Sirsi Breaking: ಬಸ್ ನಿಲ್ದಾಣದಲ್ಲಿ ಸಾಗರ ಮೂಲದ ವ್ಯಕ್ತಿಗೆ ಚಾಕು ಇರಿದು ಹತ್ಯೆ, ಅರ್ಧಗಂಟೆಯಲ್ಲೆ ಪಾತಕಿ ಬಂಧನ
ಇಬ್ಬರೂ ಮದುವೆಯಾಗಿ ಆರು ತಿಂಗಳು ಮಾತ್ರ ಕಳೆದಿದ್ದು ಸಾಗರ ಮೂಲದ ಗಂಗಾಧರ. ಶಿರಸಿ ಯ ಅಚ್ಚನಳ್ಳಿಯ ಯುವತಿಯನ್ನ ಮದುವೆ ಯಾಗಿದ್ದ ಕಾರ್ಯಕ್ರಮದ ನಿಮಿತ್ತ ಶಿರಸಿ ಅಚ್ಚ ನಳ್ಳಿಯಲ್ಲಿರುವ ಮಾವನ ಮನೆಗೆ ದಂಪತಿಗಳು ಆಗಮಿಸಿದ್ದರು. ಶನಿವಾರ ಕಾರ್ಯಕ್ರಮ ಮುಗಿಸಿ ಮರಳುವಾಗ ಬೆಂಗಳೂರಿಗೆ ತೆರಳುತ್ತಿರುವ ಸಂದರ್ಭದಲ್ಲಿ ಈ ಕೃತ್ಯ ಎಸಗಲಾಗಿದೆ


ಶಿರಸಿ : ಉತ್ತರಕನ್ನಡ ಜಿಲ್ಲೆಯ ಶಿರಸಿ ಬಸ್ ನಿಲ್ದಾಣದಲ್ಲಿ ಪತ್ನಿಯೊಂದಿಗೆ ಶಿರಸಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ವೇಳೆ ಸಾಗರ ಮೂಲದ ವ್ಯಕ್ತಿ ಓರ್ವನಿಗೆ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೊಲೆಯಾದ ಅರ್ಧಗಂಟೆಯಲ್ಲೆ ಕೊಲೆ ಪಾತಕಿಯನ್ನ ಪೊಲೀಸರು ಬಂಧಿಸಿದ್ದಾರೆ. ಗಂಗಾಧರ ಕೊಲೆಯಾದ ದುರ್ದೈವಿ. ಈತ. ತನ್ನ ಪತ್ನಿ ಯೊಂದಿಗೆ ಶಿರಸಿ ಯಿಂದ ಬಸ್ ಹತ್ತಿ ಬೆಂಗಳೂರು ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ಇದನ್ನೂ ಓದಿ: Crime News: ರಾಮಮಂದಿರ ಅವಹೇಳನ ಮಾಡಿದ ವ್ಯಕ್ತಿಗೆ 60 ದಿನಗಳ ಜೈಲುಶಿಕ್ಷೆ
ಇಬ್ಬರೂ ಮದುವೆಯಾಗಿ ಆರು ತಿಂಗಳು ಮಾತ್ರ ಕಳೆದಿದ್ದು ಸಾಗರ ಮೂಲದ ಗಂಗಾಧರ. ಶಿರಸಿಯ ಅಚ್ಚನಳ್ಳಿಯ ಯುವತಿಯನ್ನ ಮದುವೆ ಯಾಗಿದ್ದ ಕಾರ್ಯಕ್ರಮದ ನಿಮಿತ್ತ ಶಿರಸಿ ಅಚ್ಚನಳ್ಳಿಯಲ್ಲಿರುವ ಮಾವನ ಮನೆಗೆ ದಂಪತಿಗಳು ಆಗಮಿಸಿದ್ದರು. ಶನಿವಾರ ಕಾರ್ಯಕ್ರಮ ಮುಗಿಸಿ ಮರಳುವಾಗ ಬೆಂಗಳೂರಿಗೆ ತೆರಳುತ್ತಿರುವ ಸಂದರ್ಭದಲ್ಲಿ ಈ ಕೃತ್ಯ ಎಸಗಲಾಗಿದೆ.
ಪ್ರೀತಮ್ ಎಂಬಾತ ಕೊಲೆ ಮಾಡಿದ ಆರೋಪಿ. ಕೊಲೆ ಮಾಡಿ ಬಸ್‌ನಿಂದ ಪರಾರಿ ಯಾಗಿದ್ದ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಅರ್ಧ ಗಂಟೆಯಲ್ಲೇ ಕೊಲೆಗಾರನ ಬಂಧನ: ಕೊಲೆಯಾದ ಅರ್ಧ ಗಂಟೆಯಲ್ಲಿ ಕೊಲೆ ಆರೋಪಿಯನ್ನ ಬಂಧಿಸಲಾಗಿದೆ. ಶಿರಸಿ ಸರಕಾರಿ ಆಸ್ಪತ್ರೆ ಬಳಿ ಚಲಿಸುವ ಬಸ್ ನಲ್ಲೇ ಆರೋಪಿ ಪ್ರೀತಮ್ ಡಿಸೋಜ, ದುಂಡಶಿನಗರ ಶಿರಸಿ ಎಂಬಾತನನ್ನ ಬಂಧಿಸಿದ್ದಾರೆ ಎನ್ನಲಾಗಿದೆ.