ಆರ್ಥಿಕವಾಗಿ ಹಿಂದುಳಿದವರ ಏಳಿಗೆಯಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಬಹುದೊಡ್ಡದು
ಗ್ರಾಮೀಣ ಭಾಗದ ಅಭಿವೃದ್ಧಿಯ ಬಾಗಿಲದ ಸಹಕಾರಿ ಕ್ಷೇತ್ರ ದಲ್ಲಿದ್ದವರು ಪ್ರಾಮಾಣಿಕರಾಗಿದ್ದರೆ, ಬಡವರ ಪರ ಕಾಳಜಿ ಉಳ್ಳವರಾಗಿದ್ದರೆ ಮಾತ್ರ ಸಹಕಾರ ಸಂಸ್ಥೆಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ಸಂಸ್ಥೆಯ ಉಪಾಧ್ಯಕ್ಷರಾದ ಶಿವನಗೌಡ ಪಾಟೀಲ ಮಾತನಾಡಿ, ಸಾಲ ಕೊಡುವಲ್ಲಿ ಮತ್ತು ಮರುಪಾವತಿ ಮಾಡುವಲ್ಲಿ ಸಂಸ್ಥೆಗಳು ಮತ್ತು ಗ್ರಾಹಕರು ಪ್ರಾಮಾಣಿಕರಾಗಿದ್ದರೆ ಮಾತ್ರ ಬ್ಯಾಂಕುಗಳು ಉನ್ನತಿ ಹೊಂದಲು ಸಾಧ್ಯ
ತಾಂಬಾ ಗ್ರಾಮದಲ್ಲಿ ಶ್ರೀ ಭೀಮಾಶಂಕರ ಸೌಹಾರ್ದ ಸಹಕಾರಿ ಸಂಘದ ೪ನೇ ಶಾಖೆಯನ್ನು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸುತ್ತಿರುವುದು. -
ತಾಂಬಾ: ಸರ್ಕಾರ ಮಾಡದ ಕೆಲಸ ಸಹಕಾರ ಸಂಸ್ಥೆಗಳಿಂದ ಸಾಧ್ಯವಾಗಿದ್ದು ಸಮಾಜದಲ್ಲಿರುವ ಬಡವರ ಆರ್ಥಿಕವಾಗಿ ಹಿಂದುಳಿದವರ ಏಳಿಗೆಯಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಬಹುದೊಡ್ಡದು ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ(Indi MLA Yashwantrayagouda Patil) ಅಭಿಪ್ರಾಯಪಟ್ಟರು.
ಗ್ರಾಮದಲ್ಲಿ ಶನಿವಾರ ಜರುಗಿದ ಶ್ರೀ ಭೀಮಾಶಂಕರ ಸೌಹಾರ್ದ ಸಹಕಾರಿ ಸಂಘದ 4ನೇ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ಅಭಿವೃದ್ಧಿಯ ಬಾಗಿಲದ ಸಹಕಾರಿ ಕ್ಷೇತ್ರ ದಲ್ಲಿದ್ದವರು ಪ್ರಾಮಾಣಿಕರಾಗಿದ್ದರೆ, ಬಡವರ ಪರ ಕಾಳಜಿ ಉಳ್ಳವರಾಗಿದ್ದರೆ ಮಾತ್ರ ಸಹಕಾರ ಸಂಸ್ಥೆಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ಸಂಸ್ಥೆಯ ಉಪಾಧ್ಯಕ್ಷರಾದ ಶಿವನಗೌಡ ಪಾಟೀಲ ಮಾತನಾಡಿ, ಸಾಲ ಕೊಡುವಲ್ಲಿ ಮತ್ತು ಮರುಪಾವತಿ ಮಾಡುವಲ್ಲಿ ಸಂಸ್ಥೆಗಳು ಮತ್ತು ಗ್ರಾಹಕರು ಪ್ರಾಮಾಣಿಕರಾಗಿದ್ದರೆ ಮಾತ್ರ ಬ್ಯಾಂಕುಗಳು ಉನ್ನತಿ ಹೊಂದಲು ಸಾಧ್ಯ ಎಂದರು.
ಇದನ್ನೂ ಓದಿ: Indi News: ಗದುಕಿನ ತೋಂಟದ ಶ್ರೀಗಳು ಜಲ ಮತ್ತು ಜೈವಿಕ ವೈವಿಧ್ಯತೆ ಸಂರಕ್ಷಣೆಗೆ ಹೋರಾಡಿದ ಮಹಾಮಾನವಾದಿಗಳು
ನಿವೃತ್ತ ಪ್ರಾಚಾರ್ಯ ಎಸ್.ಎಸ್.ಕನಾಳ ಮಾತನಾಡಿ, ಸಹಕಾರಿ ಕ್ಷೇತ್ರ ಬೆಳೆಯದಿದ್ದರೆ ಗ್ರಾಮೀಣ ಪ್ರದೇಶದ ಬೆಳವಣಿಗೆ ಸಾಧ್ಯವಿಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಂಡು ಇವುಗಳ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಕಾಂಗ್ರೆಸ್ ಮುಖಂಡ ಅಪ್ಪಣ್ಣ ಕಲ್ಲೂರ ಮಾತನಾಡಿ ಬ್ಯಾಂಕುಗಳು ಉತ್ತಮವಾಗಿ ಕೆಲಸ ಮಾಡಿದರೆ ಅನೇಕ ಶಾಖೆಗಳನ್ನು ತೆಗೆಯಲು ಸಾಧ್ಯ ಎಂದರು.
ಬಿಜೆಪಿ ಮುಖಂಡ ಜಿ.ವೈ.ಗೊರನಾಳ, ಕಾಮೇಶ ಉಕ್ಕಲಿ, ಆರ್,ಎಂ.ಗಳೆದ, ಎಸ್. ಎಸ್. ಹಿರೇಕುರಬರ, ಜಿ.ಆರ್.ಗೋಟ್ಯಾಳ, ಶಿವಕುಮಾರ ಪಟ್ಟಣಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಎಂ.ದೇಸಾಯಿ, ನಿರ್ದೇಶಕರಾದ ಡಿ ಆರ್ ಶಹಾ, ಎಸ್. ಸಿ. ಪಟ್ಟಣಶೆಟ್ಟಿ, ಆರ್ ಎಂ ಪೂಜಾರಿ, ಆರ್ ಎಂ ಡೋಣಗಾಂವ, ಆರ್. ಬಿ. ಗುತ್ತೇದಾರ, ಎಂ.ಎಸ್.ಬೇಪಾರಿ, ಶಂಕರ ಯಳಕೋಟಿ, ಮಹಮ್ಮದ್ ವಾಲಿಕರ, ಆರ್ ಎಂ ನಾಟಿಕಾರ, ಸಿದ್ದು ಹತ್ತಳ್ಳಿ, ಎಂ.ಡಿ.ಬಡದಾಳ, ಹಾಗೂ ಬಂಥನಾಳ, ವಾಡೆ, ಸುರಗಿಹಳ್ಳಿ, ಗೂಗಿಹಾಳ, ನಾರಾಯಣ ಹಟ್ಟಿ, ತೆನಿಹಳ್ಳಿ, ಗೊರನಾಳ ಸೇರಿದಂತೆ ವಿವಿಧ ಗ್ರಾಮಸ್ಥರು ಪೂಜಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.