Abhijeet Bhattacharya: ಗಾಂಧೀಜಿ ಪಾಕಿಸ್ತಾನದ ರಾಷ್ಟ್ರಪಿತ ಎಂದಿದ್ದ ಗಾಯಕ ಅಭಿಜಿತ್ ಭಟ್ಟಾಚಾರ್ಯಗೆ ನೋಟಿಸ್
Abhijeet Bhattacharya: ಮಹಾತ್ಮ ಗಾಂಧಿ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಗಾಯಕ ಅಭಿಜಿತ್ ಭಟ್ಠಾಚಾರ್ಯ ವಿರುದ್ದ ನೋಟಿಸ್ ಜಾರಿಗೊಳಿಸಲಾಗಿದೆ.
-
Deekshith Nair
Jan 5, 2025 11:54 AM
ಮುಂಬೈ: ಮಹಾತ್ಮ ಗಾಂಧಿಯನ್ನು(Mahathma Gandhi) ಪಾಕಿಸ್ತಾನದ ರಾಷ್ಟ್ರಪಿತ ( Father Of Pakistan) ಎಂದು ಕರೆಯುವ ಮೂಲಕ ವಿವಾದಕ್ಕೆ ಸಿಲುಕಿಕೊಂಡಿದ್ದ ಗಾಯಕ ಅಭಿಜಿತ್ ಭಟ್ಟಾಚಾರ್ಯ(Abhijeet Bhattacharya) ಅವರಿಗೆ ವಕೀಲರೊಬ್ಬರು ಲೀಗಲ್ ನೋಟಿಸ್(Leagal Notice) ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Singer Abhijeet Bhattacharya has sparked controversy with his comments on #MahatmaGandhi. On a podcast, Bhattacharya claimed R.D. Burman was greater than Gandhi in the music world and controversially stated that Gandhi was the "father of the nation" for Pakistan, not India. His… pic.twitter.com/EXGCeukOpM— Mid Day (@mid_day) January 5, 2025
ಲೀಗಲ್ ನೋಟಿಸ್ನಲ್ಲಿ, ತಮ್ಮ ಕಕ್ಷಿದಾರ ಮನೀಶ್ ದೇಶಪಾಂಡೆ ಪರವಾಗಿ ಪುಣೆ ಮೂಲದ ವಕೀಲ ಅಸಿಮ್ ಸೋರ್ಡೆ ಅವರು ಭಟ್ಟಾಚಾರ್ಯ ಅವರು ಕ್ಷಮೆಯಾಚಿಸಬೇಕೆಂದು ಹೇಳಿದ್ದಾರೆ. ಅವರು ಕ್ಷಮೆಯಾಚಿಸದಿದ್ದರೆ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದಿದ್ದಾರೆ. ಕಳೆದ ತಿಂಗಳು ಗಾಯಕ ಅಭಿಜಿತ್ ಭಟ್ಟಾಚಾರ್ಯ ಅವರು "ಸಂಗೀತ ಸಂಯೋಜಕ ಆರ್ಡಿ ಬರ್ಮನ್ ಮಹಾತ್ಮ ಗಾಂಧಿಗಿಂತ ದೊಡ್ಡವರು. ಗಾಂಧಿ ಪಾಕಿಸ್ತಾನಕ್ಕೆ 'ರಾಷ್ಟ್ರಪಿತ' ಭಾರತಕ್ಕಲ್ಲ ಎಂದು ಹೇಳಿ ವಿವಾದವನ್ನು ಹುಟ್ಟುಹಾಕಿದ್ದರು.
"ಮಹಾತ್ಮ ಗಾಂಧಿ ಅವರು ಪಾಕಿಸ್ತಾನ ರಾಷ್ಟ್ರಕ್ಕೆ ಪಿತಾಮಹರಾಗಿದ್ದರು, ಭಾರತ ದೇಶಕ್ಕೆ ಅಲ್ಲ. ಭಾರತ ಸಾವಿರಾರು ವರ್ಷಗಳಿಂದಲೂ ಅಸ್ತಿತ್ವದಲ್ಲಿದೆ. ಆದರೆ ಪಾಕಿಸ್ತಾನ ಭಾರತದಿಂದ ಸೃಷ್ಟಿಯಾಯಿತು. ಗಾಂಧಿಯನ್ನು ಭಾರತಕ್ಕೆ ರಾಷ್ಟ್ರಪಿತ ಎಂದು ತಪ್ಪಾಗಿ ಕರೆಯಲಾಗಿದೆ. ಹಾಗೆ ನೋಡಿದರೆ ಪಾಕಿಸ್ತಾನದ ಹುಟ್ಟು ಮತ್ತು ಅಸ್ತಿತ್ವಕ್ಕೆ ಮಹಾತ್ಮ ಗಾಂಧಿ ಕಾರಣ. ಹಾಗಾಗಿ ಅವರು ಫಾದರ್ ಆಫ್ ದಿ ಪಾಕಿಸ್ತಾನ" ಎನ್ನುವ ಮೂಲಕ ಅಭಿಜಿತ್ ಭಟ್ಟಾಚಾರ್ಯ ವಿವಾದದ ಕಿಡಿ ಹೊತ್ತಿಸಿದರು.
ಇದೀಗ ವಕೀಲ ಅಸಿಮ್ ಸೋರ್ಡೆ ಅವರು ಅಭಿಜಿತ್ ಅವರ ವಿರುದ್ಧ ನೋಟಿಸ್ ಜಾರಿ ಮಾಡಿದ್ದು, "ಭಾರತವು ಮಹಾತ್ಮ ಗಾಂಧಿಗೆ ಸೇರಿದ ರಾಷ್ಟ್ರ ಎಂಬುದು ಇಡೀ ಪ್ರಪಂಚಕ್ಕೆ ಗೊತ್ತಿದೆ. ಭಟ್ಟಾಚಾರ್ಯರ ಹೇಳಿಕೆಗಳು ಮಹಾತ್ಮ ಗಾಂಧಿಯವರ ಪ್ರತಿಷ್ಠೆಗೆ ಧಕ್ಕೆ ತಂದಿದ್ದು, ಅಂತಹ ದೊಡ್ಡ ವ್ಯಕ್ತಿಗೆ ಅವಮಾನ ಮಾಡಲಾಗಿದೆ" ಎಂದು ಹೇಳಿದ್ದಾರೆ. ಭಾರತ ಮೊದಲಿನಿಂದಲೂ ಅಸ್ತಿತ್ವದಲ್ಲಿದೆ ಮತ್ತು ಪಾಕಿಸ್ತಾನವನ್ನು ತಪ್ಪಾಗಿ ರಚಿಸಲಾಗಿದೆ ಎಂಬಂಥ ಮೂರ್ಖ ಹೇಳಿಕೆಯನ್ನು ನೀಡಿದ್ದೀರಿ. ಈ ಹೇಳಿಕೆಯು ಮಹಾತ್ಮ ಗಾಂಧೀಜಿಯವರ ಮೇಲಿನ ನಿಮ್ಮ ದ್ವೇಷವನ್ನು ತೋರಿಸುತ್ತದೆ," ಎಂದು ಸೋರ್ಡೆ ಅವರು ತಮ್ಮ ನೋಟಿಸ್ನಲ್ಲಿ ತಿಳಿಸಿದ್ದಾರೆ.
ಭಟ್ಟಾಚಾರ್ಯ ಅವರು ಕ್ಷಮೆಯಾಚಿಸದಿದ್ದರೆ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 353 ಮತ್ತು ಸೆಕ್ಷನ್ 356 (ಮಾನನಷ್ಟ) ಅಡಿಯಲ್ಲಿ ದೂರು ದಾಖಲಿಸಲಾಗುವುದು ಎಂದು ಕಾನೂನು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ ಎಂಬ ಮಾಹಿತಿಯಿದೆ.
ಈ ಸುದ್ದಿಯನ್ನೂ ಓದಿ:Kumbamela: ಕುಂಭಮೇಳದಲ್ಲಿ ಬಾಂಬ್ ಸ್ಫೋಟಿಸಿ 1000 ಜನರನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ ಯುವಕ ಅರೆಸ್ಟ್.!