ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪ್ರಜಾ ಸೌಧ ಕಟ್ಟಡಕ್ಕೆ ಠರಾವು

ಪಟ್ಟಣದ ಮಹಾತ್ಮ ಗಾಂಧೀಜಿ ವೃತ್ತದ ಹತ್ತಿರದ ಸರ್ಕಾರಿ ಶಾಲೆಯ ಆವರಣ, ಪ್ರಸ್ತುತ ಇರುವ ತಹಸಿಲ್ದಾರ್ ಕಾರ್ಯಾಲಯ ಹಾಗೂ ನಾಡ ಕಾರ್ಯಾಲಯ ಸಹಿತ ಒಟ್ಟು ಮೂರು ಸ್ಥಳಗಳಲ್ಲಿ ಪ್ರಜಾ ಸೌಧ ಕಟ್ಟಡ ನಿರ್ಮಿಸಲು ಸ್ಥಳ ಗುರುತಿಸಿ ಪ್ರಸ್ತಾವನೆ ಸಲ್ಲಿಸಿ ಸಭೆ ಕರೆಯಲಾಗಿತ್ತು. ಚುನಾಯಿತ ಒಟ್ಟು 17 ಜನ ಸದಸ್ಯರಲ್ಲಿ 15 ಜನ ಸದಸ್ಯರು ಸಭೆಯಲ್ಲಿ ಹಾಜರಿದ್ದು ಇಬ್ಬರು ಸದಸ್ಯರು ಗೈರು ಹಾಜರಾಗಿದ್ದರು.

ಪ್ರಜಾ ಸೌಧ ಕಟ್ಟಡಕ್ಕೆ ಠರಾವು

ಪ್ರಜಾ ಸೌಧ ಕಟ್ಟಡ ನಿರ್ಮಿಸುವ ಕುರಿತು ಪಟ್ಟಣ ಪಂಚಾಯಿತ ಕಾರ್ಯಕ್ರಮದಲ್ಲಿ ಸಭೆ ಜರುಗಿತು. -

Ashok Nayak Ashok Nayak Oct 14, 2025 7:05 PM

ಕೊಲ್ಹಾರ: ತಾಲೂಕ ಕೇಂದ್ರವಾದ ಕೊಲ್ಹಾರ ಪಟ್ಟಣದಲ್ಲಿ ಪ್ರಜಾ ಸೌಧ ಕಟ್ಟಡ ನಿರ್ಮಾಣದ ಸ್ಥಳದ ಗುರುತಿಸುವ ಕುರಿತು ಪಟ್ಟಣ ಪಂಚಾಯಿತ ಕಾರ್ಯಾಲಯದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಿ.ಎಸ್ ಗಿಡ್ಡಪ್ಪಗೋಳ ನೇತೃತ್ವದಲ್ಲಿ ಮಂಗಳವಾರ ಸಭೆ ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದ ಮಹಾತ್ಮ ಗಾಂಧೀಜಿ ವೃತ್ತದ ಹತ್ತಿರದ ಸರ್ಕಾರಿ ಶಾಲೆಯ ಆವರಣ, ಪ್ರಸ್ತುತ ಇರುವ ತಹಸಿಲ್ದಾರ್ ಕಾರ್ಯಾಲಯ ಹಾಗೂ ನಾಡ ಕಾರ್ಯಾಲಯ ಸಹಿತ ಒಟ್ಟು ಮೂರು ಸ್ಥಳಗಳಲ್ಲಿ ಪ್ರಜಾ ಸೌಧ ಕಟ್ಟಡ ನಿರ್ಮಿಸಲು ಸ್ಥಳ ಗುರುತಿಸಿ ಪ್ರಸ್ತಾವನೆ ಸಲ್ಲಿಸಿ ಸಭೆ ಕರೆಯಲಾಗಿತ್ತು. ಚುನಾ ಯಿತ ಒಟ್ಟು 17 ಜನ ಸದಸ್ಯರಲ್ಲಿ 15 ಜನ ಸದಸ್ಯರು ಸಭೆಯಲ್ಲಿ ಹಾಜರಿದ್ದು ಇಬ್ಬರು ಸದಸ್ಯರು ಗೈರು ಹಾಜರಾಗಿದ್ದರು. ಸರ್ಕಾರಿ ಶಾಲಾ ಆವರಣದಲ್ಲಿ ಪ್ರಜಾ ಸೌಧ ಕಟ್ಟಡ ನಿರ್ಮಿಸಲು 12 ಜನ ಸದಸ್ಯರ ಒಮ್ಮತದ ಮೂಲಕ ಸಹಮತ ವ್ಯಕ್ತಪಡಿಸಿದರೆ ಮೂವರು ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ಇದನ್ನೂ ಓದಿ: Kolhar News: ಪೌರಕಾರ್ಮಿಕರ ಶ್ರಮ ಶ್ರೇಷ್ಠವಾದದ್ದು: ಮುಖ್ಯಾಧಿಕಾರಿ ವೀರೇಶ ಹಟ್ಟಿ

ಅಂತಿಮವಾಗಿ 12 ಸದಸ್ಯರ ಒಮ್ಮತದ ನಿರ್ಣಯದಂತೆ ಸರ್ಕಾರಿ ಶಾಲಾ ಆವರಣದಲ್ಲಿ ಪ್ರಜಾ ಸೌಧ ಕಟ್ಟಡ ನಿರ್ಮಿಸುವ ಕುರಿತು ಠರಾವು ಪಾಸು ಮಾಡಲಾಯಿತು ಎಂದು ಪ.ಪಂ ಮುಖ್ಯಾಧಿಕಾರಿ ವಿರೇಶ್ ಹಟ್ಟಿ ಮಾದ್ಯಮದವರಿಗೆ ಮಾಹಿತಿ ನೀಡಿದರು.

ಪ್ರಜಾ ಸೌಧ ಕಟ್ಟಡ ನಿರ್ಮಿಸುವ ಕುರಿತು

ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ನೇತೃತ್ವದಲ್ಲಿ ಸದಸ್ಯರ ಸಭೆ ನಡೆಯುತ್ತಿದ್ದರೆ, ಪಂಚಾಯತ್ ಕಾರ್ಯಾಲಯದ ಮುಂಭಾಗ ಪಟ್ಟಣದ ಕೆಲ ನಾಗರಿಕರು ಸರ್ಕಾರಿ ಶಾಲಾ ಆವರಣ ಬಿಟ್ಟು ಬೇರೆ ಸ್ಥಳ ಗುರುತಿಸಬೇಕು ಎಂದು ಒತ್ತಾಯಿಸಿದ ಘಟನೆ ಈ ಸಂದರ್ಭದಲ್ಲಿ ಜರುಗಿತು.

ರಾಜಿನಾಮೆ ನೀಡಿದ ಕಾಂಗ್ರೆಸ್ ಸದಸ್ಯ: ಪ್ರಜಾ ಸೌಧ ಕಟ್ಟಡ ವಿರೋಧಿಸಿ ಹಾಗೂ ಸಮರ್ಪಕ ಕೆಲಸಗಳು ನೆರವೇರುತ್ತಿಲ್ಲ ಎಂದು ಪಟ್ಟಣ ಪಂಚಾಯತ ಕಾಂಗ್ರೆಸ್ ಸದಸ್ಯ ಶ್ರೀಶೈಲ ಮುಳವಾಡ ಕಂಪ್ಯೂಟರ್ ಮುದ್ರಿತ ಟೈಪು ಮಾಡಿಸಿಕೊಂಡು ಬಂದು ರಾಜಿನಾಮೆ ಪತ್ರ ನೀಡಿದ ಪ್ರಸಂಗ ಈ ಸಂದರ್ಭದಲ್ಲಿ ಜರುಗಿತು.