ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

U T Khader: ಆಂಧ್ರದಲ್ಲಿಯೂ ಯು.ಟಿ.ಖಾದರ್ ಖದರ್

ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿದ ಸಚಿವರನ್ನು ಸ್ಥಳೀಯ ಮುಖಂಡರು, ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಅಭಿಮಾನಿಗಳು ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಕರ್ನಾಟಕದಲ್ಲಿ ಜನಸ್ನೇಹಿ ನಾಯಕನಾಗಿ ಗುರುತಿಸಿಕೊಂಡಿರುವ ಯು.ಟಿ. ಖಾದರ್ ಅವರಿಗೆ ಆಂಧ್ರ ಪ್ರದೇಶದಲ್ಲಿಯೂ ಉತ್ತಮ ಅಭಿಮಾನಿ ಬಳಗವಿರುವುದು ಈ ಸಂದರ್ಭದಲ್ಲಿ ಮತ್ತೊಮ್ಮೆ ಸಾಬೀತಾಯಿತು.

U T Khader: ಆಂಧ್ರದಲ್ಲಿಯೂ ಯು.ಟಿ.ಖಾದರ್ ಖದರ್

-

Profile
Ashok Nayak Jun 17, 2026 6:18 PM

ಪಾವಗಡ: ಕರ್ನೂಲು (ಆಂಧ್ರ ಪ್ರದೇಶ): ಕರ್ನಾಟಕ ರಾಜ್ಯದ ಆರೋಗ್ಯ ಸಚಿವ ಯು.ಟಿ. ಖಾದರ್(Health Minister U T Khader)ಅವರು ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅಭಿಮಾನಿಗಳು ಹಾಗೂ ಬೆಂಬಲಿಗ ರಿಂದ ಭರ್ಜರಿ ಸ್ವಾಗತ ದೊರೆಯಿತು.

UTK at

ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿದ ಸಚಿವರನ್ನು ಸ್ಥಳೀಯ ಮುಖಂಡರು, ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಅಭಿಮಾನಿಗಳು ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಕರ್ನಾಟಕದಲ್ಲಿ ಜನಸ್ನೇಹಿ ನಾಯಕನಾಗಿ ಗುರುತಿಸಿಕೊಂಡಿರುವ ಯು.ಟಿ. ಖಾದರ್ ಅವರಿಗೆ ಆಂಧ್ರ ಪ್ರದೇಶದಲ್ಲಿಯೂ ಉತ್ತಮ ಅಭಿಮಾನಿ ಬಳಗವಿರುವುದು ಈ ಸಂದರ್ಭದಲ್ಲಿ ಮತ್ತೊಮ್ಮೆ ಸಾಬೀತಾಯಿತು.

ಇದನ್ನೂ ಓದಿ: Ministry for U T Khader: ಕರಾವಳಿಗೆ ಖಾದರ್ ಸಾಹೇಬರ ಖದರ್ ಆಡಳಿತ ಭಾಗ್ಯ!

ಕಾರ್ಯಕ್ರಮದಲ್ಲಿ ಮಾತನಾಡಿದ ಹಲವರು, ಖಾದರ್ ಅವರ ಸರಳ ವ್ಯಕ್ತಿತ್ವ, ಜನಪರ ಆಡಳಿತ ಶೈಲಿ ಹಾಗೂ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು. ಅವರ ಆಗಮನದಿಂದ ಕಾರ್ಯ ಕ್ರಮಕ್ಕೆ ವಿಶೇಷ ಮೆರುಗು ಬಂದಿದ್ದು, ಅಭಿಮಾನಿಗಳು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು.

UTK 3

ಯು.ಟಿ.ಖಾದರ್ ಅವರ ಭೇಟಿ ಹಿನ್ನೆಲೆಯಲ್ಲಿ ಕಾರ್ಯಕ್ರಮ ಸ್ಥಳದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಕರ್ನಾಟಕದ ನಾಯಕರಿಗೆ ಗಡಿ ಭಾಗಗಳಲ್ಲಿಯೂ ಇರುವ ಜನಪ್ರಿಯತೆಯ ಬಗ್ಗೆ ಚರ್ಚೆಗಳು ನಡೆಯಿತು. ಆಂಧ್ರ ಪ್ರದೇಶದಲ್ಲಿಯೂ ಖಾದರ್ ಅವರಿಗೆ ದೊರೆತ ಅಭಿಮಾನಿಗಳ ಬೆಂಬಲ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಸೋಲಾರ್ ಕಿಂಗ್ ಮಾಲಿಕ ಮೆಹಬೂಬ್ ಶೇಕ್ ಬಾಷ. ಆಂದ್ರ ವಕ್ವ್ ಸಚಿವ ಎಂ.ಡಿ.ಫಾರುಕ್. ಕಾರ್ಯಕ್ರಮದಲ್ಲಿ ಹಲವಾರ ಮಂದಿ ಭಾಗವಹಿಸಿದ್ದರು.