ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Aman Jaiswal: ಆಡಿಷನ್‌ಗೆ ತೆರಳುವಾಗ ಭೀಕರ ಅಪಘಾತ- ಖ್ಯಾತ ಸೀರಿಯಲ್‌ ನಟ ಬಲಿ

ಮುಂಬೈನ ಜೋಗೇಶ್ವರಿ ರಸ್ತೆಯಲ್ಲಿ ಟ್ರಕ್‌ವೊಂದಕ್ಕೆ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಜೈಸ್ವಾಲ್ ಅವರನ್ನು ತಕ್ಷಣ ಆಸ್ಪತ್ರೆಗೆ ತಕ್ಷಣ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ಅಂಬೋಲಿ ಠಾಣೆಯ ಅಧಿಕಾರಿ ಹೇಳಿದ್ದಾರೆ.

ಆಡಿಷನ್‌ಗೆ ತೆರಳುತ್ತಿದ್ದ ಖ್ಯಾತ ಸೀರಿಯಲ್‌ ನಟ ಅಪಘಾತದಲ್ಲಿ ಬಲಿ

Actor Aman Jaiswall

Profile Pushpa Kumari Jan 18, 2025 10:45 AM

ಮುಂಬೈ,ಜನವರಿ 18, 2025: ಧರ್ತಿಪುತ್ರ ನಂದಿನಿ ಟಿವಿ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟಿವಿ ನಟ ಅಮನ್ ಜೈಸ್ವಾಲ್ (23)(Aman Jaiswal) ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಮುಂಬೈನ ಜೋಗೇಶ್ವರಿ ರಸ್ತೆಯಲ್ಲಿ ಟ್ರಕ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಜೈಸ್ವಾಲ್ ಅವರನ್ನು ತಕ್ಷಣ ಆಸ್ಪತ್ರೆಗೆ ತಕ್ಷಣ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ಅಂಬೋಲಿ ಠಾಣೆಯ ಅಧಿಕಾರಿಗಳು ಹೇಳಿದ್ದಾರೆ

ಸೀರಿಯಲ್‌ ಆಡಿಷನ್‌ಗೆ ಜೈಸ್ವಾಲ್ ತನ್ನ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಟ್ರಕ್ ಗುದ್ದಿದ ರಭಸಕ್ಕೆ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಕೂಡಲೇ ಹತ್ತಿರದ ಕಾಮಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ. ಟ್ರಕ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Viral News: ಆರ್ಡರ್ ಮಾಡಿದ್ದು ಬೆಲ್ಲದ ಚಹಾ – ಬಂದಿದ್ದು ಬೆಲ್ಲವಿಲ್ಲದ ಚಹಾ ; ಝೊಮ್ಯಾಟೊ ಕಸ್ಟಮರ್ ಸಪೋರ್ಟ್ ಹೀಗಿತ್ತು..!

ಉತ್ತರ ಪ್ರದೇಶದ ಬಾಲಿಯಾದ ಅಮನ್ಅಮನ್ ಮಾಡೆಲಿಂಗ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಧರ್ತಿಪುತ್ರ ನಂದಿನಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಇವರು ಈ ಪಾತ್ರದಲ್ಲಿ ಹೆಚ್ಚು ಮೆಚ್ಚುಗೆ ಗಳಿಸಿದ್ದರು. ಸೋನಿ ಟಿವಿ ಶೋ ಪುಣ್ಯಶ್ಲೋಕ್ ಅಹಲ್ಯಾಬಾಯಿಯಲ್ಲಿ ಯಶವಂತ್ ರಾವ್ ಫಾನ್ಸೆ ಪಾತ್ರವನ್ನು ಕೂಡ ನಿರ್ವಹಿಸಿದ್ದರು. ರವಿ ದುಬೆ ಮತ್ತು ಸರ್ಗುನ್ ಮೆಹ್ತಾ ನಿರ್ಮಿಸಿದ ಜನಪ್ರಿಯ ಶೋ ಉದಯರಿಯಾನ್ ಅಲ್ಲಿಯೂ ಕಾಣಿಸಿಕೊಂಡರು.