Vijayapura News: ಕೌಟುಂಬಿಕ ಕಲಹ- ಮೊಬೈಲ್ ಟವರ್ ಏರಿ ಕುಳಿತ ಯುವಕ!
Vijayapura News: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಯುವಕನೋರ್ವ ಮೊಬೈಲ್ ಟವರ್ ಏರಿದ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕೋಟ್ಯಾಳದಲ್ಲಿ ಜರುಗಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮನೆಯಲ್ಲಿ ಗಲಾಟೆ ಮಾಡಿಕೊಂಡ ಯುವಕ ಟವರ್ ಮೇಲೆ ಕುಳಿತು ಗೊಂದಲ ಸೃಷ್ಟಿಸಿದ್ದಾನೆ.


ವಿಜಯಪುರ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಯುವಕನೋರ್ವ ಮೊಬೈಲ್ ಟವರ್ ಏರಿದ ಘಟನೆ ವಿಜಯಪುರ ಜಿಲ್ಲೆಯ (Vijayapura News) ತಿಕೋಟಾ ತಾಲೂಕಿನ ಕೋಟ್ಯಾಳದಲ್ಲಿ ಜರುಗಿದೆ. ಶ್ರೀಶೈಲ ನಾಗಪ್ಪ ರಾಮತೀರ್ಥ (30) ಮೊಬೈಲ್ ಟವರ್ ವ್ಯಕ್ತಿ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮನೆಯಲ್ಲಿ ಗಲಾಟೆ ಮಾಡಿಕೊಂಡು ಟವರ್ ಮೇಲೆಯೇ ಕುಳಿತು ಆತಂಕ ಸೃಷ್ಟಿಸಿದ್ದಾನೆ. ಈತನನ್ನು ಟವರ್‌ನಿಂದ ಕೆಳಗಿಳಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಇನ್ನು ಗ್ರಾಮಸ್ಥರು ಸಹ ಯುವಕನೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದು, ಟವರ್ ಏರಿರುವ ಹಿನ್ನೆಲೆಯಲ್ಲಿ ಸಂವಹನ ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ. ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮೂವರು ಮಕ್ಕಳೊಂದಿಗೆ ಕೃಷ್ಣಾನದಿಗೆ ಹಾರಿ ತಾಯಿ ಆತ್ಮಹತ್ಯೆ
ರಾಯಬಾಗ: ಕೃಷ್ಣಾನದಿಗೆ ಹಾರಿ ತಾಯಿ ಮಕ್ಕಳು ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಘಟನೆ ನಡೆದಿದೆ. ಶಾರದಾ ಢಾಲೆ (38), ಅನುಶಾ ಢಾಲೆ (10), ಅಮೃತಾ ಢಾಲೆ (14), ಆದರ್ಶ ಢಾಲೆ (8) ಮೃತಪಟ್ಟ ದುರ್ದೈವಿಗಳು. ಕೌಟುಂಬಿಕ ಕಲಹದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಗಂಡ ದಿನನಿತ್ಯ ಗಲಾಟೆ ಮಾಡುತ್ತಿದ್ದ ಕಾರಣಕ್ಕೆ ಮಹಿಳೆ ತನ್ನ ಮೂರು ಮಕ್ಕಳ ಜತೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರೀತಿಸಿ ಮದುವೆಯಾದ ಮೂರೇ ದಿನದಲ್ಲಿ ವರ ಹೃದಯಾಘಾತಕ್ಕೆ ಬಲಿ
ಮಂಡ್ಯ: ಇತ್ತೀಚೆಗೆ ಪೂರ್ವಹಿನ್ನೆಲೆ ಇಲ್ಲದಿದ್ದರೂ ಆಕಸ್ಮಿಕವಾಗಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ (Heart Failure) ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಮಂಡ್ಯ (Mandya News) ಜಿಲ್ಲೆಯ ಕೆಆರ್ ಪೇಟೆ ಪಟ್ಟಣದಲ್ಲಿ ಮೂರು ದಿನದ ಹಿಂದಷ್ಟೇ ಮದುವೆಯಾಗಿದ್ದ ಯುವಕನೊಬ್ಬ ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಸುದ್ದಿಯನ್ನೂ ಓದಿ | Leopard dies: ಅರಣ್ಯ ಇಲಾಖೆ ಎಡವಟ್ಟಿನಿಂದ ಬೋನಿನಲ್ಲೇ ಬೆಂಕಿಗಾಹುತಿಯಾದ ಚಿರತೆ!
ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಪಟ್ಟಣದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಮೂರು ದಿನದ ಹಿಂದೆ ಮದುವೆಯಾಗಿದ್ದ ಶಶಾಂಕ್ ಎನ್ನುವ ಯುವಕ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಪುರಸಭೆ ಸದಸ್ಯ ಕೆಸಿ ಮಂಜುನಾಥ್ ಪುತ್ರ ಶಶಾಂಕ್ (28) ಹೀಗೆ ಸಾವನ್ನಪ್ಪಿದವರು. ಕಳೆದ ಭಾನುವಾರ ಶಶಾಂಕ್ ಹಸೆಮಣೆ ಏರಿದ್ದು, ಜಾರ್ಖಂಡ್ ಮೂಲದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ನಿನ್ನೆ ಹೃದಯಾಘಾತದಿಂದ ಶಶಾಂಕ್ ಸಾವನ್ನಪ್ಪಿದ್ದಾರೆ.