ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Tumkur News: ಜ್ಯುವೆಲರಿ ಶಾಪ್‌ನಲ್ಲಿ 10 ಲಕ್ಷ ಮೌಲ್ಯದ ವಜ್ರ, ಚಿನ್ನಾಭರಣ ಕಳ್ಳತನ; ಕದ್ದಿದ್ದು ಮನುಷ್ಯನಲ್ಲ, ಇಲಿಯೇ ಕಳ್ಳ!

ತುಮಕೂರು ನಗರದ ಕಾಲ್‌ಟೆಕ್ಸ್ ವೃತ್ತದ ಬಳಿ ಇರುವ ‘ವಿಶ್ವಾಸ್‌ ಜ್ಯುವೆಲರಿ ಶಾಪ್‌ʼ ನಲ್ಲಿ ಈ ವಿಚಿತ್ರ ಘಟನೆ ಜರುಗಿದೆ. ಅಂಗಡಿಯಲ್ಲಿದ್ದ 50 ಗ್ರಾಂ ಗೂ ಅಧಿಕ ತೂಕದ, ಅಂದರೆ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ವಜ್ರ ಖಚಿತ ಸರಗಳು ಹಾಗೂ ಉಂಗುರಗಳು ನಾಪತ್ತೆಯಾಗಿದ್ದವು. ಆದರೆ ಇದರ ಹಿಂದೆ ಯಾವುದೇ ಮಾನವ ಕಳ್ಳನ ಕೈವಾಡವಿಲ್ಲ, ಬದಲಿಗೆ ಕಳ್ಳತನ ಮಾಡಿದ್ದು ಪುಟ್ಟ ಇಲಿ ಎಂಬುದು ಸಿಸಿಟಿವಿ ದೃಶ್ಯಗಳಿಂದ ಬಹಿರಂಗಗೊಂಡಿದೆ.

ಜ್ಯುವೆಲರಿ ಶಾಪ್‌ನಲ್ಲಿ ಚಿನ್ನಾಭರಣ ಕಳ್ಳತನ; ಕದ್ದಿದ್ದು ಮನುಷ್ಯನಲ್ಲ!

-

Profile
Siddalinga Swamy Jul 30, 2026 3:22 PM

ತುಮಕೂರು, ಜು.30: ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಜ್ಯುವೆಲರಿ ಅಂಗಡಿಯೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ವಜ್ರ ಖಚಿತ ಚಿನ್ನಾಭರಣಗಳು ಮಾಯವಾಗಿ, ಮಾಲೀಕರು ಮತ್ತು ಸಿಬ್ಬಂದಿ ಕಂಗಾಲಾದ ಘಟನೆ ನಗರದಲ್ಲಿ (Jewellery shop theft) ನಡೆದಿದೆ. ಆದರೆ, ಇದರ ಹಿಂದೆ ಯಾವುದೇ ಮಾನವ ಕಳ್ಳನ ಕೈವಾಡವಿಲ್ಲ, ಬದಲಿಗೆ ಕಳ್ಳತನ ಮಾಡಿದ್ದು ಒಂಟಿ ಸಲಗದಂತಹ ಪುಟ್ಟ ಇಲಿ ಎಂಬುದು ಸಿಸಿಟಿವಿ ದೃಶ್ಯಗಳಿಂದ ಬಹಿರಂಗಗೊಂಡಿದೆ.

ಘಟನೆಯ ವಿವರ

ನಗರದ ಕಾಲ್‌ಟೆಕ್ಸ್ ವೃತ್ತದ ಬಳಿ ಇರುವ ‘ವಿಶ್ವಾಸ್‌ ಜ್ಯುವೆಲರಿ ಶಾಪ್‌ʼ ನಲ್ಲಿ ಈ ವಿಚಿತ್ರ ಘಟನೆ ಜರುಗಿದೆ. ಬೆಳಗ್ಗೆ ಬಂದು ಅಂಗಡಿ ತೆರೆದ ಸಿಬ್ಬಂದಿಗೆ ದೊಡ್ಡ ಆಘಾತ ಕಾದಿತ್ತು. ಅಂಗಡಿಯಲ್ಲಿದ್ದ 50 ಗ್ರಾಂ ಗೂ ಅಧಿಕ ತೂಕದ, ಅಂದರೆ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ವಜ್ರ ಖಚಿತ ಸರಗಳು ಹಾಗೂ ಉಂಗುರಗಳು ನಾಪತ್ತೆಯಾಗಿದ್ದವು.

ಬೆಚ್ಚಿಬೀಳಿಸಿದ ರಹಸ್ಯ

ಅಂಗಡಿಯ ಷಟರ್ ಮುರಿದಿರಲಿಲ್ಲ ಮತ್ತು ಒಳಗೆ ಯಾರೂ ಅಕ್ರಮವಾಗಿ ಪ್ರವೇಶಿಸಿದ ಸುಳಿವೂ ಇರಲಿಲ್ಲ. ಪೊಲೀಸರಿಗೆ ದೂರು ನೀಡುವ ಮುನ್ನ ಮಾಲೀಕರು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ, ಅಲ್ಲಿ ಕಳ್ಳನ ಬದಲು ಇಲಿಯೊಂದರ ಚೇಷ್ಟೆ ಕಂಡು ದಂಗಾಗಿದ್ದಾರೆ. ಅಂಗಡಿಯಲ್ಲಿ ಒಂದಲ್ಲ, ಎರಡಲ್ಲ, ಬರೊಬ್ಬರಿ 10 ಉಂಗುರಗಳು ಮತ್ತು 3 ಸರಗಳನ್ನು ಇಲಿ ಎತ್ತಿಕೊಂಡು ಹೋಗಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

Gold Price Today On 30th July 2026: ಚಿನ್ನದ ದರದಲ್ಲಿಂದು ಕೊಂಚ ಏರಿಕೆ; ಬೆಲೆ ಇಲ್ಲಿದೆ ನೋಡಿ

ಬಿಲ ತೋಡಿದಾಗ ಸಿಕ್ಕಿತು ನಿಧಿ

ಇಲಿ ಮಾಡಿದ ಕೃತ್ಯವನ್ನು ಸಿಸಿಟಿವಿಯಲ್ಲಿ ಗಮನಿಸಿದ ಸಿಬ್ಬಂದಿ, ತಕ್ಷಣವೇ ಅದರ ಜಾಡು ಹಿಡಿದು ಹುಡುಕಾಟ ನಡೆಸಿದರು. ಅಂಗಡಿಯ ಒಳಗೆ ಇಲಿ ಬಿಲ ತೋಡಿರುವುದನ್ನು ಗಮನಿಸಿ, ಕೂಡಲೇ ಆ ಬಿಲವನ್ನು ಅಗೆದು ಪರಿಶೀಲಿಸಿದಾಗ ಕಳುವಾಗಿದ್ದ ಎಲ್ಲಾ ವಜ್ರ ಖಚಿತ ಚಿನ್ನಾಭರಣಗಳು ಸುರಕ್ಷಿತವಾಗಿ ಪತ್ತೆಯಾಗಿವೆ.‌ ಆಭರಣಗಳು ಸಿಕ್ಕಿದ್ದರಿಂದ ಮಾಲೀಕ ನಿಟ್ಟುಸಿರು ಬಿಡುವಂತಾಗಿದೆ.