Nuclear power plant: ಕೈಗಾ 5&6 ನೇ ಘಟಕದ ಪ್ರಥಮ ಕಾಂಕ್ರೀಟೀಕರಣಕ್ಕೆ ಚಾಲನೆ
ಕಾರವಾರ ತಾಲೂಕಿನ ಕೈಗಾದಲ್ಲಿ 2000 ರಲ್ಲಿ ಕೈಗಾ ಅಣು ವಿದ್ಯುತ್ ಉತ್ಪಾದನೆ ಕೇಂದ್ರ ಪ್ರಾರಂಭಗೊಂಡಿತ್ತು.ಪ್ರಸ್ತುತ 220 ಮೆಗಾವ್ಯಾಟ್ ಸಾಮರ್ಥ್ಯದ 4 ಅಣು ಘಟಕಗಳು ವಿದ್ಯುತ್ ಉತ್ಪಾದನೆ ನಡೆಸುತ್ತಿದೆ. ಈ ನಾಲ್ಕು ಘಟಕದಿಂದ 2,280 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ನಡೆಸುತ್ತಿದೆ.ವಿದ್ಯುತ್ ಉತ್ಪಾದನೆ ಬೇಡಿಕೆ ಹಿನ್ನಲೆಯಲ್ಲಿ ತಲಾ 700 ಮ್ಯಾಗಾ ವ್ಯಾಟ್ ನ ಗುರಿಯೊಂದಿಗೆ 2025 ರಲ್ಲಿ 5 ಮತ್ತು 6 ನೇ ಘಟಕ ಕಾಮಗಾರಿಗೆ ಚಾಲನೆ ನೀಡಲಾಗಿತ್ತು
-
ಶಿರಸಿ: ದೇಶದ ಪ್ರಮುಖ ಅಣು ವಿದ್ಯುತ್ ಉತ್ಪಾದನಾ ಘಟಕದಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿ 21 ಸಾವಿರ ಕೋಟಿ ವೆಚ್ಚದಲ್ಲಿನ 5 ಮತ್ತು 6 ನೇ ಅಣು ವಿದ್ಯುತ್ ಘಟಕ ನಿರ್ಮಾಣವಾಗುತಿದ್ದು ಭಾನುವಾರ ಈ ಘಟಕಗಳ ನಿರ್ಮಾಣ ಕಾರ್ಯ ಕ್ಕೆ ಅಣು ಶಕ್ತಿ ಆಯೋಗ(Atomic Energy Commission)ದ ಅಧ್ಯಕ್ಷ ಡಾ.ಅಜಿತ್ ಕುಮಾರ್ ಮೊಹಂತಿ ಕಾಂಕ್ರೀಟೀಕರಣಕ್ಕೆ ಚಾಲನೆ ನೀಡಿದರು.
ಇದನ್ನೂ ಓದಿ: Sirsi News: 'ನೀ ಹೂ ಅಂದ್ರ ಗಿಚ್ಚ ಆಕ್ಕೇನಿ ಇಲ್ಲಂದ್ರ ಹುಚ್ಚಕ್ಕೇನಿ' ಆರಂಭ
ಕಾರವಾರ ತಾಲೂಕಿನ ಕೈಗಾದಲ್ಲಿ 2000 ರಲ್ಲಿ ಕೈಗಾ ಅಣು ವಿದ್ಯುತ್ ಉತ್ಪಾದನೆ ಕೇಂದ್ರ ಪ್ರಾರಂಭಗೊಂಡಿತ್ತು.ಪ್ರಸ್ತುತ 220 ಮೆಗಾವ್ಯಾಟ್ ಸಾಮರ್ಥ್ಯದ 4 ಅಣು ಘಟಕಗಳು ವಿದ್ಯುತ್ ಉತ್ಪಾದನೆ ನಡೆಸುತ್ತಿದೆ. ಈ ನಾಲ್ಕು ಘಟಕದಿಂದ 2,280 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ನಡೆಸುತ್ತಿದೆ.ವಿದ್ಯುತ್ ಉತ್ಪಾದನೆ ಬೇಡಿಕೆ ಹಿನ್ನಲೆಯಲ್ಲಿ ತಲಾ 700 ಮ್ಯಾಗಾ ವ್ಯಾಟ್ ನ ಗುರಿಯೊಂದಿಗೆ 2025 ರಲ್ಲಿ 5 ಮತ್ತು 6 ನೇ ಘಟಕ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.
ಇಂದು ಇದರ ಕಾಂಕ್ರೀಟೀಕರಣಕ್ಕೆ ಅಣು ಶಕ್ತಿ ಆಯೋಗದ ಅಧ್ಯಕ್ಷ ಅಜಿತ್ ಕುಮಾರ್ ಮೊಹಂತಿ ಚಾಲನೆ ನೀಡಿದ್ದು ಈ ಸಂದರ್ಭದಲ್ಲಿ ಎನ್.ಪಿ.ಸಿ. ಎಲ್. ಕೈಗಾ ದ ಸೈಟ್ ಡೈರೆಕ್ಟರ್ ಬಿ.ವಿನೋದ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದು ,ಈ ಘಟಕಗಳು 2030 ರ ವೇಳೆಗೆ ನಿರ್ಮಾಣ ಕಾಮಗಾರಿ ಮುಗಿಸುವ ಗುರಿ ಹೊಂದಲಾಗಿದೆ.