ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸ್ವಾತಂತ್ರ ಹೋರಾಟಗಾರರ ಬದುಕು ನಮಗೆಲ್ಲ ಆದರ್ಶ: ತಹಶೀಲ್ದಾರ ಎಸ್.ಎಂ ಮ್ಯಾಗೇರಿ

ಭಾರತ ದೇಶ ಆರ್ಥಿಕವಾಗಿ ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ. ಭವ್ಯ ಭಾರತ ದೇಶ ವಿಶ್ವ ಭೂಪಟದಲ್ಲಿ, ಜಾಗತಿಕವಾಗಿ ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ಮೊದಲನೇ ಸ್ಥಾನ ದಲ್ಲಿ ಕಾಣಲು ಈ ಸ್ವಾತಂತ್ರ್ಯ ಎಂಬ ಸಾಧನ ಅತಿ ಮಹತ್ವದ್ದು ಎಂದರು. ಮಹಾತ್ಮಾ ಗಾಂಧೀಜಿಯವರ ನಾಯಕತ್ವದಲ್ಲಿ ಅಹಿಂಸಾತ್ಮಕ ಹೋರಾಟದ ಫಲವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿತು. ಜೊತೆಗೆ ಅನೇಕ ಹೋರಾಟಗಾರ ತ್ಯಾಗ, ಬಲಿದಾನವನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ಅತ್ಯವಶ್ಯಕವಾಗಿದೆ

ಕೊಲ್ಹಾರ: ಅನೇಕ ಮಹಾನ್ ನಾಯಕರುಗಳ ಅವಿರತ ಹೋರಾಟ ತ್ಯಾಗ, ಬಲಿದಾನಗಳ ಮೂಲಕ ದೇಶಕ್ಕೆ ದೊರೆತ ಸ್ವಾತಂತ್ರ ಅವಿಸ್ಮರಣೀಯವಾದದ್ದು. ಸ್ವಾತಂತ್ರ ಹೋರಾಟಗಾರರ ಬದುಕು ನಮಗೆಲ್ಲ ಆದರ್ಶಪ್ರಾಯವಾದದ್ದು ಎಂದು ತಾಲೂಕ ಕಾರ್ಯನಿರ್ವಾಹಕ ದಂಡಾಧಿಕಾರಿ ಎಸ್.ಎಂ ಮ್ಯಾಗೇರಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕ ಆಡಳಿತ ನೇತೃತ್ವದಲ್ಲಿ ಪಟ್ಟಣದ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಭಾರತ ದೇಶ ಆರ್ಥಿಕವಾಗಿ ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ. ಭವ್ಯ ಭಾರತ ದೇಶ ವಿಶ್ವ ಭೂಪಟದಲ್ಲಿ, ಜಾಗತಿಕವಾಗಿ ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ಮೊದಲನೇ ಸ್ಥಾನದಲ್ಲಿ ಕಾಣಲು ಈ ಸ್ವಾತಂತ್ರ್ಯ ಎಂಬ ಸಾಧನ ಅತಿ ಮಹತ್ವದ್ದು ಎಂದರು. ಮಹಾತ್ಮಾ ಗಾಂಧೀಜಿಯವರ ನಾಯಕತ್ವದಲ್ಲಿ ಅಹಿಂಸಾತ್ಮಕ ಹೋರಾಟದ ಫಲವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿತು. ಜೊತೆಗೆ ಅನೇಕ ಹೋರಾಟಗಾರ ತ್ಯಾಗ, ಬಲಿದಾನವನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ಅತ್ಯವಶ್ಯಕವಾಗಿದೆ ಎಂದರು.

ಇದನ್ನೂ ಓದಿ: Kolhar News: ಪಟ್ಟಣ ಪಂಚಾಯಿತಿ ಸದಸ್ಯನ ಮಾದರಿ ಕಾರ್ಯ

ವಿಶೇಷತೆ: ಈ ಸಂದರ್ಭದಲ್ಲಿ ತಾಲೂಕ ಆಡಳಿತದ ನೇತೃತ್ವದಲ್ಲಿ ವಿಶೇಷ ಸನ್ಮಾನಿತರನ್ನಾಗಿ ಮನಗೂಳಿ ಬ್ಯಾಂಕ್ ದರೋಡೆ ಪ್ರಕರಣ ಭೇದಿಸಿದ ಪೊಲೀಸ್ ಅಧಿಕಾರಿಗಳಿಗೆ, ಮಾಜಿ ಸೈನಿಕರಾದ ಸುನೀಲ ಬೆಳ್ಳುಬ್ಬಿ, ಪತ್ರಕರ್ತ ಮಲ್ಲಿಕಾರ್ಜುನ ಕುಬಕಡ್ಡಿ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಶ್ರೇಯಾ ಕೋಲೂರ, ಭಾಗ್ಯಾಶ್ರೀ ದೊಡಮನಿ, ಐಶ್ವರ್ಯ ಬಿರಾದಾರ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸುಶ್ಮೀತಾ ಔರಸಂಗ, ರಕ್ಷಿತಾ ಕಾಖಂಡಕಿ, ಅಮೃತಾ ಗಾಣಿಗೇರ ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಮಕ್ಕಳಿಂದ ನಾಟಕ, ಸಂಗೀತ ನೃತ್ಯ ನಡೆಯಿತು, ಪ್ರತಿ ಶಾಲೆಗೆ ಪ್ರಶಸ್ತಿ ಪ್ರಮಾಣ ಪತ್ರ ನೀಡಲಾಯಿತು.

ವೇದಿಕೆಯ ಮೇಲೆ ಪ.ಪಂ ಅಧ್ಯಕ್ಷ ಸಿ.ಎಸ್ ಗಿಡ್ಡಪ್ಪಗೋಳ, ಉಪಾಧ್ಯಕ್ಷೆ ರಾಜಮಾ ನದಾಫ, ಪಂಚ ಗ್ಯಾರಂಟಿ ಸಮಿತಿ ತಾಲೂಕ ಅಧ್ಯಕ್ಷ ಸಂತೋಷ ಗಣಾಚಾರಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸುನೀಲ ಮದ್ದಿನ, ಪ.ಪಂ ಮುಖ್ಯಾಧಿಕಾರಿ ವೀರೇಶ ಹಟ್ಟಿ, ಪಿಎಸ್ಐ ಎಂ.ಬಿ ಬಿರಾದಾರ, ಕೃಷಿ ಇಲಾಖೆ ಅಧಿಕಾರಿ ಎಂ.ಕೆ ಪುರೋಹಿತ, ಉಪ ಖಜಾನಾಧಿಕಾರಿ ವಿ.ಎಸ್ ಡೊಣೂರ, ಹೆಸ್ಕಾಂ ಸಹಾಯಕ ಅಭಿಯಂತರರಾದ ಎಸ್.ಎಸ್ ಪಡಸಲಗಿ, ವೈದ್ಯಾಧಿಕಾರಿ ಲಕ್ಷ್ಮೀ ತೆಲ್ಲೂರು, ಪ.ಪಂ ಸದಸ್ಯರಾದ ಶ್ರೀಶೈಲ ಮುಳವಾಡ, ಮಹಾಂತೇಶ ಗಿಡ್ಡಪ್ಪಗೋಳ, ಬಾಬು ಬಜಂತ್ರಿ, ತೌಶೀಪ ಗಿರಗಾಂವಿ, ರಾವತಪ್ಪ ಗುಳಗೊಂಡ,ದಸ್ತಗೀರ ಕಲಾದಗಿ, ಲಕ್ಷ್ಮೀಬಾಯಿ ಹೆರಕಲ್, ಶಿವಪ್ಪ ಬ್ಯಾಡರ ಉಪಸ್ಥಿತರಿದ್ದರು.

ಆರ್.ಎಸ್ ಗಿಡ್ಡಪ್ಪಗೋಳ ನಿರೂಪಿಸಿದರು, ಕೆ.ಎಸ್ ಬಾಲಗೊಂಡ ಸ್ವಾಗತಿಸಿದರು, ಐ.ಬಿ ಹಾದಿಮನಿ ವಂದಿಸಿದರು.