ಗಣರಾಜ್ಯೋತ್ಸವದಂದೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಹುತಾತ್ಮ ಯೋಧನ 49 ವರ್ಷದ ತಾಯಿ
ಜನವರಿ 26 ರಂದು ಗುಜರಾತ್‍ನಲ್ಲಿ ಹುತಾತ್ಮ ಯೋಧನೊಬ್ಬನ 49 ವರ್ಷದ ತಾಯಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆಕೆಯ ಹಿರಿಯ ಮಗ ನೀರವ್ ಗಿರ್ ವಾಯುಪಡೆಯಲ್ಲಿ ಕರ್ತವ್ಯದಲ್ಲಿದ್ದಾಗ ವೀರ ಮರಣ ಹೊಂದಿದ್ದರು. ಇದೀಗ ಐವಿಎಫ್ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇದು ಎಲ್ಲೆಡೆ ವೈರಲ್(Viral News) ಆಗಿದೆ.


ಅಹ್ಮದಾಬಾದ್: ಪುತ್ರನನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದ ಹುತಾತ್ಮ ಯೋಧನ ತಾಯಿಯೊಬ್ಬರು ಐವಿಎಫ್ ಮೂಲಕ ಅವಳಿ ಮಕ್ಕಳು ಪಡೆದಿದ್ದಾರೆ. ವಿಶೇಷ ಎಂಬಂತೆ ಆಕೆ ಗಣರಾಜ್ಯೋತ್ಸವದಂತೆ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಗುಜರಾತ್‍ನ ಗಿರ್ ಸೋಮನಾಥ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಹುತಾತ್ಮ ಯೋಧ ನೀರವ್ ಅವರ ತಾಯಿ ತಮ್ಮ 49ನೇ ವಯಸ್ಸಿನಲ್ಲಿ ಅವಳಿ ಗಂಡು ಮಕ್ಕಳನ್ನು ಪಡೆದಿದ್ದಾರೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.
ಪ್ರತಾಪ್ ಭಾಯ್ ಚೌಹಾಣ್ ಮತ್ತು ಕಾಂಚನ್ ಬೆನ್ ಪ್ರತಾಪ್ ಭಾಯ್ ಚೌಹಾಣ್ ಅವರ ಏಕೈಕ ಪುತ್ರ ನೀರವ್ ಗಿರ್ ಸೋಮನಾಥ್ ಜಿಲ್ಲೆಯ ದುಧಲಾ ಗ್ರಾಮದವನು. ಚಿಕ್ಕ ವಯಸ್ಸಿನಲ್ಲಿಯೇ, ಸೈನ್ಯಕ್ಕೆ ಸೇರುವ ಆಸೆ ಹೊಂದಿದ್ದ ಈತ ಸುಮಾರು 19-20 ವರ್ಷ ವಯಸ್ಸಿನಲ್ಲಿ ವಾಯುಪಡೆಗೆ ಸೇರಿದರು. ದುರಂತವೆಂದರೆ, ಅವರು 2022 ರಲ್ಲಿ ಚೆನ್ನೈ ವಾಯುಪಡೆ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದಾಗ ವೀರ ಮರಣ ಹೊಂದಿದ್ದರು.
ಹಿರಿಯ ಮಗನ ಸಾವಿನ ಸುದ್ದಿ ಪೋಷಕರಿಗೆ ಆಗಾಧ ದುಃಖವನ್ನುಂಟು ಮಾಡಿತ್ತು. ಆದರೆ ಕೋಡಿನಾರ್‌ನ ಆರ್.ಎನ್.ವಾಲಾ ಆಸ್ಪತ್ರೆ ಅವರಿಗೆ ಭರವಸೆಯ ಬೆಳಕನ್ನು ನೀಡಿತು. 49 ವರ್ಷದ ಕಾಂಚನ್ ಬೆನ್‌ಗೆ ಐವಿಎಫ್ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು. ಇದರ ಪರಿಣಾಮವಾಗಿ, ಅವರು ಗಣರಾಜ್ಯೋತ್ಸವದಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ಈ ಬಗ್ಗೆ ಸುದ್ದಿ ಮಾಧ್ಯದೊಂದಿಗೆ ಸಂತೋಷ ಹಂಚಿಕೊಂಡ ತಂದೆ ಪ್ರತಾಪ್ ಭಾಯ್ ಚೌಹಾಣ್ "ನಮ್ಮ ಮಗ ನೀರವ್ ವಾಯುಪಡೆಗೆ ಆಯ್ಕೆಯಾದಾಗ ಭಾವನಗರದಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ. ಆರಂಭದಲ್ಲೇ ಆತನನ್ನು ಚೆನ್ನೈನಲ್ಲಿ ಪೋಸ್ಟಿಂಗ್ ಮಾಡಲಾಯಿತು. ಕರ್ತವ್ಯದಲ್ಲಿರುವಾಗಲೇ ಅವರು ಹುತಾತ್ಮರಾಗಿದ್ದ. ಆತನ ಅಗಲಿಕೆಯ ದುಃಖ ಭರಿಸೋಕೆ ಸಾಧ್ಯವಿಲ್ಲ. ಆದರೆ ಈಗ ಐವಿಎಫ್ ಚಿಕಿತ್ಸೆಯಿಂದಾಗಿ, ನಮ್ಮ ಕುಟುಂಬದಲ್ಲಿ ಇಬ್ಬರು ಗಂಡು ಮಕ್ಕಳು ಜನಿಸಿದ್ದಾರೆ. ದೇಶವನ್ನು ರಕ್ಷಿಸಲು ನಾನು ಮತ್ತೆ ಒಬ್ಬ ಮಗನನ್ನು ಸೈನ್ಯಕ್ಕೆ ಕಳುಹಿಸುತ್ತೇನೆ” ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Encounter in Chhattisgarh: ಛತ್ತೀಸ್‌ಗಢದಲ್ಲಿ ನಕ್ಸಲರೊಂದಿಗೆ ಎನ್‌ಕೌಂಟರ್; ಓರ್ವ ಹೆಡ್ ಕಾನ್ಸ್‌ಟೇಬಲ್ ಹುತಾತ್ಮ
ಕಾಂಚನ್ ಬೆನ್‍ಗೆ ಚಿಕಿತ್ಸೆ ನೀಡಿದ ಡಾ.ಶ್ವೇತಾಬೆನ್, "ಚೌಹಾಣ್ ಕುಟುಂಬದ ಏಕೈಕ ಮಗ ವಾಯುಪಡೆಯಲ್ಲಿ ಹುತಾತ್ಮರಾಗಿದ್ದರು. ಅದರ ನಂತರ, ದಂಪತಿ ಐವಿಎಫ್ ಚಿಕಿತ್ಸೆಯ ಭರವಸೆಯೊಂದಿಗೆ ನಮ್ಮ ಆಸ್ಪತ್ರೆಗೆ ಬಂದಿದ್ದಳು. ಆಕೆ ಒಂದು ಮಗುವನ್ನು ಬಯಸಿದ್ದಳು. ಆದರೆ ಜನವರಿ 26 ರಂದು, ಭಾರತ ಮಾತೆ ಮತ್ತು ಬಿಲೇಶ್ವರ ಬಾಬಾ ಅವರ ಕೃಪೆಯಿಂದ, ಇಬ್ಬರು ಮಕ್ಕಳು ಜನಿಸಿದ್ದಾರೆ. ಇಬ್ಬರೂ ಮಕ್ಕಳು ಎರಡೂವರೆ ಕಿಲೋ ತೂಕ ಹೊಂದಿದ್ದಾರೆ ಮತ್ತು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಭಾರತ ಮಾತೆ ಅವರಿಗೆ ಒಬ್ಬ ಮಗನ ಬದಲಿಗೆ ಇಬ್ಬರು ಗಂಡು ಮಕ್ಕಳನ್ನು ನೀಡಿದ್ದಾರೆ” ಎಂದು ಹೇಳಿದ್ದಾರೆ.