ಸಂತರ, ಶರಣರ, ಜಾನಪದ ಸಾಹಿತಿಗಳ ಬೀಡು: ಬಾಳು ಮುಳಜೀ
ಲಚ್ಯಾಣದ ಶ್ರೀಸಿದ್ದಲಿಂಗರು, ಗೋಳಸಾರದ ಶ್ರೀಪುಂಡಲಿಂಗ ಶಿವಯೋಗಿಗಳು, ಭಂಥನಾಳದ ಸಂಗನ ಬಸವ ಶ್ರೀಗಳು, ವಿಶ್ವದೇಲ್ಲೇಡೆ ಜ್ಞಾನದ ದಾಸೋಹ ನೀಡಿದ ನಡೇದಾಡುವ ದೇವರಾದ ಶ್ರೀಸಿದ್ದೇಶ್ವರ ಶ್ರೀಗಳು , ನಿಂಬಾಳದ ರಾನಡೇಯವರು, ಕೃಷ್ಣಾ ಯೋಜನೆಗೆ ಮನೆ, ಮಠಗಳನ್ನು ಕಳೆದುಕೊಂಡು ಬೇರೆ ಜಿಲ್ಲೆಗಳಿಗೆ ನೀರಿನ ದಾಹ ನೀಗಿಸಿದ ಅವಳಿ ಜಿಲ್ಲೆಯ ಜನರಾದ ನಾವುಗಳು ತ್ಯಾಗದ ಪ್ರತೀಕ

ಕರವೇ ಅಧ್ಯಕ್ಷ ಬಾಳು ಮುಳಜಿ

ಇಂಡಿ: ಭೀಮಾಪಾತ್ರದಲ್ಲಿ ಹಲವು ಸಂತ ಶರಣರು ದಾರ್ಶನಿಕ ಯುಗಪುರುಷರು ಜನಿಸಿ ಈ ಭಾಗ ದಲ್ಲಿನ ಜನರಿಗೆ ಹೃದಯಶ್ರೀಮಂತರಾಗಿಸಿದ್ದಾರೆ ಅದರೆ ಭೀಮಾತೀರದ ಹಂತಕರು ಎಂಬ ಹೆಸರು ಕೊಡುವುದು ತರವಲ್ಲ ಭೀಮಾ ನದಿ ಈ ಭಾಗದ ಜೀವ ನದಿಯಾಗಿದೆ ಎಂದು ಕರೆವೇ ಅಧ್ಯಕ್ಷ ಬಾಳು ಮುಳಜೀ ಅರೋಪಿಸಿದ್ದಾರೆ.
ಸುದ್ದಿಗೋಷ್ಠಿ ನಡಸಿ ಮಾತನಾಡಿದ ಅವರು ಭೀಮಾತೀರದ ಪಾತ್ರದಲ್ಲಿ ಹಲಸಂಗಿ ಗೆಳೆಯರಾದ ಮಧುರ ಚೆನ್ನರು, ಸಿಂಪಿಲಿಂಗಣ್ಣಾ, ಧೋಲಾ ಸಾಹೇಬ ಜಾನಪದ ಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ ಅಗರಖೇಡದ ನಾಟಕ ಬ್ರಹ್ಮ ಶ್ರೀರಂಗರು ಸಾಮಾಜಿಕ ಅಂಕುಡೊಂಕು ತಿದ್ದಿದ್ದಾರೆ. ಲಚ್ಯಾಣದ ಶ್ರೀಸಿದ್ದಲಿಂಗರು, ಗೋಳಸಾರದ ಶ್ರೀಪುಂಡಲಿಂಗ ಶಿವಯೋಗಿಗಳು, ಭಂಥನಾಳದ ಸಂಗನ ಬಸವ ಶ್ರೀಗಳು, ವಿಶ್ವದೇಲ್ಲೇಡೆ ಜ್ಞಾನದ ದಾಸೋಹ ನೀಡಿದ ನಡೇದಾಡುವ ದೇವರಾದ ಶ್ರೀಸಿದ್ದೇಶ್ವರ ಶ್ರೀಗಳು, ನಿಂಬಾಳದ ರಾನಡೇಯವರು, ಕೃಷ್ಣಾ ಯೋಜನೆಗೆ ಮನೆ, ಮಠಗಳನ್ನು ಕಳೆದುಕೊಂಡು ಬೇರೆ ಜಿಲ್ಲೆಗಳಿಗೆ ನೀರಿನ ದಾಹ ನೀಗಿಸಿದ ಅವಳಿ ಜಿಲ್ಲೆಯ ಜನರಾದ ನಾವುಗಳು ತ್ಯಾಗದ ಪ್ರತೀಕ. 1972ರಲ್ಲಿ ಬರಗಾಲದ ಸಂದರ್ಬದಲ್ಲಿ ರಾಷ್ಟç ,ರಾಜ್ಯ ನಾಯಕರುಗಳಿಗೆ ಬಂಗಾರದ ಮೂಲಕ ತುಲಭಾರ ಮಾಡಿ ಗೌರವಿಸಿದ ಜಿಲ್ಲೆಯ ಹೃದಯವಂತ ಜನರು ನಾವು ಪದೆ ಪದೆ ಭೀಮಾತೀರದ ಹಂತಕರು ಎಂದು ನಾಮಕರಣ ಮಾಡುವುದು ಶೋಭೆಯಲ್ಲ. ಲಿಂಬೆ ನಾಡು, ಜಾನಪದ ಬೀಡು, ಸಂತರ, ಶರಣರ ಬೀಡು ಎಂದು ಕರೆಯುವುದು ಸೂಕ್ತ ಎಂದು ಖಾರವಾಗಿ ನುಡಿದರು.
ಮಹೇಶ ಹೂಗಾರ, ಪ್ರಶಾಂತ ಲಾಳಸಂಗಿ, ಪ್ರದೀಪ ಕರ್ಜಗಿ, ಯಮನಪ್ಪ ಕುಡಿಗನೂರ, ಮಹಾವೀರ ಕಾಮನಕಟ್ಟಿ, ಶಿವಾನಂದಯ್ಯಾ ಲಕ್ಕುಂಡಿಮಠ, ಮಲ್ಲು ಚಾಕುಂಡಿ, ಶ್ರೀಶೈಲ ಮದರಿ,ಅಪ್ಪು ಪ್ಯಾಟಿ, ಆನಂದ ಕ್ಷತ್ರಿ, ಭೀಮಾಶಂಕರ ಅಳೂರ, ರವಿ ಹೂಗಾರ, ರೇವಣಸಿದ್ದ ಅವರಾಧಿ, ಸಂತೋಷ ಪಾಟೀ ಲ, ರಾಹುಲ ಮರಗೂರ, ಶಿವರಾಜ ಪಾಟೀಲ, ಮಹಾದೇವ ಬಗಲಿ ಸೇರಿದಂತೆ ಕರವೇ ಕಾರ್ಯ ಕರ್ತರು ಭೀಮಾನದಿಯ ಪಾತ್ರದ ಅಭಿಮಾನಿಗಳು ಇದ್ದರು.