ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಸಂಗೀತಾ ಶೃಂಗೇರಿ-ಕಾರ್ತಿಕ್‌ ಮಹೇಶ್ ನಡುವೆ ಮನಸ್ತಾಪವಿತ್ತಾ? ಕೊನೆಗೂ ಕ್ಲಾರಿಟಿ ಕೊಟ್ಟ ನಟಿ

snageetha: ಬಿಗ್‌ ಬಾಸ್‌ ಕನ್ನಡ 10 ಶೋನಲ್ಲಿ ಕಾರ್ತಿಕ್‌ ಮಹೇಶ್‌, ಸಂಗೀತಾ ಶೃಂಗೇರಿ ಸಖತ್‌ ಗಮನ ಸೆಳೆದ ಜೋಡಿ. ಇಬ್ಬರ ಮಧ್ಯೆ ಜಗಳ ಆಗಿದೆ ಅಂತ ಗುಲ್ಲಾಗಿತ್ತು. ಕಾರ್ತಿಕ್‌ ಹಾಗೂ ಸಂಗೀತಾ ಮಧ್ಯೆ ಜಗಳ ಆಗಿರಬಹುದು ಎಂದು ವೀಕ್ಷಕರು ಅಂದುಕೊಂಡಿದ್ದರು. ಆದರೀಗ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ. ಸಂಗೀತಾ ಅವರ ಆಡಿಯೋ ಲಾಂಚ್‌ಗೆ ಕಾರ್ತಿಕ್‌ ಬಂದಿದ್ದಾರೆ. ಸಂಗೀತಾ ಶೃಂಗೇರಿ ಅವರ ಆಲ್ಬಮ್‌ ಸಾಂಗ್‌ ಲಾಂಚ್‌ ಆಗಿದೆ. ಅಲ್ಲಿ ನಮ್ರತಾ ಗೌಡ, ಕಾರ್ತಿಕ್‌ ಮಹೇಶ್‌ ಕೂಡ ಆಗಮಿಸಿದ್ದಾರೆ. ಕಾರ್ತಿಕ್‌ ಅವರು ಸಂಗೀತಾಗೆ ವಿಶ್‌ ಮಾಡಿದ್ದಾರೆ.

ಸಂಗೀತಾ ಶೃಂಗೇರಿ-ಕಾರ್ತಿಕ್‌ ಮಹೇಶ್ ನಡುವೆ ಮನಸ್ತಾಪವಿತ್ತಾ?

ಸಂಗೀತಾ ಶೃಂಗೇರಿ -

Yashaswi Devadiga
Yashaswi Devadiga Dec 28, 2025 8:17 PM

ಬಿಗ್‌ ಬಾಸ್‌ ಕನ್ನಡ 10 (Bigg Boss Kannada 10) ಶೋನಲ್ಲಿ ಕಾರ್ತಿಕ್‌ ಮಹೇಶ್‌, ಸಂಗೀತಾ ಶೃಂಗೇರಿ ಸಖತ್‌ ಗಮನ ಸೆಳೆದ ಜೋಡಿ. ಇಬ್ಬರ ಮಧ್ಯೆ ಜಗಳ ಆಗಿದೆ ಅಂತ ಗುಲ್ಲಾಗಿತ್ತು. ಕಾರ್ತಿಕ್‌ ಹಾಗೂ ಸಂಗೀತಾ (Sangeetha) ಮಧ್ಯೆ ಜಗಳ ಆಗಿರಬಹುದು ಎಂದು ವೀಕ್ಷಕರು ಅಂದುಕೊಂಡಿದ್ದರು. ಆದರೀಗ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ. ಸಂಗೀತಾ ಅವರ ಆಡಿಯೋ ಲಾಂಚ್‌ಗೆ ಕಾರ್ತಿಕ್‌ ಬಂದಿದ್ದಾರೆ. ಸಂಗೀತಾ ಶೃಂಗೇರಿ ಅವರ ಆಲ್ಬಮ್‌ ಸಾಂಗ್‌ (Album song) ಲಾಂಚ್‌ ಆಗಿದೆ. ಅಲ್ಲಿ ನಮ್ರತಾ ಗೌಡ, ಕಾರ್ತಿಕ್‌ ಮಹೇಶ್‌ ಕೂಡ ಆಗಮಿಸಿದ್ದಾರೆ. ಕಾರ್ತಿಕ್‌ (Karthik) ಅವರು ಸಂಗೀತಾಗೆ ವಿಶ್‌ ಮಾಡಿದ್ದಾರೆ.

ಕ್ಲಾರಿಟಿ ಕೊಟ್ಟ ಸಂಗೀತಾ

ಇನ್ನು ಇಬ್ಬರ ಮಧ್ಯೆ ಜಗಳ ಆಗಿದೆ ಅನ್ನೋ ಚರ್ಚೆ ಆಗ್ತಾ ಇತ್ತು. ಈ ಬಗ್ಗೆ ಈಗ ವಿಶ್ವವಾಣಿ ಜೊತೆ ಮಾತನಾಡಿ, ಕ್ಲಾರಿಟಿ ಕೊಟ್ಟಿದ್ದಾರೆ. ಕಾರ್ತಿಕ್ ಜೊತೆ ಕೂಡ ತುಂಬ ಸಲ ಮಾತಾಡಿದೀವಿ. ಕಾರ್ತಿಕ್‌ ತಂಗಿ ಮಗನ ನಾಮಕರಣಕ್ಕೆ ಆಹ್ವಾನ ಕೊಟ್ಟಿದ್ದರು. ಆಗ ನಾನು ಮೈಸೂರಿಗೆ ಹೋಗಿದ್ದೆ. ಹೋಗುವ ಮನಸ್ಸಿದ್ದರೂ ಕೂಡ ಹೋಗೋಕೆ ಆಗಿರಲಿಲ್ಲ. ನಾನು ಆಗ ಹೋಗಲಿಲ್ಲ ಅಂದ್ರೂ ಕೂಡ ಈ ಬಾರಿ ಬಂದಿದ್ದಾರೆ.

ಇದನ್ನೂ ಓದಿ: Bigg Boss Kannada 12: ರಾಖಿ ಕಟ್ಟಿಸ್ತಾರೆ ಅಂದುಕೊಂಡ್ರೆ ಬೆಳ್ಳಿ ಬ್ರೇಸ್‌ಲೆಟ್ ತಂದು ಕೊಡೋದಾ? ಕಾವ್ಯ ತಂದೆ ಸರ್‌ಪ್ರೈಸ್ ಗಿಫ್ಟ್‌ಗೆ ಗಿಲ್ಲಿ ಫ್ಯಾನ್ಸ್‌ ಅಚ್ಚರಿ!

ಇದು ಖುಷಿಯ ವಿಷಯ. ಸೋಷಿಯಲ್‌ ಮೀಡಿಯಾದಲ್ಲಿ ಅವರ ಫ್ಯಾನ್ಸ್‌ ನನ್ನ ಫ್ಯಾನ್ಸ್‌ ವಾರ್‌ ಮಾಡ್ತಾ ಇರ್ತಾರೆ. ಹಾಗೆ ಮಾಡಬೇಡಿ. ನಾವು ಚೆನ್ನಾಗಿ ಮಾತನಾಡುತ್ತೇವೆ. ಒಂದು ವೇಳೆ ಮನಸ್ತಾಪ ಇದ್ದರೆ ಕ್ಯಾಮೆರಾ ಮುಂದೆ ಜಗಳ ಮಾಡ್ತೀವಿ ಎಂದು ಸಂಗೀತಾ ಕ್ಲಾರಿಟಿ ಕೊಟ್ಟಿದ್ದಾರೆ.

ಗಿಲ್ಲಿ ನಟನ ಬಗ್ಗೆ ಹೇಳಿದ್ದೇನು ?

ಬಿಗ್‌ ಬಾಸ್‌ ಸೀಸನ್‌ ನಾನು ಅಷ್ಟಾಗಿ ನೋಡ್ತಾ ಇಲ್ಲ. ನಾನು ಹೋಗೋಕ್ಕಿಂತ ಮುಂಚೆ ಕೂಡ ನಾನು ಅಷ್ಟಾಗಿ ನೋಡಿಲ್ಲ. ನಾನು ಅದಿಕ್ಕೆ ಬಿಗ್‌ ಬಾಸ್‌ ನಲ್ಲಿ ಕೆಲವೊಮ್ಮೆ ಜಡ್ಜ್‌ ಮಾಡೋಕು ಬರ್ತಾ ಇರಲಿಲ್ಲ. ಸೀಸನ್‌ 12ನಲ್ಲಿ ಟಾಸ್ಕ್‌ ಆದ ಮೇಲೆಯೂ ಖುಷಿಯಿಂದ ಇರ್ತಾರೆ. ನಗಕ್ಕೋಸ್ಕರ ನೋಡ್ತೀವಿ. ಪಾಸಿಟಿವಿಟಿ ಇದೆ ಎಂದರು.



ನಾನು ಏನು ಕೆಲವೊಂದು ಫೇಸ್‌ ಮಾಡಿದ್ದೆ ಬಿಗ್‌ ಬಾಸ್‌ ಇರುವಾಗ, ಅದೇ ರೀತಿ ಗಿಲ್ಲಿ ಫೇಸ್‌ ಮಾಡ್ತಾ ಇದ್ದಾರೆ. ಅವರಲ್ಲಿ ನನಗೆ ಇಷ್ಟ ಆಗೋದು ಆ ಕ್ಷಣಕ್ಕೆ ಅವರು ಉತ್ತರ ಕೊಡ್ತಾರೆ. ನಮ್ಮ ಸೀಸನ್‌ನಲ್ಲಿ ಹೇಳಿದ್ರೆ ಇನ್ನಷ್ಟು ಗಲಾಟೆ ಆಗಿರೋದು. ಒನ್‌ ಮ್ಯಾನ್‌ ಶೋ ಹೌದು. ಅವರಿಗೆ ಒಳ್ಳೆಯದಾಗಲಿ. ನನ್ನ ಪ್ರಕಾರ ರಿಯಾಲಿಟಿ ಶೋ ಪರ್ಸನಾಲಿಟಿ ಶೋ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ನನ್ನ ಥರಾನೇ , ಬಿಗ್‌ ಬಾಸ್‌ ಗೆಲ್ಲೋದು ಅವರೇ; ಸಂಗೀತಾ ಶೃಂಗೇರಿ ನೇರ ಮಾತು

ಬಿಗ್‌ ಬಾಸ್‌ ನಲ್ಲಿ ಬಡವ ಶ್ರೀಮಂತ ಏನಿಲ್ಲ. ಎಲ್ಲರಿಗೂ ಒಂದೇ ಟಾಸ್ಕ್‌ ಕೂಡ ಇದೆ. ಮನೆಯಲ್ಲಿ ಹೇಗಿದ್ದಾರೆ ಅದನ್ನ ನೋಡಿ ಗೆಲ್ಲಿಸಿ, ಗಿಲ್ಲಿ ಗೆಲ್ಲಬೇಕು. ಕಾವ್ಯ ಕೂಡ ಚೆನ್ನಾಗಿ ಆಡ್ತಿದ್ದಾರೆ. ಎಲ್ಲರಿಗೂ ಒಳ್ಳೆದಾಗಲಿ ಎಂದರು.