ಅಕ್ರಮ ಗುಜರಿ ಅಂಗಡಿ ಹಾವಳಿ ಕ್ರಮಕ್ಕೆ ಆಗ್ರಹ
ಗುಜರಿ ಅಂಗಡಿಯಲ್ಲಿ ಹಳೆಯ ಪ್ಲಾಸ್ಟಿಕ್ ಹಾಗೂ ವೈರ್‌ಗಳನ್ನು ಸುಡುವುದರಿಂದ ಬರುವ ವಿಷಕಾರಿ ಹೊಗೆಯಿಂದಾಗಿ ಸುತ್ತಮುತ್ತಲಿನ ನಿವಾಸಿಗಳು, ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ವೃದ್ಧರು ಉಸಿರಾಟದ ತೊಂದರೆ ಹಾಗೂ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಅಂಗಡಿಯಲ್ಲಿ ವರ್ಷಗಟ್ಟಲೆ ಗುಜರಿ ಸಾಮಾನುಗಳನ್ನು ರಾಶಿ ಹಾಕಲಾಗಿದೆ. ಇದರಲ್ಲಿ ಅನೇಕ ವಿಷಕಾರಿ ಹಾವುಗಳು ವಾಸವಿದ್ದು, ಹಗಲು-ರಾತ್ರಿ ಎನ್ನದೆ ಪಕ್ಕದ ಮನೆಗಳಿಗೆ ನುಗ್ಗುತ್ತಿವೆ. ಇದರಿಂದಾಗಿ ಜನರು ಆತಂಕದಲ್ಲಿ ಬದುಕು ವಂತಾಗಿದೆ.
-
ಶಿರಸಿ: ಕಸ್ತೂರ ಬಾ ನಗರದಲ್ಲಿ ಗುಜರಿ ಅಂಗಡಿಯೊಂದು ಸಾರ್ವಜನಿಕ ಸ್ಥಳೀಯರಿಗೆ ತೊಂದರೆ ಯಾಗಿದ್ದು ಈ ಕುರಿತು ಅಲ್ಲಿಯ ಸಾರ್ವಜನಿಕರು ನಮ್ಮಲ್ಲಿ ದೂರು ನೀಡಿದ್ದರು. ಅದರ ಪ್ರಕಾರ ನಾವು ಜಿಲ್ಲಾಧಿಕಾರಿ, ಎಸಿ ಗೆ ಹಾಗೂ ಸ್ಥಳೀಯ ಅಧಿಕಾರಿಗಲಕಿಗೂ ಮನವಿ ಪತ್ರ ಬರೆದಿದ್ದೆವು. ಆದರೆ ಅದತಿಂದ ಸರಿಯಾದ ಕ್ರಮ ಆಗಿಲ್ಲವಾದ್ದರಿಂದ ಸಾರ್ವಜನಿಕರ ಪರವಾಗಿ ಇಂದು ಪತ್ರಿಕಾಗೋಷ್ಠಿ ಕರೆಯುವ ಅನಿವಾರ್ಯ ಎದುರಾಗಿದೆ ಎಂದು ವಿಶ್ವಮಾನವ ಹಕ್ಕು ಜಿಲ್ಲಾಧ್ಯಕ್ಷೆ ಅರ್ಚನಾ ಹೇಳಿದರು.
ಅವರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಅತಿಕ್ರಮಣ ಸ್ಥಳದಲ್ಲಿ ಮೊಟಕಾ ಅಂಗಡಿಯನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿರುವುದರಿಂದ ಇದು ಸಾರ್ವಜನಿಕರ ಆರೋಗ್ಯ ದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದರು.
ಘಟನೆಯ ಹಿನ್ನೆಲೆ: ಶಿರಸಿ ನಗರಸಭೆ ವ್ಯಾಪ್ತಿಯ ಕಸ್ತೂರಬಾ ನಗರದಲ್ಲಿ 'ಅಬ್ದುಲ್ ಘನಿ ಖಾನ್' ಎಂಬುವವರು ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಗುಜರಿ ಅಂಗಡಿಯನ್ನು ನಡೆಸು ತ್ತಿದ್ದಾರೆ. ಈ ಅಂಗಡಿಯು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದಲ್ಲದೆ, ಸಾರ್ವ ಜನಿಕ ರಸ್ತೆಯನ್ನು ಅತಿಕ್ರಮಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗುಜರಿ ಅಂಗಡಿಯಲ್ಲಿ ಹಳೆಯ ಪ್ಲಾಸ್ಟಿಕ್ ಹಾಗೂ ವೈರ್‌ಗಳನ್ನು ಸುಡುವುದರಿಂದ ಬರುವ ವಿಷಕಾರಿ ಹೊಗೆಯಿಂದಾಗಿ ಸುತ್ತಮುತ್ತಲಿನ ನಿವಾಸಿಗಳು, ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ವೃದ್ಧರು ಉಸಿರಾಟದ ತೊಂದರೆ ಹಾಗೂ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ.ಅಂಗಡಿಯಲ್ಲಿ ವರ್ಷಗಟ್ಟಲೆ ಗುಜರಿ ಸಾಮಾನುಗಳನ್ನು ರಾಶಿ ಹಾಕಲಾಗಿದೆ. ಇದರಲ್ಲಿ ಅನೇಕ ವಿಷಕಾರಿ ಹಾವು ಗಳು ವಾಸವಿದ್ದು, ಹಗಲು-ರಾತ್ರಿ ಎನ್ನದೆ ಪಕ್ಕದ ಮನೆಗಳಿಗೆ ನುಗ್ಗುತ್ತಿವೆ. ಇದರಿಂದಾಗಿ ಜನರು ಆತಂಕದಲ್ಲಿ ಬದುಕುವಂತಾಗಿದೆ.
ರಸ್ತೆಯನ್ನೇ ಒತ್ತುವರಿ ಮಾಡಿಕೊಂಡು ಗುಜರಿ ವಸ್ತುಗಳನ್ನು ಹರಡಿರುವುದರಿಂದ ಶಾಲಾ ಮಕ್ಕಳು ಹಾಗೂ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.
ನಗರಸಭೆಯವರು ಈಗಾಗಲೇ ಹಲವು ಬಾರಿ ನೋಟಿಸ್ ನೀಡಿದ್ದರೂ ಸಹ, ಅಂಗಡಿ ಮಾಲೀಕರು ಯಾವುದಕ್ಕೂ ಕ್ಯಾರೆ ಎನ್ನದೆ ಅಕ್ರಮವಾಗಿ ವ್ಯವಹಾರ ಮುಂದುವರಿಸಿದ್ದಾರೆ. "ಅಧಿಕಾರಿಗಳ ಮಾತಿಗೆ ಬೆಲೆ ನೀಡದ ಮಾಲೀಕನ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗು ತ್ತಿದೆ" ಎಂದು ಸ್ಥಳೀಯ ನಾಗರಿಕರು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸಂಬಂಧಪಟ್ಟ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮುಂದಿನ 24 ಗಂಟೆಗಳ ಒಳಗೆ ಈ ಅಕ್ರಮ ಗುಜರಿ ಅಂಗಡಿಯನ್ನು ತೆರವುಗೊಳಿಸದಿದ್ದರೆ ಅಥವಾ ಬೇರೆಡೆಗೆ ಸ್ಥಳಾಂತರಿಸದಿದ್ದರೆ, ಉಗ್ರ ಹೋರಾಟ ಮಾಡುವುದಾಗಿ ನಿವಾಸಿಗಳು ಎಚ್ಚರಿಸಿದ್ದಾರೆ.
ಜಹೀರ ಶುಂಠಿ, ಮಾಲತೇಶ, ವಿಶ್ವನಾಥ ನಾಯ್ಕ, ಇಬ್ರಾಹಿಂ, ಬಶೀರ ಮುಂತಾದವರಿದ್ದರು.