ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Koratagere News: ಕೊರಟಗೆರೆಯಲ್ಲಿ ಬೋನಿಗೆ ಬಿದ್ದ ಚಿರತೆ; ನಿಟ್ಟುಸಿರು ಬಿಟ್ಟ ಜನ

ಕೊರಟಗೆರೆ ಪಟ್ಟಣದ ಕಾವಲುಬೀಳು ಗ್ರಾಮದಲ್ಲಿ ಸಾಕುನಾಯಿ ಮೇಲೆ ಮಂಗಳವಾರ ರಾತ್ರಿ ಚಿರತೆ ದಾಳಿ ನಡೆಸಿತ್ತು. ಇದರಿಂದ ಜನ ಭಯಭೀತರಾಗಿದ್ದರು. ಇದೀಗ ಎರಡು ವರ್ಷ ಚಿರತೆಯು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ. ಚಿರತೆ ಸ್ಥಳಾಂತರಕ್ಕೆ ಅರಣ್ಯ ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ.

ಕೊರಟಗೆರೆಯಲ್ಲಿ ಬೋನಿಗೆ ಬಿದ್ದ ಚಿರತೆ; ನಿಟ್ಟುಸಿರು ಬಿಟ್ಟ ಜನ

ಕೊರಟಗೆರೆಯಲ್ಲಿ ಸೆರೆಯಾದ ಚಿರತೆ. -

Prabhakara R
Prabhakara R Jan 16, 2026 2:14 PM

ಕೊರಟಗೆರೆ: ಪಟ್ಟಣದ 4ನೇ ವಾರ್ಡ್‌ನ ಕಾವಲುಬೀಳು ಗ್ರಾಮದ ನಿವಾಸಿ ರಮೇಶ್ ಎಂಬುವರ ಸಾಕುನಾಯಿ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿದ್ದ ಚಿರತೆಯನ್ನು ಸೆರೆ (leopard captured) ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಚಿರತೆ ದಾಳಿ ಹಿನ್ನೆಲೆಯಲ್ಲಿ ಪಟ್ಟಣದ ನಿವಾಸಿಗಳು ಭಯಭೀತರಾಗಿದ್ದರು. ಇದೀಗ ಎರಡು ವರ್ಷ ಚಿರತೆಯು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.

ಚಿರತೆ ಸೆರೆಗೆ ಕ್ರಮ ಕೈಗೊಳ್ಳಲು ಜನರು ಆಗ್ರಹಿಸಿದ್ದರು. ಇದೀಗ ಚಿರತೆ ಸೆರೆಯಾಗಿದ್ದರಿಂದ ಅದನ್ನು ನೋಡಲು ಪಟ್ಟಣದ ಜನತೆ ಮುಗಿಬಿದ್ದಿರುವುದು ಕಂಡುಬಂದಿದೆ. ಹಿರೇಬೆಟ್ಟ ರಕ್ಷಿತ ಅರಣ್ಯ ಪ್ರದೇಶದಲ್ಲಿ ಚಿರತೆಗಳ ಉಪಟಳ ಹೆಚ್ಚುಗುತ್ತಿರುವುದರ ಬಗ್ಗೆ ಗಮನಹರಿಸಿದ ಅರಣ್ಯ ಇಲಾಖೆ ತಕ್ಷಣ ಕ್ರಮವಹಿಸಿರುವುದರಿಂದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

ವಿಷಯ ತಿಳಿದ ತಕ್ಷಣ ಡಿಆರ್‌ಎಫ್ಒ ದಿಲೀಪ್ ಸೇರಿ ಸಿಬ್ಬಂದಿ ಸ್ಥಳಕ್ಕೆ ಬಂದು‌ ಚಿರತೆಯನ್ನು ಸ್ಥಳಾಂತರಿಸುವ ಕಾರ್ಯ ಮಾಡಿದ್ದಾರೆ.

ಸೈಕಲ್ ಸವಾರಿ ಮಾಡುತ್ತಿದ್ದ 8 ವರ್ಷದ ಬಾಲಕ ಗಾಳಿಪಟದ ದಾರಕ್ಕೆ ಸಿಲುಕಿ ಸಾವು

ಚಿರತೆ ದಾಳಿ ವೇಳೆ ಅಡಕೆ ಮರವೇರಿ ಪ್ರಾಣ ಉಳಿಸಿಕೊಂಡ ವ್ಯಕ್ತಿ

ಮಂಗಳೂರು: ಚಿರತೆ ದಾಳಿ ವೇಳೆ ಅಡಕೆ ಮರವೇರಿ ವ್ಯಕ್ತಿಯೊಬ್ಬರು ಪ್ರಾಣ ಉಳಿಸಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಗ್ರಾಮದ ಅಂಡಿರುಮಾರು ಪ್ರದೇಶದಲ್ಲಿ ನಡೆದಿದೆ. ಚಿರತೆಯ ದಾಳಿಯ ವೇಳೆ ಅಡಿಕೆ ಮರವೇರಿ ಮಂಜಪ್ಪ ನಾಯಕ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಳಗ್ಗೆ ಮನೆಯ ಮುಂದೆಯೇ ಚಿರತೆ ಪ್ರತ್ಯಕ್ಷವಾಗಿತ್ತು. ಚಿರತೆ ದಾಳಿ ಮಾಡಿದ ತಕ್ಷಣ ಮಂಜಪ್ಪ ಅಡಿಕೆ ಮರವೇರಿದ್ದಾರೆ. ಆದರೂ ಮಂಜಪ್ಪ ನಾಯಕನ ಕಾಲನ್ನು ಕಚ್ಚಿ ಚಿರತೆ ಎಳೆದು ಬಿಸಾಡಿತ್ತು. ಈ ವೇಳೆ ಮಂಜಪ್ಪ ನಾಯಕ ಜೋರಾಗಿ ಕೂಗಿಕೊಂಡಿದ್ದಾರೆ. ಮನೆಯವರು ಹೊರಬಂದು ಕೂಗಿದಾಗ ಚಿರತೆ ಅಲ್ಲಿಂದ ಓಡಿಹೋಗಿದೆ. ಮಂಜಪ್ಪನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.