ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

Womens day Special: ಮಹಿಳಾ ಸಬಲೀಕರಣಕ್ಕೆ ವೇದಿಕೆ ಕಲ್ಪಿಸುತ್ತಿರುವ ಫ್ಯಾಷನ್‌ ಲೋಕ

Womens Day Special: ಇದೀಗ ಮಹಿಳಾ ಸಬಲೀಕರಣದ ರೆವಲ್ಯೂಷನ್‌ ಕಲರ್‌ಫುಲ್‌ & ಗ್ಲಾಮರಸ್‌ ಕ್ಷೇತ್ರವಾದ ಫ್ಯಾಷನ್‌ ಜಗತ್ತಿನಲ್ಲೂ ಆರಂಭವಾಗಿದೆ. ಇಲ್ಲಿ ಮಾನಿನಿಯರ ಪ್ರಾಧಾನ್ಯತೆ ಹೆಚ್ಚಾಗುತ್ತಿದ್ದಂತೆ ಎಲ್ಲೆಡೆ ಸುಲಭವಾಗಿ ವೇದಿಕೆ ದೊರಕುತ್ತಿದೆ. ಈ ಕ್ಷೇತ್ರದ ಕುರಿತಂತೆ ಫ್ಯಾಷನ್‌ ಎಕ್ಸ್‌ಪರ್ಟ್ಸ್‌ ಏನು ಹೇಳುತ್ತಾರೆ? ಇಲ್ಲಿದೆ ಸಂಕ್ಷಿಪ್ತ ಡಿಟೇಲ್ಸ್.‌

ಮಹಿಳಾ ಸಬಲೀಕರಣಕ್ಕೆ ವೇದಿಕೆ ಕಲ್ಪಿಸುತ್ತಿರುವ ಫ್ಯಾಷನ್‌ ಲೋಕ

ಚಿತ್ರಕೃಪೆ: ಪಿಕ್ಸೆಲ್‌

| ಶೀಲಾ ಸಿ. ಶೆಟ್ಟಿ, ಬೆಂಗಳೂರು

ಇಂದು ಮಹಿಳಾ ಸಬಲೀಕರಣವೆಂಬುದು ಕೇವಲ ಗ್ಲಾಮರಸ್‌ ಕ್ಷೇತ್ರಗಳಿಗೆ ಮಾತ್ರ ಮೀಸಲಾಗಿಲ್ಲ. ಬದಲಿಗೆ ಫ್ಯಾಷನ್‌ಲೋಕದಲ್ಲೂ ವುಮೆನ್‌ ಎಂಪವರ್‌ಮೆಂಟ್‌ ರೆವಲ್ಯೂಷನ್‌ (Womens day Special) ಹೆಸರಲ್ಲೂ ಎಲ್ಲೆಡೆ ಆರಂಭಗೊಂಡಿದೆ. ಅಲ್ಲದೇ, ಈ ಕ್ಷೇತ್ರದ ನಾನಾ ಚಿಕ್ಕ ಪುಟ್ಟ ವಿಭಾಗಗಳಲ್ಲೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಾರಂಭಿಸಿದೆ. ಈ ಹಿಂದೆ ಫ್ಯಾಷನ್‌ ಲೋಕವು ಕಂಪ್ಲೀಟ್‌ ಪುರುಷ ಪ್ರಧಾನವಾಗಿತ್ತು. ಬರಬರುತ್ತಾ ಕಳೆದ ಒಂದೈದು ವರ್ಷಗಳಿಂದೀಚೆಯಿಂದ ಈ ಕ್ಷೇತ್ರದಲ್ಲಿನ ಒಂದಲ್ಲ, ಒಂದು ಕಾರ್ಯದಲ್ಲಿ ಮಹಿಳೆಯರು ತೊಡಗಿಸಿಕೊಳ್ಳುತ್ತಿದ್ದಾರೆ. ಡಿಸೈನರ್‌ ಹಾಗೂ ಮಾಡೆಲ್‌ಗಳು ಮಾತ್ರ ಈ ವರ್ಗಕ್ಕೆ ಸೇರುವುದಿಲ್ಲ. ಬದಲಿಗೆ ಎಲ್ಲಾ ವರ್ಗದ ಮಹಿಳೆಯರು ಸೇರಿಕೊಳ್ಳುತ್ತಾರೆ ಎನ್ನುತ್ತಾರೆ ಸೀನಿಯರ್‌ ಫ್ಯಾಷನ್‌ ಎಕ್ಸ್‌ಪರ್ಟ್ಸ್ ರಾಜೇಶ್‌ ಶೆಟ್ಟಿ ಹಾಗೂ ಧವನ್‌.

11

ವರ್ಷದಿಂದ ವರ್ಷಕ್ಕೆ ಹೆಚ್ಚಾಯ್ತು ಡಿಸೈನರ್‌ಗಳ ಎಂಟ್ರಿ

ಅಂದಹಾಗೆ, ಈ ಕ್ಷೇತ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಡಿಸೈನರ್‌ಗಳು ಹೆಚ್ಚಾಗಿದ್ದಾರೆ. ಕಳೆದ ದಶಕಕ್ಕೆ ಹೋಲಿಸಿದಲ್ಲಿ, ಮಹಿಳೆಯರ ಸಂಖ್ಯೆ ಮೊದಲಿಗಿಂತ ಹೆಚ್ಚಾಗಿದೆ. ಡಿಸೈನಿಂಗ್‌ ಕೋರ್ಸ್‌ ಮುಗಿಸಿ, ಪ್ರೊಫೆಷನಲ್‌ ಆಗಿ ಡಿಸೈನಿಂಗ್‌ ಕಾಯಕವನ್ನು ಸೀರಿಯಸ್‌ ಆಗಿ ತೆಗೆದುಕೊಂಡು ಮುಂದುವರಿಸುವವರು ಹೆಚ್ಚಾಗಿದ್ದಾರೆ. ಫ್ಯಾಷನ್‌ ಹಾಗೂ ಲೈಫ್‌ಸ್ಟೈಲ್‌ನಲ್ಲಿ ಜನರ ಆಸಕ್ತಿ ಹೆಚ್ಚಾಗಿರುವುದು ಇದಕ್ಕೆ ಪ್ರಮುಖ ಕಾರಣ. ಹಾಗಾಗಿ ಪ್ರತಿ ವರ್ಷ ಲೆಕ್ಕವಿಲ್ಲದಷ್ಟು ಮಂದಿ ಫ್ಯಾಷನ್‌ ಡಿಸೈನರ್‌ ಕೋರ್ಸ್‌ ಮಾಡುತ್ತಿದ್ದಾರೆ ಹಾಗೂ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ ಎನ್ನುತ್ತಾರೆ ಫ್ಯಾಷನಿಸ್ಟಾ ಪ್ರಸಾದ್‌ ಬಿದ್ದಪ್ಪ.

12

ಮಾಡೆಲಿಂಗ್‌ನಲ್ಲಿ ಹೆಚ್ಚಾದ ಯುವತಿಯರ ಆಸಕ್ತಿ

ಅಷ್ಟೇಕೆ! ಇತ್ತೀಚೆಗೆ ಮಾಡೆಲಿಂಗ್‌ ಕ್ಷೇತ್ರದಲ್ಲೂ ಯುವತಿಯರ ಸಂಖ್ಯೆ ಹೆಚ್ಚಾಗತೊಡಗಿದೆ. ಯುವಕರಿಗಿಂತ ಯುವತಿಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಾಡೆಲಿಂಗ್‌ ಕ್ಷೇತ್ರದಲ್ಲಿನ ಈ ಬೆಳವಣಿಗೆ ರ‍್ಯಾಂಪ್‌ ಚಿತ್ರಣವನ್ನೇ ಬದಲಿಸಿದೆ. ಇ-ಜನರೇಷನ್‌ ಯುವತಿಯರು ಸ್ವಯಂ ಆಸಕ್ತಿಯಿಂದ ಈ ಕ್ಷೇತ್ರವನ್ನು ಚೂಸ್‌ ಮಾಡಿಕೊಳ್ಳುತ್ತಿದ್ದಾರೆ. ಈ ಕ್ಷೇತ್ರದಲ್ಲೂ ಯಶಸ್ವಿಯಾಗುವ ಮೂಲಕ ಜಾಹೀರಾತು ಪ್ರಪಂಚದಲ್ಲಿ ಮುಂದುವರಿಯಬಹುದು ಎಂಬುದನ್ನು ಸಾಧಿಸಿ ತೋರಿಸುತ್ತಿದ್ದಾರೆ ಎನ್ನುತ್ತಾರೆ ಮಾಡೆಲ್‌ ಸಂಗೀತಾ ಹೊಳ್ಳ.

ಈ ಸುದ್ದಿಯನ್ನೂ ಓದಿ | Statement Skirt Fashion: ಹುಡುಗಿಯರನ್ನು ಸವಾರಿ ಮಾಡುತ್ತಿದೆ ವೈವಿಧ್ಯಮಯ ಸ್ಟೇಟ್‌ಮೆಂಟ್‌ ಸ್ಕರ್ಟ್ಸ್

13

ರೂಪದರ್ಶಿಗಳ ಸಾಮ್ರಾಜ್ಯ

ಮಾಡೆಲ್‌ ಹಾಗೂ ನಟಿ ರಾಶಿ ಪ್ರಕಾರ, ಮಾಡೆಲಿಂಗ್‌ ಕ್ಷೇತ್ರ ಸಿನಿಮಾ ಲೋಕಕ್ಕೆ ಎಂಟ್ರಿ ನೀಡಲು ಸಹಕಾರಿಯಂತೆ. ಇನ್ನು, ಈಗಷ್ಟೇ ಮಾಡೆಲಿಂಗ್‌ ಲೋಕಕ್ಕೆ ಕಾಲಿಟ್ಟಿರುವ ಮಾಡೆಲ್‌ ಶಮಿತಾಗೆ ಎಲ್ಲವೂ ಹೊಸತಂತೆ. ಯಶಸ್ವಿಯಾಗಲು ಕೇವಲ ರ‍್ಯಾಂಪ್‌ನಲ್ಲಿ ವಾಕ್‌ ಮಾಡಿದರೇ ಸಾಲದು. ಬದಲಿಗೆ ಪ್ರೊಫೆಷನಲ್‌ ಸಕ್ಸಸ್‌ಫುಲ್‌ ಮಾಡೆಲ್‌ ಆಗಬೇಕು ಎನ್ನುತ್ತಾರೆ. ಈ ನಿಟ್ಟಿನಲ್ಲಿ ಹಾರ್ಡ್‌ವರ್ಕ್‌ ಮಾಡುವುದು ಅಗತ್ಯ ಎನ್ನುತ್ತಾರೆ.

  • ಫ್ಯಾಷನ್‌ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಮೊದಲಿಗಿಂತ ಹೆಚ್ಚಾಗಿದೆ.
  • ರ‍್ಯಾಂಪ್‌ ಶೋ ಇವೆಂಟ್‌ಗಳಲ್ಲಿ ಮಹಿಳೆಯರಿಗೆ ನೀಡುವ ಅವಕಾಶಗಳ ಸಂಖ್ಯೆ ಹೆಚ್ಚಾಗಿದೆ.
  • ಫ್ಯಾಷನ್‌ ಕ್ಷೇತ್ರ ಮಹಿಳೆಯರಿಗೆ ಹೆಚ್ಚಿನ ಕಾರ್ಯ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸುತ್ತಿದೆ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)