Aishwarya Shindogi: ಮದುವೆಯಾಗೊ ಹುಡುಗನ ಬಗ್ಗೆ ಮಾತನಾಡಿದ ಐಶ್ವರ್ಯಾ ಸಿಂಧೋಗಿ
ಬಿಗ್ ಬಾಸ್ ಮನೆಯಿಂದ ಬಂದಾಗಿನಿಂದ ಐಶ್ವರ್ಯ ಅವರು ಸಾಕಷ್ಟು ಸಂದರ್ಶನಗಳನ್ನು ನೀಡಿದ್ದರು. ಆದರೆ, ಮದುವೆ ವಿಚಾರ ಬಂದಾಗ ಸೈಲೆಂಟ್ ಆಗುತ್ತಿದ್ದರು. ಇದರಲ್ಲಿ ಶಿಶಿರ್ ಶಾಸ್ತ್ರೀ ಹೆಸರು ಕೂಡ ಕೇಳಿಬಂದಿತ್ತು. ಇದೀಗ ಮತ್ತೆ ಐಶ್ವರ್ಯಾ ಮದುವೆ ಬಗ್ಗೆ ಪ್ರಶ್ನೆಗಳು ಕೇಳಿ ಬರುತ್ತಿವೆ. ಇದಕ್ಕೆ ಮೊದಲ ಬಾರಿಗೆ ಉತ್ತರಿಸಿದ್ದಾರೆ.
![ಮದುವೆಯಾಗೊ ಹುಡುಗನ ಬಗ್ಗೆ ಮಾತನಾಡಿದ ಐಶ್ವರ್ಯಾ ಸಿಂಧೋಗಿ](https://cdn-vishwavani-prod.hindverse.com/media/original_images/Aishwarya_Shondogi.jpg)
Aishwarya Shondogi
![Profile](https://vishwavani.news/static/img/user.png)
ಬಿಗ್ ಬಾಸ್ ಕನ್ನಡ ಸೀಸನ್ 11 ಕ್ಕೆ (Bigg Boss Kannada 11) ಬರುವ ಮುನ್ನ ಬೆಳ್ಳಿ ತೆರೆ ಮತ್ತು ಕಿರುತೆರೆಯಲ್ಲಿ ಸಣ್ಣ-ಪುಟ್ಟ ಪಾತ್ರದ ಮೂಲಕ ಗುರುತಿಸಿಕೊಂಡ ಐಶ್ವರ್ಯಾ ಸಿಂಧೋಗಿ ಇದೀಗ ದೊಡ್ಮನೆಯಿಂದ ಹೊರಬಂದ ಬಳಿಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈಗ ದೊಡ್ಡ ದೊಡ್ಡ ಆಫರ್ಗಳು ಇವರಿಗೆ ಬರುತ್ತಿದೆ. ಸೀಸನ್ 11 ರಲ್ಲಿ ಬಿಗ್ ಬಾಸ್ ಮನೆಗೆ ಬಂದ ಗರ್ಲ್ಸ್ ಬ್ಯೂಟಿಯಲ್ಲಿ ಇವರ ಮೇಲೆ ಎಲ್ಲರ ಕಣ್ಣಿತ್ತು. 90 ದಿನಗಳ ಕಾಲ ದೊಡ್ಮನೆಯಲ್ಲಿದ್ದ ಇವರು ಹೊರಬಂದ ಬಳಿಕ ಮದುವೆ ಯಾವಾಗ ಎಂದು ಎಲ್ಲರೂ ಕೇಳಲು ಪ್ರಾರಂಭಿಸಿದರು. ಇದೀಗ ಈ ಕುರಿತು ಸ್ವತಃ ಐಶ್ವರ್ಯಾ ಅವರೇ ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಯಿಂದ ಬಂದಾಗಿನಿಂದ ಐಶ್ವರ್ಯ ಅವರು ಸಾಕಷ್ಟು ಸಂದರ್ಶನಗಳನ್ನು ನೀಡಿದ್ದರು. ಆದರೆ, ಮದುವೆ ವಿಚಾರ ಬಂದಾಗ ಸೈಲೆಂಟ್ ಆಗುತ್ತಿದ್ದರು. ಇದರಲ್ಲಿ ಶಿಶಿರ್ ಶಾಸ್ತ್ರೀ ಹೆಸರು ಕೂಡ ಕೇಳಿಬಂದಿತ್ತು. ಇದೀಗ ಮತ್ತೆ ಐಶ್ವರ್ಯಾ ಮದುವೆ ಬಗ್ಗೆ ಪ್ರಶ್ನೆಗಳು ಕೇಳಿ ಬರುತ್ತಿವೆ. ಇದಕ್ಕೆ ಮೊದಲ ಬಾರಿಗೆ ಉತ್ತರಿಸಿರುವ ಸಿಂಧೋಗಿ ಅವರು ಸದ್ಯಕ್ಕಂತೂ ಮದುವೆಯಾಗುವ ಯೋಚನೆ ಇಲ್ಲ ಎಂದು ಹೇಳಿ ಶಾಕ್ ಕೊಟ್ಟಿದ್ದಾರೆ. ಆದರೆ, ಒಳ್ಳೆಯ ಗುಣಗಳಿರುವ ಹುಡುಗ ಹಾಗೂ ತನ್ನನ್ನು ಕಾಳಜಿ ಮಾಡುವವ ಸಿಗಬೇಕು. ಅಲ್ಲದೇ, ಗೌರವ ಕೊಡುವವನಾಗಿರಬೇಕು. ಅಂತಹ ಹುಡುಗ ಸಿಕ್ಕರೆ ಮದುವೆಯಾಗುವೆ ಎಂದು ಹೇಳಿದ್ದಾರೆ.
ಬಿಗ್ ಬಾಸ್ ಸೀಸನ್ 11ರಲ್ಲಿ ಭಾಗವಹಿಸಿದ್ದ ಐಶ್ವರ್ಯ ಸಿಂಧೋಗಿ ಅವರು ಕರುನಾಡಿನ ಜನರ ಮನ ಗೆದ್ದಿದ್ದಾರೆ. ಐಶ್ವರ್ಯಾ 90 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದರು. ಇವರು ಎಲಿಮಿನೇಟ್ ಆಗಿ ಹೋಗುವ ಸಂದರ್ಭ ಬಿಗ್ ಬಾಸ್ ಮೊದಲ ಬಾರಿಗೆ ಭಾವನಾತ್ಮಕ ವಿದಾಯವನ್ನು ಹೇಳಿದ್ದರು. ತಂದೆ ತಾಯಿ ಇಲ್ಲದ ಐಶ್ವರ್ಯ ಶಿಂಧೋಗಿ ಅವರಿಗೆ ತವರು ಮನೆ ಆಗಿದ್ದು ಬಿಗ್ ಬಾಸ್ ಸೀಸನ್ 11. ಇದುವರೆಗೂ ಯಾರಿಗೂ ಮಗಳೆ ಎಂದು ಬಿಗ್ ಬಾಸ್ ಕರೆದಿರಲಿಲ್ಲ. ಆದರೆ, ಐಶ್ವರ್ಯಾ ಅವರಿಗೆ ಹೇಳಿದ್ದರು. ಫ್ಯಾಮಿಲಿಯಿಂದ ಪತ್ರ ಬರದೆ ಇದ್ದಾಗ, ಮನೆ ನೆನಪು ಆದಾಗ ಹಾಗೂ ಎಲಿಮಿನೇಟ್ ಆಗಿ ಹೊರ ಬರುವ ದಿನ ಬಿಗ್ ಬಾಸ್ ನಿಜಕ್ಕೂ ತಂದೆಯ ಸ್ಥಾನದಲ್ಲಿ ನಿಂತು ಮಾತನಾಡಿದ್ದು ವೀಕ್ಷಕರ ಮನಸ್ಸು ಮುಟ್ಟಿತ್ತು.
Gauthami Jadav, BBK 11: ಮಂಜುವನ್ನು ಕರೆದುಕೊಂಡು ಶಕ್ತಿ ದೇವತೆ ಬಳಿ ತೆರಳಿದ ಗೌತಮಿ: ಫೋಟೋ ವೈರಲ್