ರಿಂದ ಸಿದ್ದಯೋಗಾನಂದ ಶ್ರೀ ಕಪ್ ಹೆಸರಿ ನಲ್ಲಿ ಕ್ರಿಕೆಟ್, ಓಟದ ಸ್ಪರ್ಧೆ, ಗುಂಡು ಎಸೆತ, ವಾಲಿಬಾಲ್, ಕಬಡ್ಡಿ, ಮಡಿಕೆ ಒಡೆಯುವ ಸ್ಪರ್ಧೆ, ವಚನ ಕಂಠ ಪಾಠ, ವೇಷಭೂಷಣ ಸ್ಪರ್ಧೆ ಹೀಗೆ ಅನೇಕ ಗ್ರಾಮೀಣ ಆಟಗಳ ಸೊಗಡು ಅಲ್ಲಿ ಪ್ರದರ್ಶನ ಆಗಲಿದೆ

ಗುಬ್ಬಿ: 52 ನೇ ವರ್ಷದ ಶ್ರೀ ವನಕಲ್ಲು ಮಲ್ಲೇಶ್ವರ ಜಾತ್ರಾ ಮಹೋತ್ಸವ 2026 ಅದ್ದೂರಿ ಯಾಗಿ ನಡೆಸಲು ನೆಲಮಂಗಲ ಬಳಿಯ ಶ್ರೀಕ್ಷೇತ್ರದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ. ರಾಜ್ಯದ ಕಾಡುಗೊಲ್ಲ ಸಮಾಜದ ಬಂಧುಗಳ ಜೊತೆ ಎಲ್ಲಾ ಅಲೆಮಾರಿ, ಅರೆ ಅಲೆಮಾರಿ ಗಳು ಹಾಗೂ ವಿವಿಧ ವರ್ಗದ ಜನರು ಭಾಗವಹಿಸಲಿದ್ದಾರೆ. ಈ ನಿಟ್ಟಿನಲ್ಲಿ ತುಮಕೂರು ಜಿಲ್ಲೆಯ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸುಕ್ಷೇತ್ರದ ಶ್ರೀ ಬಸವ ರಮಾನಂದ ಸ್ವಾಮೀಜಿ ಮನವಿ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಡು ಗೊಲ್ಲ ಸಮಾಜದ ಬಂಧುಗಳು ಹಾಗೂ ಶ್ರೀ ಕ್ಷೇತ್ರದ ಭಕ್ತರು ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಎರಡು ದಿನದ ಈ ಮಹೋತ್ಸವದಲ್ಲಿ ನಮ್ಮ ಬುಡಕಟ್ಟು ಸಂಸ್ಕೃತಿಯ ಅನಾವರಣ ಗೊಳ್ಳಲಿದೆ. ಜೊತೆಗೆ ವನಕಲ್ಲು ಶ್ರೀ ಪ್ರಶಸ್ತಿ ಪ್ರದಾನ, ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಂಸ್ಕೃತಿ ಉತ್ಸವ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.

ಇದನ್ನೂ ಓದಿ: Gubbi News ಮಾದಾರ ಮಹಾಸಭಾದ ಕಡಬ ಹೋಬಳಿ ಘಟಕದ ಅಧ್ಯಕ್ಷರಾಗಿ ಲಕ್ಷ್ಮಣ್ ಉಪಾಧ್ಯಕ್ಷರಾಗಿ ಸುರೇಶ್ ಆಯ್ಕೆ

ಜಾತ್ರಾ ಮಹೋತ್ಸವ ಅಂಗವಾಗಿ ಇದೇ ತಿಂಗಳ 21 ರಿಂದ ಸಿದ್ದಯೋಗಾನಂದ ಶ್ರೀ ಕಪ್ ಹೆಸರಿನಲ್ಲಿ ಕ್ರಿಕೆಟ್, ಓಟದ ಸ್ಪರ್ಧೆ, ಗುಂಡು ಎಸೆತ, ವಾಲಿಬಾಲ್, ಕಬಡ್ಡಿ, ಮಡಿಕೆ ಒಡೆಯುವ ಸ್ಪರ್ಧೆ, ವಚನ ಕಂಠ ಪಾಠ, ವೇಷಭೂಷಣ ಸ್ಪರ್ಧೆ ಹೀಗೆ ಅನೇಕ ಗ್ರಾಮೀಣ ಆಟಗಳ ಸೊಗಡು ಅಲ್ಲಿ ಪ್ರದರ್ಶನ ಆಗಲಿದೆ ಎಂದ ಅವರು ಇದೇ ತಿಂಗಳ 28 ರಂದು ಗದ್ದುಗೆ ಪೂಜಾ ಕೈಂಕರ್ಯದಿಂದ ಧಾರ್ಮಿಕ ಕಾರ್ಯಕ್ರಮ ಆರಂಭವಾಗಿ ಬೆಳಿಗ್ಗೆ 9.30 ಕ್ಕೆ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಂಸ್ಕೃತಿ ಉತ್ಸವ 2026 ಹಲವು ಮಠಾಧೀಶರ ಸಾನಿಧ್ಯ ದಲ್ಲಿ ವಿಧಾನ ಪರಿಷತ್ ಸದಸ್ಯ ನಾಗರಾಜು ಯಾದವ್ ಉದ್ಘಾಟಿಸಲಿದ್ದಾರೆ. ನಂತರ ಕವಿಗೋಷ್ಠಿ ಸಹ ನಡೆಯಲಿದೆ ಎಂದರು.

ಸಂಸ್ಕೃತಿ ಉತ್ಸವದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ನಮ್ಮ ಬುಡಕಟ್ಟು ಸಂಸ್ಕೃತಿಯ ಕಲಾತಂಡಗಳು ಆಗಮಿಸಿ ಮೂಲ ನೆಲೆಯ ನೃತ್ಯ ಪ್ರದರ್ಶನ ಮಾಡಲಿದ್ದಾರೆ. ಶನಿವಾರ ಸಂಜೆ 7.30 ರಿಂದ ಸಂಸ್ಕೃತೋತ್ಸವ 2026 ಕಾರ್ಯಕ್ರಮವನ್ನು ರಾಜ್ಯ ಕಾಡುಗೊಲ್ಲ ಅಭಿವೃದ್ದಿ ನಿಗಮದ ಅಧ್ಯಕ್ಷ ಮಹೇಶ್ ಹಾರೋಗೆರೆ ನಡೆಸಿಕೊಡಲಿದ್ದಾರೆ.

ಮಾಜಿ ಸಿಎಂ ವೀರಪ್ಪ ಮೊಯ್ಲಿ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಮಾಜಿ ಶಾಸಕ ಗೌರಿಶಂಕರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದ ಅವರು ಸಾಹಿತ್ಯ ಸಂಸ್ಕೃತಿ ಹಾಗೂ ಜಾನಪದ ಸಂಸ್ಕೃತಿ ಕುರಿತ ವಿಚಾರಗೋಷ್ಠಿಯನ್ನು ಭಾನುವಾರ ಮಧ್ಯಾಹ್ನ 3 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಸಾಹಿತ್ಯದ ಹೆಜ್ಜೆಗಳು, ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಚಳವಳಿ, ಅಲೆಮಾರಿ ಜನಪದ ಕಲೆಗಳು, ಬುಡಕಟ್ಟು ಸಮುದಾಯದ ಅನನ್ಯತೆಯ ಬಿಕ್ಕಟ್ಟು ಹಾಗೂ ಬುಡಕಟ್ಟಿನ ಸಾಂಸ್ಕೃತಿಕ ಅಸ್ಮಿತೆ ಕುರಿತ ವಿಚಾರಗೋಷ್ಠಿ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ವನಕಲ್ಲು ಶ್ರೀ ಪ್ರಶಸ್ತಿ ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ನೀಡಲಾಗುತ್ತಿದೆ. ಜಗಜ್ಯೋತಿ ಪ್ರಶಸ್ತಿಯನ್ನು ಸಚಿವ ಕೆ. ಎಚ್.ಮುನಿಯಪ್ಪ ಅವರಿಗೆ ಪ್ರದಾನ ಮಾಡಲಾಗುವುದು. ಡಾ.ಬಿ.ಚಿಕ್ಕಪ್ಪಯ್ಯ ಅವರಿಗೆ ವಿಶ್ವಜ್ಯೋತಿ ಪ್ರಶಸ್ತಿ, ಪ್ರೊ.ವೆಂಕಟೇಶಮೂರ್ತಿ ಅವರಿಗೆ ಸಿದ್ದಯೋಗ ಶ್ರೀ ಪ್ರಶಸ್ತಿ, ಎಸ್.ಎಲ್.ಭೋಜೇಗೌಡ ಅವರಿಗೆ ಶ್ರೀ ಬಾಲಗಂಗಾಧರನಾಥ ನಿರ್ಮಲ ಜ್ಯೋತಿ ಪ್ರಶಸ್ತಿ ಹಾಗೂ ವಿ.ವೀರೇಶ್ ಅವರಿಗೆ ಶರಣ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದ ಅವರು ಮಾ.1 ಭಾನುವಾರ ಮಧ್ಯಾಹ್ನ 1.30 ಕ್ಕೆ ವನಕಲ್ಲು ಮಲ್ಲೇಶ್ವರ ಸ್ವಾಮಿ ಬ್ರಹ್ಮರಥೋತ್ಸವ, ವಚನ ಸಾಹಿತ್ಯ ವಿಜಯ ರಥೋತ್ಸವ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಕಾಡುಗೊಲ್ಲ ಸಮಾಜದ ಮುಖಂಡರಾದ ವಕೀಲ ದೊಡ್ಡಯ್ಯ, ಶಿವಣ್ಣ, ಕಂಬೇರಹಟ್ಟಿ ನಾಗರಾಜು, ತಾಪಂ ಮಾಜಿ ಸದಸ್ಯ ತಿಮ್ಮಣ್ಣ, ಲಿಂಗರಾಜು, ಶ್ರೀನಿವಾಸ್, ಜಯಣ್ಣ, ಸದಾಶಿವ ಇತರರು ಇದ್ದರು.