Kolhar News: ಪಟ್ಟಣ ಪಂಚಾಯಿತಿ ಸದಸ್ಯನ ಮಾದರಿ ಕಾರ್ಯ
ಮಕ್ಕಳಿಗೆ ಸಮವಸ್ತ್ರ ವಿತರಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸಚಿವ ಶಿವಾನಂದ ಪಾಟೀಲರ ಹಿತಾಸಕ್ತಿಯಿಂದ ಕೊಲ್ಹಾರ ಪಟ್ಟಣ ಅಭಿವೃದ್ಧಿಗೆ ಮುನ್ನುಡಿ ಬರೆಯುತ್ತಿದೆ. ಪಟ್ಟಣದ ನನ್ನ ವಾರ್ಡ್ ವ್ಯಾಪ್ತಿಯ ಅಂಗನವಾಡಿ ಕೇಂದ್ರ ಕೂಡ ಸಚಿವ ಶಿವಾನಂದ ಪಾಟೀಲರ ಹಿತಾಸಕ್ತಿ ಯಿಂದ ಸ್ವಂತ ಕಟ್ಟಡ ಹೊಂದಿದ್ದು ಇತರ ಅಂಗನವಾಡಿ ಕೇಂದ್ರಗಳಿಗೆ ಮಾದರಿಯವಾಗಿ ನಿಂತಿದೆ ಎಂದರು.


ಕೊಲ್ಹಾರ: ಪಟ್ಟಣದ ವಾರ್ಡ್ ಸಂಖ್ಯೆ 15 ರ ಅಂಗನವಾಡಿ ಕೇಂದ್ರದ ಶಿಶುಗಳಿಗೆ ಪ.ಪಂ ಸದಸ್ಯ ದಸ್ತಗೀರ ಕಲಾದಗಿ ತಮ್ಮ ಸ್ವಂತ ಖರ್ಚಿನಿಂದ ಸಮವಸ್ತ್ರ ವಿತರಿಸುವ ಮೂಲಕ ಇತರರಿಗೆ ಮಾದರಿ ಯಾಗಿದ್ದಾರೆ.
ಇದನ್ನೂ ಓದಿ:Kolar News: ಹಾಸ್ಟೆಲ್‌ನಲ್ಲಿ ದೆವ್ವ ಇದೆ ಎಂದಿದ್ದಕ್ಕೆ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ವಾರ್ಡನ್!
ಮಕ್ಕಳಿಗೆ ಸಮವಸ್ತ್ರ ವಿತರಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸಚಿವ ಶಿವಾನಂದ ಪಾಟೀಲರ ಹಿತಾಸಕ್ತಿಯಿಂದ ಕೊಲ್ಹಾರ ಪಟ್ಟಣ ಅಭಿವೃದ್ಧಿಗೆ ಮುನ್ನುಡಿ ಬರೆಯುತ್ತಿದೆ. ಪಟ್ಟಣದ ನನ್ನ ವಾರ್ಡ್ ವ್ಯಾಪ್ತಿಯ ಅಂಗನವಾಡಿ ಕೇಂದ್ರ ಕೂಡ ಸಚಿವ ಶಿವಾನಂದ ಪಾಟೀಲರ ಹಿತಾಸಕ್ತಿ ಯಿಂದ ಸ್ವಂತ ಕಟ್ಟಡ ಹೊಂದಿದ್ದು ಇತರ ಅಂಗನವಾಡಿ ಕೇಂದ್ರಗಳಿಗೆ ಮಾದರಿಯವಾಗಿ ನಿಂತಿದೆ ಎಂದರು. ಪಟ್ಟಣದ ನನ್ನ ವಾರ್ಡ್ ವ್ಯಾಪ್ತಿಯ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಮೂವತ್ತು ಜೊತೆ ಸಮವಸ್ತ್ರ ನೀಡುವ ಮೂಲಕ ಅಳಿಲು ಸೇವೆ ಮಾಡಿದ್ದೆನೆ ಸರ್ವ ಪಾಲಕರು ತಮ್ಮ ಮಕ್ಕಳಿಗೆ ಆರು ವರ್ಷಗಳ ಕಾಲ ಕಡ್ಡಾಯವಾಗಿ ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ವಿಜಯಲಕ್ಷ್ಮಿ ಮಳಲಿ, ಶಿಕ್ಷಕ ಎ.ಎ ಹೊನವಾಡ ಸಹಿತ ಇತರರು ಇದ್ದರು.