ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಎಡವಟ್ಟು; ಶಿರಸಿಯ ಅಂಧ ವಿದ್ಯಾರ್ಥಿನಿ ಪರೀಕ್ಷೆಗೆ ಹಾಜರಾಗಿದ್ದರೂ ಗೈರು ಎಂದು ಉಲ್ಲೇಖ

Sirsi News: ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಣೆ ವೇಳೆ ನಡೆದ ಎಡವಟ್ಟಿನಿಂದ ಅಂಧ ವಿದ್ಯಾರ್ಥಿನಿಯೊಬ್ಬಳ ಭವಿಷ್ಯ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಶಿರಸಿ ನಗರದ ಯೂನಿಯನ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಲೀಸಾ ಖಾನಮ್ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎಲ್ಲ ಆರು ವಿಷಯಗಳನ್ನೂ ಬರೆದಿದ್ದರೂ, ಫಲಿತಾಂಶದಲ್ಲಿ ಸಮಾಜ ವಿಜ್ಞಾನ ವಿಷಯದಲ್ಲಿ ಗೈರು ಎಂದು ನಮೂದಿಲಾಗಿದೆ.

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಎಡವಟ್ಟು; ಆತಂಕದಲ್ಲಿ ಅಂಧ ವಿದ್ಯಾರ್ಥಿನಿ

ಶಿರಸಿ ನಗರದ ಯೂನಿಯನ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಲೀಸಾ ಖಾನಮ್ -

Profile
Siddalinga Swamy Apr 23, 2026 6:02 PM

ಶಿರಸಿ, ಏ. 23: ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಣೆಯಲ್ಲಿ (Karnataka SSLC Result) ನಡೆದ ಎಡವಟ್ಟಿನಿಂದ ಅಂಧ ವಿದ್ಯಾರ್ಥಿನಿಯೊಬ್ಬಳ ಭವಿಷ್ಯ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ನಗರದ ಯೂನಿಯನ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಲೀಸಾ ಖಾನಮ್ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎಲ್ಲ ಆರು ವಿಷಯಗಳನ್ನೂ ಬರೆದಿದ್ದರೂ, ಫಲಿತಾಂಶದಲ್ಲಿ ಸಮಾಜ ವಿಜ್ಞಾನ ವಿಷಯದಲ್ಲಿ ಗೈರು ಎಂದು ತೋರಿಸಲಾಗಿದೆ.

ಈ ಅಂಧ ವಿದ್ಯಾರ್ಥಿನಿಯು, ಕಠಿಣ ಪರಿಶ್ರಮದಿಂದ ಪರೀಕ್ಷೆ ಎದುರಿಸಿ ಉತ್ತಮ ಸಾಧನೆ ಮಾಡಿದ್ದಾಳೆ. ಉರ್ದು ಪ್ರಥಮ ಭಾಷೆಯಲ್ಲಿ 124 ಅಂಕ, ಕನ್ನಡದಲ್ಲಿ 100 ಅಂಕ ಸೇರಿ ಇತರ ವಿಷಯಗಳಲ್ಲೂ ಉತ್ತಮ ಅಂಕ ಗಳಿಸಿದ್ದಾಳೆ. ಆದರೂ ಸಮಾಜ ವಿಜ್ಞಾನ ವಿಷಯದಲ್ಲಿ ಗೈರು ಎಂದು ಅಂಕಪಟ್ಟಿಯಲ್ಲಿ ತೋರಿಸಿ, ಎಡವಟ್ಟು ಮಾಡಲಾಗಿದೆ.‌

ಎಸ್ಸೆಸ್ಸೆಲ್ಸಿ ಎರಡನೇ ಪರೀಕ್ಷೆ ಮೇ 18ರಿಂದ, ಈ ಸಲ ಮೂರನೇ ಪರೀಕ್ಷೆ ಇಲ್ಲ

ಈ ದೋಷದಿಂದ ವಿದ್ಯಾರ್ಥಿನಿಯ ಮುಂದಿನ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗುವ ಸಾಧ್ಯತೆ ಇದ್ದು, ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಪಾಲಕರು ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ್‌ ಅವರಿಗೆ ಮನವಿ ಸಲ್ಲಿಸಿ, ತಕ್ಷಣವೇ ದೋಷ ಸರಿಪಡಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.

ಲೀಸಾ ಖಾನಮ್ ಒಟ್ಟು ಶೇಕಡ 84ರಷ್ಟು ಅಂಕ ಗಳಿಸಿದ್ದಾರೆ. ಕನ್ನಡ -100, ಇಂಗ್ಲಿಷ್​​ -92, ಅರ್ಥಶಾಸ್ತ್ರ-98, ಪೊಲಿಟಿಕಲ್ ಸೈನ್ಸ್ -92, ಒಟ್ಟು-526 ಅಂಕ ಗಳಿಸುವ ಮೂಲಕ 84.16% ಫಲಿತಾಂಶ ಪಡೆದಿದ್ದಾರೆ. ಇದೀಗ ಸಮಾಜ-ವಿಜ್ಞಾನ ವಿಷಯದ ಪರೀಕ್ಷೆಗೆ ಗೈರು ಎಂದು ನಮೂದಿಸಿರುವುದು ಆಘಾತ ತಂದಿದೆ.

ಶೇ. 94.10 ವಿದ್ಯಾರ್ಥಿಗಳು ಉತ್ತೀರ್ಣ

ಕರ್ನಾಟಕದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಐತಿಹಾಸಿಕ ದಾಖಲೆ ಫಲಿತಾಂಶ ಲಭ್ಯವಾಗಿದ್ದು, ಶೇಕಡ 94.10 ಫಲಿತಾಂಶ ಬಂದಿದೆ. 7,70,209 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 7,24,794 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ ಹಾಗೂ ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನ ಪಡೆದಿವೆ.

ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ನಡೆದಿದ್ದ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ರಾಜ್ಯಾದ್ಯಂತ 9,02,889 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 8,12,855 ವಿದ್ಯಾರ್ಥಿಗಳು ಮೊದಲ ಬಾರಿ ಪರೀಕ್ಷೆ ಬರೆದಿದ್ದರೆ, 62,845 ಮಂದಿ ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು 27,189 ಖಾಸಗಿ ವಿದ್ಯಾರ್ಥಿಗಳಿದ್ದರು.