Talikota News: ವಿಜಯಪುರವನ್ನ 371(ಜೆ)ವ್ಯಾಪ್ತಿಗೆ ಸೇರಿಸಿ
ವಿಜಯಪುರ ಜಿಲ್ಲೆ ವಿಶಾಲ ಭೌಗೋಳಿಕ ವ್ಯಾಪ್ತಿ ಹೊಂದಿದ್ದು, ಕೃಷಿಯನ್ನೇ ಪ್ರಮುಖ ಜೀವನಾ ಧಾರ ವಾಗಿಸಿಕೊಂಡಿದೆ. ಆದರೆ ನಿರಂತರ ಬರಗಾಲ, ನೀರಾವರಿ ಕೊರತೆ, ಕೈಗಾರಿಕಾ ಹಿನ್ನಡೆ, ನಿರುದ್ಯೋಗ, ಉನ್ನತ ಶಿಕ್ಷಣ ಸಂಸ್ಥೆಗಳ ಕೊರತೆ ಹಾಗೂ ಮೂಲಸೌಕರ್ಯದ ಸಮಸ್ಯೆಗಳಿಂದ ಜಿಲ್ಲೆಯ ಜನರು ಹಲವು ವರ್ಷಗಳಿಂದ ಹಿಂದುಳಿದ ಸ್ಥಿತಿಯಲ್ಲಿದ್ದಾರೆ.
-
ತಾಳಿಕೋಟಿ: ವಿಜಯಪುರ ಜಿಲ್ಲೆಯನ್ನು ಸಂವಿಧಾನದ ಕಲಂ 371(ಜೆ) ವ್ಯಾಪ್ತಿಗೆ ತಕ್ಷಣ ಸೇರ್ಪಡೆ ಗೊಳಿಸಿ, ಜಿಲ್ಲೆಯ ಜನರಿಗೆ ಶಿಕ್ಷಣ, ಉದ್ಯೋಗ ಹಾಗೂ ಅಭಿವೃದ್ಧಿಯಲ್ಲಿ ವಿಶೇಷ ಅವಕಾಶ ಕಲ್ಪಿಸ ಬೇಕು. ಇಲ್ಲವಾದರೆ ದಶಕಗಳಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ರಚಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಳಿಕೋಟಿ ತಹಸೀಲ್ದಾರ ಮಲ್ಲಿಕಾರ್ಜುನ ಅರಕೆರಿ ಯವರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ವಿಜಯಪುರ ಜಿಲ್ಲೆ ವಿಶಾಲ ಭೌಗೋಳಿಕ ವ್ಯಾಪ್ತಿ ಹೊಂದಿದ್ದು, ಕೃಷಿಯನ್ನೇ ಪ್ರಮುಖ ಜೀವನಾ ಧಾರ ವಾಗಿಸಿಕೊಂಡಿದೆ. ಆದರೆ ನಿರಂತರ ಬರಗಾಲ, ನೀರಾವರಿ ಕೊರತೆ, ಕೈಗಾರಿಕಾ ಹಿನ್ನಡೆ, ನಿರುದ್ಯೋಗ, ಉನ್ನತ ಶಿಕ್ಷಣ ಸಂಸ್ಥೆಗಳ ಕೊರತೆ ಹಾಗೂ ಮೂಲಸೌಕರ್ಯದ ಸಮಸ್ಯೆಗಳಿಂದ ಜಿಲ್ಲೆಯ ಜನರು ಹಲವು ವರ್ಷಗಳಿಂದ ಹಿಂದುಳಿದ ಸ್ಥಿತಿಯಲ್ಲಿದ್ದಾರೆ. ಜಿಲ್ಲೆಯ ಈ ಹಿಂದುಳಿದಿರು ವಿಕೆಯನ್ನು ಡಾ.ಡಿ.ಎಂ.ನಂಜುಂಡಪ್ಪ ಸಮಿತಿಯ ವರದಿಯಲ್ಲಿಯೂ ಗುರುತಿಸಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Vijayapura Tragedy: ವಿಜಯಪುರದಲ್ಲಿ ಬಾವಿಗೆ ಬಿದ್ದು ಇಬ್ಬರು ಮಕ್ಕಳ ಸಾವು, ರಕ್ಷಿಸಲು ಹೋದ ತಂದೆಯೂ ನಾಪತ್ತೆ!
ರಾಜ್ಯ ಸರಕಾರವು ವಿಧಾನಮಂಡಲದಲ್ಲಿ ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಸಲ್ಲಿಸುವ ಮೂಲಕ ವಿಜಯಪುರ ಜಿಲ್ಲೆಯ ಬಹುದಿನಗಳ ಬೇಡಿಕೆಗೆ ನ್ಯಾಯ ಒದಗಿಸಬೇಕು. ಇನ್ನು ಭರವಸೆ ಬೇಡ; ನಿರ್ಣಯ ಬೇಕು, ಘೋಷಣೆ ಬೇಕು, ಅನುಷ್ಠಾನ ಬೇಕು ಎಂದು ಸಾರ್ವಜನಿಕರು ಒತ್ತಾಯಿಸಿ ದ್ದಾರೆ.
ಈ ಸಂದರ್ಭದಲ್ಲಿ ಡಾ: ವಿಜಯಕುಮಾರ ಕಾರ್ಚಿ, ನ್ಯಾಯವಾದಿ ಗಂಗಾಧರ ಕಸ್ತೂರಿ, ರವೀಂದ್ರ ಕಟ್ಟಿಮನಿ, ಡಾ : ಆನಂದ ಭಟ್, ಡಾ : ರವಿ ಅಗರವಾಲ, ಡಾ : ನಾಲಬಂದ, ತಮ್ಮಣ್ಣ ದೇಶಪಾಂಡೆ, ಸಂಭಾಜಿ ವಾಡಕರ, ಮಂಜು ಶೆಟ್ಟಿ, ರಾಗು ಚವ್ಹಾಣ, ಜಗದೀಶ ಬಿಳೆಭಾವಿ, ರಾಗು ಮಾನೆ, ಪ್ರಮೋದ ಅಗರವಾಲ, ಕುಮಾರ ಸುರಪುರ, ರಘು ಹಜೇರಿ, ವಸಂತ ಜೋಶಿ, ಶಂಕರಗೌಡ ಬಿರಾದಾರ, ಈಶ್ವರ ಹೂಗಾರ ಹಾಗೂ ವಿವಿಧ ರೈತ ಪರ ಸಂಘಟನೆಗಳು, ಗಣ್ಯ ವ್ಯಾಪಾರಸ್ಥರು, ವಿವಿಧ ಸಮಾಜದ ಮುಖಂಡರು ತಾಳಿಕೋಟಿ ಪಟ್ಟಣದ ಗಣ್ಯರು ಹಾಜರಿದ್ದರು.