ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಾರವಾರ ಶಾಸಕ ಸತೀಶ್ ಸೈಲ್‌ ಪುತ್ರಿ ಸಾಧ್ವಿಗೆ ಒಲಿದ ಮಿಸ್ ಇಂಡಿಯಾ ಕಿರೀಟ

Satish Sail daughter wins Miss India: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಶಾಸಕ ಸತೀಶ್ ಸೈಲ್ ಅವರ ಪುತ್ರಿ ಮಿಸ್ ಇಂಡಿಯಾ ವಿಜೇತೆಯಾಗಿದ್ದಾರೆ. ಏಪ್ರಿಲ್ 18, 2026 ರಂದು ಒಡಿಶಾದ ಭುವನೇಶ್ವರದಲ್ಲಿರುವ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ನಲ್ಲಿ ನಡೆದ 61 ನೇ ಮಿಸ್ ಇಂಡಿಯಾ ಆವೃತ್ತಿಯಲ್ಲಿ ಸಾಧ್ವಿ ಸತೀಶ್ ಸೈಲ್ ಅವರು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಕಾರವಾರ ಶಾಸಕ ಸತೀಶ್ ಸೈಲ್‌ ಪುತ್ರಿಗೆ ಮಿಸ್ ಇಂಡಿಯಾ ಕಿರೀಟ

ಕಾರವಾರ ಶಾಸಕ ಸತೀಶ್ ಸೈಲ್‌ ಪುತ್ರಿಗೆ ಮಿಸ್ ಇಂಡಿಯಾ ಕಿರೀಟ -

Priyanka P
Priyanka P Apr 19, 2026 1:15 PM

ಕಾರವಾರ, ಏ.19: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಶಾಸಕ ಸತೀಶ್ ಸೈಲ್‌ (Karwar MLA Satish Sail) ಅವರ ಪುತ್ರಿ ಮಿಸ್ ಇಂಡಿಯಾ ವಿಜೇತೆಯಾಗಿದ್ದಾರೆ. ಏಪ್ರಿಲ್ 18, 2026 ರಂದು ಒಡಿಶಾದ ಭುವನೇಶ್ವರದಲ್ಲಿರುವ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ನಲ್ಲಿ ನಡೆದ 61 ನೇ ಮಿಸ್ ಇಂಡಿಯಾ ಆವೃತ್ತಿಯಲ್ಲಿ ಸಾಧ್ವಿ ಸತೀಶ್ ಸೈಲ್‌ ಅವರು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಗೋವಾವನ್ನು ಪ್ರತಿನಿಧಿಸಿದ್ದ ಶಾಸಕರ ಪುತ್ರಿ ಸಾಧ್ವಿ ಮಿಸ್ ಇಂಡಿಯಾ ಆಗಿ ಹೊರಹೊಮ್ಮಿದ್ದಾರೆ.

ಕಳೆದ ಆವೃತ್ತಿಯಲ್ಲಿ ನಿಕಿತಾ ಪೋರ್ವಾಲ್ ಅವರು ಮಿಸ್ ಇಂಡಿಯಾ ಕಿರೀಟವನ್ನು ಧರಿಸಿದ್ದರು. ಇದೀಗ ಸಾಧ್ವಿ ಸತೀಶ್ ಅವರು ವಿಜೇತೆಯಾಗಿದ್ದು, 2027ರ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಸಿದ್ಧರಾಗಿದ್ದಾರೆ. ಮಿಸ್ ಇಂಡಿಯಾ ಫಿನಾಲೆಯನ್ನು ಮನೀಶ್ ಪಾಲ್ ಮತ್ತು ಸಾರಾ-ಜೇನ್ ಡಯಾಸ್ ಅವರು ನಿರೂಪಣೆ ಮಾಡಿದರು.

ಇಲ್ಲಿದೆ ವಿಡಿಯೊ:

ಕೊನೆಯ ಮೂವರು ಸ್ಪರ್ಧಿಗಳಾದ ಗೋವಾವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಶಾಸಕರ ಪುತ್ರಿ ಸಾಧ್ವಿ ಸತೀಶ್ ಸೈಲ್, ಮಹಾರಾಷ್ಟ್ರದ ರಾಜನಂದಿನಿ ಪವಾರ್ ಮತ್ತು ಕೇಂದ್ರಾಡಳಿತ ಪ್ರದೇಶದ ಶ್ರೀ ಅದ್ವೈತ ಅವರು ಅಂತಿಮ ಸುತ್ತಿಗೆ ಪ್ರವೇಶಿಸಿದ್ದರು. ಪ್ರಶ್ನೋತ್ತರ ಸುತ್ತಿನಲ್ಲಿ ಧೈರ್ಯ, ಬುದ್ಧಿಶಕ್ತಿಯಿಂದ ಉತ್ತರ ನೀಡಿದ ಸಾಧ್ವಿ, ಬಹಳ ಸುಂದರವಾಗಿ ಕಾಣುತ್ತಿದ್ದರು. ಬೆಳ್ಳಿ-ಕಪ್ಪು ಬಣ್ಣದ ಸ್ಲೀವ್‌ಲೆಸ್ ಗೌನ್ ಧರಿಸಿ ಸಾಧ್ವಿ ದಿಟ್ಟ ಹೇಳಿಕೆ ನೀಡಿದರು. ಕುತ್ತಿಗೆಗೆ ಆಕರ್ಷಕ ನೆಕ್ಲೇಸ್ ಧರಿಸಿದ್ದರು.

ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ ಹಿಂದೂ ಧರ್ಮಕ್ಕೆ ವಾಪಸ್: ಪಿಂಪ್ರಿ-ಚಿಂಚವಾಡದಲ್ಲಿ 'ಶುದ್ಧೀಕರಣ'

ಇನ್ನು ಮೊದಲ ರನ್ನರ್ ಅರ್ ಮಹಾರಾಷ್ಟ್ರದ ರಾಜನಂದಿನಿ ಪವಾರ್ ಅವರು ಬ್ಲಶ್-ಪಿಂಕ್ ಬಣ್ಣದ ಬಟ್ಟೆಯಲ್ಲಿ ಕಂಗೊಳಿಸಿದರು. ಹಾಗೆಯೇ ಎರಡನೇ ರನ್ನರ್ ಅಪ್ ಶ್ರೀ ಅದ್ವೈತ ಅವರು ಗೋಲ್ಡನ್ ಬಣ್ಣದ ಗೌನ್ ಧರಿಸಿದ್ದರು.

ಸದ್ಯ, 2026ರ 61ನೇ ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು ಗೋವಾವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಸುಂದರಿ ಸಾಧ್ವಿ ಸತೀಶ್ ಸೈಲ್ ಮುಡಿಗೇರಿಸಿಕೊಂಡಿದ್ದಾರೆ. ಮುಂಬರುವ ಅಂದರೆ 2027ರ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಅವರು ಸಿದ್ಧರಾಗಿದ್ದಾರೆ.