Tumkur News: ರೈಲಿಗೆ ಸಿಲುಕಿ ಯುವಕ ದುರ್ಮರಣ; ತುಂಡು ತುಂಡಾದ ದೇಹ!
Tumkur News: ಬೆಂಗಳೂರಿನಿಂದ ತುಮಕೂರಿಗೆ ಪುಷ್ಪಕ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬರುತ್ತಿದ್ದ ವೇಳೆ ಯುವಕ ಆಯತಪ್ಪಿ ರೈಲಿನಡಿ ಸಿಲುಕಿ ದುರಂತ ಸಂಭವಿಸಿದೆ. ರೈಲಿಗೆ ಸಿಲುಕಿದ ರಭಸದಲ್ಲಿ ಯುವಕನ ದೇಹ ತುಂಡು ತುಂಡಾಗಿದೆ.
ತುಮಕೂರು: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ, ರೈಲಿನಡಿ ಸಿಲುಕಿ ಯುವಕ ದುರ್ಮರಣ ಹೊಂದಿದ ಘಟನೆ ನಗರದ (Tumkur News) ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂ 4 ರಲ್ಲಿ ಘಟನೆ ಸಂಭವಿಸಿದೆ. ತುರುವೇಕೆರೆ ತಾಲೂಕಿನ ಅಮ್ಮಸಂದ್ರ ಗ್ರಾಮದ ಛಾಯಾಂಕ್ (24) ಮೃತ ಯುವಕ.
ಬೆಂಗಳೂರಿನಿಂದ ತುಮಕೂರಿಗೆ ಪುಷ್ಪಕ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬರುತ್ತಿದ್ದ ಯುವಕ ಆಯತಪ್ಪಿ ರೈಲಿನಡಿ ಬಿದ್ದಿದ್ದ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ. ಈತ ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ರೈಲಿಗೆ ಸಿಲುಕಿದ ರಭಸದಲ್ಲಿ ಯುವಕನ ದೇಹ ತುಂಡು ತುಂಡಾಗಿತ್ತು. ತುಮಕೂರು ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ಪಂಗನಾಮ: ಆಕಾಶ್ ಜ್ಯುವೆಲ್ಲರ್ಸ್ ಮಾಲೀಕ, ಪತ್ನಿ ಬಂಧನ
ತುಮಕೂರು: ಕಡಿಮೆ ಬೆಲೆಗೆ ಚಿನ್ನ ಖರೀದಿಸಿ, ಬೆಲೆ ಹೆಚ್ಚಾದಾಗ ಮಾರಾಟ ಮಾಡಿ ದುಪ್ಪಟ್ಟು ಲಾಭ ಕೊಡುವುದಾಗಿ ಗ್ರಾಹಕರಿಗೆ ನಂಬಿಸಿ ಕೋಟ್ಯಂತರ ರುಪಾಯಿ ವಂಚಿಸಿ ಪರಾರಿಯಾಗಿದ್ದ ನಗರದ ಆಕಾಶ್ ಜ್ಯುವೆಲ್ಲರ್ಸ್, ಆಕಾಶ್ ಕೋ ಆಪರೇಟಿವ್ ಸೊಸೈಟಿ ಮಾಲೀಕ ಶಿವಾನಂದಮೂರ್ತಿ, ಪತ್ನಿ ಅನ್ನಪೂರ್ಣ ಅವರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸೊಸೈಟಿ ಗ್ರಾಹಕರಾಗಿದ್ದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಸಿದ್ಧಲಿಂಗಪ್ಪ ನೀಡಿದ ದೂರಿನ ಮೇರೆಗೆ ಶಿವಾನಂದಮೂರ್ತಿ, ಅನ್ನಪೂರ್ಣ, ಪುತ್ರ ಆಕಾಶ್ ಮತ್ತು ಇತರರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಬೆಂಗಳೂರಿನಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.
ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪೊಲೀಸ್ ವಶಕ್ಕೆ ಪಡೆದು ತನಿಖೆ ನಡೆಸಲಾಗುವುದು. ಜನರಿಂದ ಪಡೆದ ಹಣ ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ ಎಂಬುವುದು ತನಿಖೆಯಿಂದ ತಿಳಿಯಲಿದೆ.
ಆಕಾಶ್ ಜ್ಯುವೆಲ್ಲರ್ಸ್ ಮಾಲೀಕರ ವಿರುದ್ಧ ಜ.29ರಿಂದ ಫೆ.2ರ ವರೆಗೆ ನಗರ ಠಾಣೆಯಲ್ಲಿ 56 ದೂರುಗಳು ಸಲ್ಲಿಕೆಯಾಗಿವೆ. ಮೊದಲ ದಿನ 50 ಕ್ಕೂ ಹೆಚ್ಚು ದೂರು ಸಲ್ಲಿಕೆಯಾಗಿತ್ತು. ಸಲ್ಲಿಕೆಯಾದ ದೂರುಗಳನ್ವಯ ಈವರೆಗೆ ಸುಮಾರು 18 ಕೋಟಿ ವಂಚಿಸಿರುವುದು ಬೆಳಕಿಗೆ ಬಂದಿದೆ.
ಈ ಸುದ್ದಿಯನ್ನೂ ಓದಿ | Viral Video: ಇದೆಂಥಾ ಅಸಹ್ಯ! ತಯಾರಿಸಿಟ್ಟ ಜಾಮೂನ್ ಗೆ ಮೂತ್ರ ವಿಸರ್ಜನೆ ಮಾಡಿದ ಕೊಳಕ! ವಿಡಿಯೊ ವೈರಲ್!
ಜ್ಯುವೆಲರಿ ಹಾಗೂ ಸೊಸೈಟಿಯಲ್ಲಿ ವಂಚನೆ
ಹಣ ಹೂಡಿಕೆ ಮಾಡಿ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾದಾಗ ಚಿನ್ನ ಖರೀದಿಸಿ ದರ ಹೆಚ್ಚಾದಾಗ ಮಾರಾಟ ಮಾಡಿ ಅಧಿಕ ಲಾಭ ನೀಡುವುದಾಗಿ ಜ್ಯುವೆಲ್ಲರ್ಸ್ ಮಾಲೀಕ ನಂಬಿಸಿದ್ದರು. ಹಣಕ್ಕೆ ಪ್ರತಿಯಾಗಿ ಆಕಾಶ್ ಜ್ಯುವೆಲ್ಲರ್ಸ್‌ಗೆ ಸಂಬಂಧಿಸಿದ ಠೇವಣಿ ಪ್ರಮಾಣ ಪತ್ರ ನೀಡುವುದಾಗಿ ತಿಳಿಸಿದ್ದರು. ಇದನ್ನು ನಂಬಿ ಹಣ ಹೂಡಿಕೆ ಮಾಡಿದ್ದರು.