MLA Yashwant Rayagouda Patil: ಶಾಸಕ ಯಶವಂತರಾಯಗೌಡ್ರೀಗೆ ಸಚಿವ ಸ್ಥಾನ ನೀಡಿ: ಧರ್ಮರಾಜ ಅವುಜಿ ಆಗ್ರಹ
ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹೈಕಮಾಂಡ ಪಕ್ಷದ ವರಿಷ್ಠರು ಸಾಕಷ್ಟು ಬಾರಿ ಭಾಷಣದಲ್ಲಿ ಶಾಸಕ ಪಾಟೀಲರಿಗೆ ಸಚಿವ ಸ್ಥಾನ ಸಿಗುತ್ತದೆ ಎಂದು ಹೇಳಿದ್ದೀರಿ ? ಸ್ವಾತಂತ್ರ್ಯ ಸಿಕ್ಕು 75 ವರ್ಷಗತಿಸಿದರೂ ಇಂಡಿ ಮತಕ್ಷೇತ್ರ ಸಚಿವ ಸ್ಥಾನ ಸಿಗದೆ ಇರುವುದು ದೌರ್ಭಾಗ್ಯ. ನಿಷ್ಕಲ್ಮಷ ರಾಜಕೀಯ ಸಂತನಿಗೆ ಸಚಿವ ಸ್ಥಾನ ನೀಡಿದರೆ ಮಾತ್ರ ಕಾಂಗ್ರೆಸ್ ಕೊಟ್ಟ ಮಾತು ಉಳಿಸಿದಂತಾಗುತ್ತದೆ
ಧರ್ಮರಾಜ ಅವುಜಿ -
ಇಂಡಿ: ತಾಲೂಕಿನ ನಾದ ಹಾಗೂ ಲಾಳಸಂಗಿ ಮಧ್ಯದಲ್ಲಿ ಹರಿದಿರುವ ಗೋಳಸಾರ ಹಳ್ಳಕ್ಕೆ ಸೇತುವೆ ಕಂ ಬಾಂಧಾರ ಮಂಜೂರು ಮಾಡಿ ಬಜೆಟ್ʼನಲ್ಲಿ ಘೋಷಣೆ ಮಾಡಲು ಶ್ರಮಿಸಿದ ಶಾಸಕ ಯಶವಂತರಾಯಗೌಡ ಪಾಟೀಲ(MLA Yashwant Rayagouda Patil)ರ ದೂರದೃಷ್ಠಿ ಹಾಗೂ ಜನಪರ ಕಾಳಜಿಯಿಂದಾಗಿ ಇಂತಹ ಶಾಸಕರನ್ನು ಪಡೆದ ಈ ಭಾಗದ ಜನರು ಪುಣ್ಯವಂತರು ಶಾಸಕರ ಕಾರ್ಯಕ್ಷಮತೆಗೆ ನಾದ ಬಿ.ಕೆ ಗ್ರಾಮದ ಪಿ.ಕೆ.ಪಿ.ಎಸ್ ಅಧ್ಯಕ್ಷ ಧರ್ಮರಾಜ ಸಿದ್ದಪ್ಪ ಅವುಜಿ ಹಾಗೂ ಪಿಕೆಪಿಎಸ್ ಸರ್ವಸದಸ್ಯರು ನಾದ ಬಿ.ಕೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ಶಾಸಕ ಯಶವಂತರಾಯಗೌಡ ಪಾಟೀಲ ಒಬ್ಬ ಮುತ್ಸದಿ ರಾಜಕಾರಣಿ ಸರ್ವ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಿ ಇಂಡಿ ಮತಕ್ಷೇತ್ರ ಸುಮಾರು ವರ್ಷಗಳಿಂದ ಅಭಿವೃದ್ದಿಯಿಂದ ವಂಚಿತವಾದ ಮತಕ್ಷೇತ್ರ ಸರ್ವವಿಧದಲ್ಲಿ ಸುಧಾರಣೆ ಮಾಡುವ ಮೂಲಕ ಜಿಲ್ಲಾ ಮಾಡುವ ಹಂತಕ್ಕೆ ತಂದಿದ್ದಾರೆ.
ಇದನ್ನೂ ಓದಿ: MLA Yashwant Rayagouda Patil: ನೌಕರರ ಸಮರ್ಪಕ ಕೆಲಸದಿಂದ ದೇಶದ ಅಭಿವೃದ್ದಿ: ಯಶವಂತರಾಯಗೌಡರು
40 ವರ್ಷಗಳಿಂದ ನೆನೆಗುದಿಗೆ ಬಿದ್ದ ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ಸಿಂದಗಿ, ಇಂಡಿ, ಚಡಚಣ ಭಾಗದ ಸುಮಾರು 16 ಸಾವಿರಕ್ಕಿಂತ ಅಧಿಕ ರೈತರ ಆಸ್ತಿ ಮಾಡಿದ್ದಾರೆ. ಒಂದು ಅಭಿವೃದ್ದಿ ಮಂಡಳಿಯಾಗಬೇಕಾದರೆ ಸಾಕಷ್ಟು ಹೋರಾಟ ಹರತಾಳ ಆದರೂ ಆಗುವುದು ಅಸಾಧ್ಯ. ಯಾವುದೇ ಒಬ್ಬ ಮತಕ್ಷೇತ್ರದ ವ್ಯಕ್ತಿಗಳ ಸಹಾಯ ವಿಲ್ಲದೆ ಮತಕ್ಷೇತ್ರದ ಜನರು ರಾಜಕೀಯ ಶಕ್ತಿ ನೀಡಿರುವದರಿಂದ ಇದನ್ನೆ ಬಳಸಿಕೊಂಡು ರಾಜ್ಯ ಮಟ್ಟದ ಲಿಂಬೆ ಅಭಿವೃದ್ದಿ ಮಂಡಳಿ ತಂದು ಅದಕ್ಕೊಂದು ಸ್ಥಾನ ನೀಡಿದ್ದಾರೆ. ಕೃಷಿ ವಿಜ್ಞಾನ ಕೇಂದ್ರ, ಜಿಟಿಟಿಸಿ ಕಾಲೇಜು, ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳ ಮಂಜೂರಾತಿ ತಂದು ಶೈಕ್ಷಣಿಕ ಹಬ್ಬ ಮಾಡಿದ್ದಾರೆ. ಕೆರೆ , ಕಾಲುವೆ ಬಾಂಧಾರ, ವಿದ್ಯುತ ಸ್ಥಾವರಗಳು ನಗರ ಸೌಂದರ್ಯಿಕರಣ, ಪುರಸಭೆಯಿಂದ ನಗರ ಸಭೆಗೆ ಮೇಲ್ದರ್ಜೆಗೆ, ಹೀಗೆ ಮತಕ್ಷೇತ್ರ ಸುವರ್ಣಾಕ್ಷರಗಳಿಂದ ಬರೆದಿಡುವಂತೆ ಮಾಡಿದ ಶಾಸಕ ಪಕ್ಷ ನಿಷ್ಟುರ ಕೊಟ್ಟ ಮಾತು ಇಟ್ಟ ಹೆಜ್ಜೆ ತಪ್ಪದ ಛಲದಂಕ ಮಲ್ಲ ಶಾಸಕ ಯಶವಂತ ರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಿ ಗೌರವಿಸಿದರೆ ಮಾತ್ರ ಮತಕ್ಷೇತ್ರದ ಜನರಿಗೆ ಸಂದಗೌರ.
ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹೈಕಮಾಂಡ ಪಕ್ಷದ ವರಿಷ್ಠರು ಸಾಕಷ್ಟು ಬಾರಿ ಭಾಷಣದಲ್ಲಿ ಶಾಸಕ ಪಾಟೀಲರಿಗೆ ಸಚಿವ ಸ್ಥಾನ ಸಿಗುತ್ತದೆ ಎಂದು ಹೇಳಿದ್ದೀರಿ ? ಸ್ವಾತಂತ್ರ್ಯ ಸಿಕ್ಕು 75 ವರ್ಷಗತಿಸಿದರೂ ಇಂಡಿ ಮತಕ್ಷೇತ್ರ ಸಚಿವ ಸ್ಥಾನ ಸಿಗದೆ ಇರುವುದು ದೌರ್ಭಾಗ್ಯ. ನಿಷ್ಕಲ್ಮಷ ರಾಜಕೀಯ ಸಂತನಿಗೆ ಸಚಿವ ಸ್ಥಾನ ನೀಡಿದರೆ ಮಾತ್ರ ಕಾಂಗ್ರೆಸ್ ಕೊಟ್ಟ ಮಾತು ಉಳಿಸಿದಂತಾಗುತ್ತದೆ ಎಂದು ನಾದ ಕೆ.ಡಿ ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಧರ್ಮರಾಜ ಅವುಜಿ ತಿಳಿಸಿದ್ದಾರೆ.