ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kolhar News: ಪೌರಕಾರ್ಮಿಕರ ಶ್ರಮ ಶ್ರೇಷ್ಠವಾದದ್ದು: ಮುಖ್ಯಾಧಿಕಾರಿ ವೀರೇಶ ಹಟ್ಟಿ

ಒಂದು ಗ್ರಾಮ, ಪಟ್ಟಣ, ನಗರ, ಮಹಾನಗರ ಪಾಲಿಕೆಗಳು ಸ್ವಚ್ಛವಾಗಿ, ಸುಂದರವಾಗಿ ಕಾಣಲು ಬೆಳಗಿನ ಜಾವ ಎದ್ದು ಕಸಗುಡಿಸುವದು ಮನೆಗಳಲ್ಲಿ ಅಂಗಡಿಗಳಲ್ಲಿ ಇನ್ನಿತರ ಕಡೆ ಎಸೆಯುವ ಕಸವನ್ನು ದೂರ ದಲ್ಲಿ ಸಾಗಿಸಿ ಸ್ವಚ್ಚತೆ ಕಾಪಾಡುವ ಶ್ರಮಜೀವಿಗಳೇ ಪೌರಕಾರ್ಮೀಕರು ಎಂದು ಅಭಿಪ್ರಾಯ ವ್ಯಕ್ತಪಡಿಸಿ ದರು

ಪೌರಕಾರ್ಮಿಕರ ಶ್ರಮ ಶ್ರೇಷ್ಠವಾದದ್ದು: ಮುಖ್ಯಾಧಿಕಾರಿ ವೀರೇಶ ಹಟ್ಟಿ

-

Ashok Nayak Ashok Nayak Sep 24, 2025 12:01 PM

ಕೊಲ್ಹಾರ: ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಸ್ಥಳೀಯ ಪಟ್ಟಣ ಪಂಚಾಯತ್ ಕಾರ್ಯಾ ಲಯದಲ್ಲಿ ಪೌರಕಾರ್ಮಿಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಸರಕಾರದಿಂದ ಪೌರಕಾರ್ಮೀಕರಿಗೆ ಕೊಡಮಾಡಿದ ಕಿಟ್ ಮತ್ತು ಧನ ಸಹಾಯವನ್ನು ಪ.ಪಂ ಮುಖ್ಯಾಧಿಕಾರಿ ವೀರೇಶ ಹಟ್ಟಿ ವಿತರಿಸಿ ಮಾತನಾಡುತ್ತಾ ಒಂದು ಗ್ರಾಮ, ಪಟ್ಟಣ, ನಗರ, ಮಹಾನಗರ ಪಾಲಿಕೆಗಳು ಸ್ವಚ್ಛವಾಗಿ, ಸುಂದರವಾಗಿ ಕಾಣಲು ಬೆಳಗಿನ ಜಾವ ಎದ್ದು ಕಸಗುಡಿಸುವದು ಮನೆಗಳಲ್ಲಿ ಅಂಗಡಿಗಳಲ್ಲಿ ಇನ್ನಿತರ ಕಡೆ ಎಸೆಯುವ ಕಸವನ್ನು ದೂರದಲ್ಲಿ ಸಾಗಿಸಿ ಸ್ವಚ್ಚತೆ ಕಾಪಾಡುವ ಶ್ರಮಜೀವಿಗಳೇ ಪೌರಕಾರ್ಮೀಕರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಎಂ ಆರ್ ಕಲಾದಗಿ ಮಾತನಾಡಿ ಎಲ್ಲಿ ಸ್ವಚ್ಛತೆ ಇರುತ್ತದೆ ಅಲ್ಲಿ ಸ್ವರ್ಗ ಇರುತ್ತದೆ ಎಂದು ಹೇಳುತ್ತಾ ಕೊಲ್ಹಾರ ಪಟ್ಟಣ ಸ್ವರ್ಗ ದಂತೆ ಕಾಣಲು ಈ ಪೌರಕಾರ್ಮಿಕರ ಶ್ರಮ ಕಾರಣ ಎಂದು ಹೇಳಿದರು.

ಇದನ್ನೂ ಓದಿ: Kolhar News: ಯುಕೆಪಿಯಲ್ಲಿ ಭಯದ ವಾತಾವರಣ : ಮಂಗಗಳ ಸೆರೆ

ದಶರಥ ಈಟಿ ಮಾತನಾಡಿ ಉತ್ತಮ ಆರೋಗ್ಯವಂತ ಪಟ್ಟಣ ನಿರ್ಮಾಣವಾಗಲು ನಮ್ಮ ಪೌರಕಾರ್ಮಿಕರ ಉತ್ತಮ ಶ್ರಮದಾನ ಕಾರಣ, ತಮ್ಮ ಆರೋಗ್ಯ ಲೆಕ್ಕಿಸದೆ ಸೇವೆ ಮಾಡಿ ಸಮಾಜದ ಆರೋಗ್ಯ ಕಾಪಾಡುವ ಈ ಕಾರ್ಯ ಶ್ರೇಷ್ಠವಾದದ್ದು ಎಂದು ಹೇಳಿದರು.

ವಿಶೇಷತೆ: ಪೌರಕಾರ್ಮೀಕರಿಗಾಗಿ ವಿವಿಧ ರೀತಿಯ ಆಟಗಳನ್ನು ಆಡಿಸಿ ವಿಜೇತರಾದವರಿಗೆ ಬಹುಮಾನ ಕೊಡಮಾಡಲಾಯಿತು ಮತ್ತು ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆ ಅಡಿಯಲ್ಲಿ ಮನೆ ಕಟ್ಟಲು ಸಹಾಯಧನ ರೂಪಾಯಿ 7 ಲಕ್ಷ ಪ್ರತಿ ಪೌರಕಾರ್ಮಿಕರಿಗೆ ನೀಡಿ ಪ.ಪಂ ಮುಖ್ಯಾಧಿ ಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪ.ಪಂ ಸಿಬ್ಬಂದಿಗಳು ಪುಷ್ಪವೃಷ್ಠಿಗೈದು ಗೌರವಿಸಿದರು‌.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಿ.ಎಸ್ ಗಿಡ್ಡಪ್ಪಗೋಳ, ಇಕ್ಬಾಲ್ ನದಾಫ್ ಮತ್ತು ಪಟ್ಟಣ ಪಂಚಾಯಿತಿ ಸದಸ್ಯರಾದ ತೌಶೀಪ ಗಿರಗಾಂವಿ, ಮಹಾಂತೇಶ ಗಿಡ್ಡಪ್ಪಗೋಳ, ಬಾಬು ಭಜಂತ್ರಿ, ನಿಂಗಪ್ಪ ಗಣಿ, ಅಶೋಕ ಜಿಡ್ಡಿಬಾಗಿಲ,ದಸ್ತಗೀರ ಕಲಾದಗಿ, ಅಪ್ಪಾಶಿ ಮಟ್ಟಿಹಾಳ, ಮಲ್ಲಿಕಾರ್ಜುನ ಹೆರಕಲ್ ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿ ವರ್ಗದವರು ಪೌರಕಾರ್ಮಿಕರು ಉಪಸ್ಥಿತರಿದ್ದರು.