ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Lawrence Bishnoi: ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ಗ್ಯಾಂಗ್‌ಸ್ಟರ್‌ ಬಿಷ್ಣೋಯಿ ಭಾವಚಿತ್ರ

ವಿಜಯಪುರ ನಗರದಲ್ಲಿ ನಿನ್ನೆ ನಡೆದ ಶಿವಾಜಿ ಜಯಂತಿ ಉತ್ಸವದ ನಿಮಿತ್ತವಾಗಿ ಮೆರವಣಿಗೆ ಏರ್ಪಡಿಸಲಾಗಿತ್ತು. ಮೆರವಣಿಗೆಯಲ್ಲಿ ಕೆಲವು ಯುವಕರು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಫೋಟೊ ಹಿಡಿದು ಹೆಜ್ಜೆ ಹಾಕಿದರು. ಒಂದು ಕಡೆ ಕೇಸರಿ ಧ್ವಜ, ಇನ್ನೊಂದೆಡೆ ಶಿವಾಜಿ ಮಹಾರಾಜರ ಭಾವಚಿತ್ರವಿರುವ ಕೇಸರಿ ಧ್ವಜಗಳ ನಡುವೆ ಗ್ಯಾಂಗ್‌ಸ್ಟರ್ ಫೋಟೋವನ್ನು ಕೂಡ ಪ್ರದರ್ಶಿಸಲಾಯಿತು.

ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ಗ್ಯಾಂಗ್‌ಸ್ಟರ್‌ ಬಿಷ್ಣೋಯಿ ಭಾವಚಿತ್ರ

ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ಲಾರೆನ್ಸ್‌ ಬಿಷ್ಣೋಯಿ ಭಾವಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Feb 24, 2025 12:44 PM

ವಿಜಯಪುರ: ವಿಜಯಪುರ (Vijayapura news) ನಗರದಲ್ಲಿ ನಿನ್ನೆ ನಡೆದ ಶಿವಾಜಿ ಜಯಂತಿ (Shivaji Jayanti) ಉತ್ಸವದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಕೆಲವು ಯುವಕರು ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ (Lawrence Bishnoi) ಭಾವಚಿತ್ರ (Photo) ಹಿಡಿದು ನೃತ್ಯ ಮಾಡಿದ್ದು ಕಂಡುಬಂತು. ಪ್ರಜ್ಞಾವಂತ ಜನರನ್ನು ಇದು ಆಘಾತಗೊಳಿಸಿದ್ದು, ದೇಶದ ಕಾನೂನುಭಂಜಕ ಹಾಗೂ ಗ್ಯಾಂಗ್‌ಸ್ಟರ್‌ ಫೋಟೋವನ್ನು ಹೊತ್ತು ಮೆರೆಸಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.

ವಿಜಯಪುರ ನಗರದಲ್ಲಿ ನಿನ್ನೆ ನಡೆದ ಶಿವಾಜಿ ಜಯಂತಿ ಉತ್ಸವದ ನಿಮಿತ್ತವಾಗಿ ಮೆರವಣಿಗೆ ಏರ್ಪಡಿಸಲಾಗಿತ್ತು. ಮೆರವಣಿಗೆಯಲ್ಲಿ ಕೆಲವು ಯುವಕರು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಫೋಟೊ ಹಿಡಿದು ಹೆಜ್ಜೆ ಹಾಕಿದರು. ಒಂದು ಕಡೆ ಕೇಸರಿ ಧ್ವಜ, ಇನ್ನೊಂದೆಡೆ ಶಿವಾಜಿ ಮಹಾರಾಜರ ಭಾವಚಿತ್ರವಿರುವ ಕೇಸರಿ ಧ್ವಜಗಳ ನಡುವೆ ಗ್ಯಾಂಗ್‌ಸ್ಟರ್ ಫೋಟೋವನ್ನು ಕೂಡ ಪ್ರದರ್ಶಿಸಲಾಯಿತು.

ಇದೇ ಸಂದರ್ಭದಲ್ಲಿ ಯುವಕರ ನಡುವೆ ಗದ್ದಲ‌ ತಳ್ಳಾಟ ಕೂಡ ನಡೆದಿದೆ. ವಿಜಯಪುರ ನಗರದ ಗಾಂಧಿ ಚೌಕ್ ರಸ್ತೆಯಲ್ಲಿ ಮೆರವಣಿಗೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಲಾರೆನ್ಸ್ ಬಿಷ್ಣೋಯಿ ಬಾಲಿವುಡ್‌ನ ಹೀರೋ ಸಲ್ಮಾನ್‌ ಖಾನ್‌ ಕೊಲೆಗೆ ಯತ್ನಿಸಿದ್ದು ಸುದ್ದಿಯಾಗಿತ್ತು. ದೇಶದಿಂದ ತಲೆ ತಪ್ಪಿಸಿಕೊಂಡು ಪರಾರಿಯಾಗಿರುವ ಈತ ಹಲವಾರು ಪ್ರಕರಣಗಳಲ್ಲಿ ನಮ್ಮ ಪೊಲೀಸರಿಗೆ ಬೇಕಾಗಿದ್ದಾನೆ. ಇಂಥ ಕಾನೂನುಬಾಹಿರ ಕೃತ್ಯಗಳನ್ನು ಎಸಗಿರುವ ವ್ಯಕ್ತಿಯ ಫೋಟೋವನ್ನು ಹೀರೋ ಲೆವೆಲ್‌ಗೆ ಮೆರೆಸಿರುವುದು ಸರಿಯಲ್ಲ. ಇದು ಶಿವಾಜಿಯಂಥ ಮಹಾ ವ್ಯಕ್ತಿತ್ವಕ್ಕೆ ಮಾಡುವ ಅವಮಾನ ಕೂಡ ಎಂದು ಫೋಟೋ ಪ್ರದರ್ಶನ ಕುರಿತು ಹಲವು ಪ್ರಜ್ಞಾವಂತರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಪೊಲೀಸರು ಯುವಕರಿಗೆ ಎಚ್ಚರಿಕೆ ನೀಡಬೇಕು ಎಂದು ಬಯಸಿದ್ದಾರೆ.

ಇದನ್ನೂ ಓದಿ: Murder Case: ಪತ್ನಿಯ ಜೊತೆ ಸಲಿಗೆ ಬೆಳೆಸಿದ ಗೆಳೆಯನಿಗೆ ಇರಿದು ಹತ್ಯೆ