Tumkur (Chikkanayakanahalli) News: ಮೊದಲೇ ಗುರುತಿಸಿದ್ದ ಸ್ಥಳದಲ್ಲಿ ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು
ಹಲವು ವರ್ಷಗಳ ಹೋರಾಟದ ಫಲವಾಗಿ ಡಾ. ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೆ 3 ಕೋಟಿ ಹಣ ಬಿಡುಗಡೆಯಾಗಿತ್ತು. ನಿವೇಶನದ ಸಮಸ್ಯೆಯಿಂದ ಭವನ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ತಾಲ್ಲೂಕು ಕಚೇರಿಯಲ್ಲಿ ನಡೆದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆ ಯಲ್ಲಿ ನಾವುಗಳು ಈ ವಿಷಯ ಚರ್ಚಿಸಿದ ಪರಿಣಾಮ ಹಳೆಯ ತಾಲ್ಲೂಕು ಕಚೇರಿ ಪಕ್ಕದಲ್ಲಿ ಜಾಗ ವನ್ನು ಮಂಜೂರು ಮಾಡಿಸಿಕೊಡುತ್ತೇವೆಂದು ಶಾಸಕ ಸಿ.ಬಿ.ಸುರೇಶಬಾಬು ಸಭೆಯಲ್ಲಿ ತಿಳಿಸಿದ್ದರು


ಚಿಕ್ಕನಾಯಕನಹಳ್ಳಿ : ನಗರದಲ್ಲಿ ಡಾ. ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೆ ಕಾಯ್ದಿರಿ ಸಿದ ಜಾಗವನ್ನು ಶಾಸಕರು ಮತ್ತು ಅಧಿಕಾರಿಗಳು ಸೇರಿಕೊಂಡು ಏಕಾಏಕಿ ಬದಲಾವಣೆ ಮಾಡಿ ದ್ದಾರೆ ಎಂದು ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ ಆರೋಪಿಸಿ ಮತ್ತು ಅದೇ ಸ್ಥಳದಲ್ಲಿ ಭವನ ನಿರ್ಮಿಸುವಂತೆ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಚಿಕ್ಕನಾಯಕನಹಳ್ಳಿ ಶಾಸಕರಿಗೆ ಪರಿಶಿಷ್ಟರ ಬಗ್ಗೆ ಮಾನವೀಯತೆ, ಕಾಳಜಿ ಇದ್ದಲ್ಲಿ ಮೊದಲೇ ಗುರುತಿಸಿದ್ದ ಸ್ಥಳದಲ್ಲಿ ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಸಂಘಟನೆ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: Swallowing Live Chick: ಅಯ್ಯೋ! ಹೀಗೂ ಉಂಟಾ?; ಕೋಳಿ ಮರಿ ನುಂಗಿ ಪ್ರಾಣ ಕಳೆದುಕೊಂಡ ವ್ಯಕ್ತಿ; ಕೋಳಿ ಇನ್ನೂ ಜೀವಂತ!
ಹಲವು ವರ್ಷಗಳ ಹೋರಾಟದ ಫಲವಾಗಿ ಡಾ. ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೆ 3 ಕೋಟಿ ಹಣ ಬಿಡುಗಡೆಯಾಗಿತ್ತು. ನಿವೇಶನದ ಸಮಸ್ಯೆಯಿಂದ ಭವನ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ತಾಲ್ಲೂಕು ಕಚೇರಿಯಲ್ಲಿ ನಡೆದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆಯಲ್ಲಿ ನಾವುಗಳು ಈ ವಿಷಯ ಚರ್ಚಿಸಿದ ಪರಿಣಾಮ ಹಳೆಯ ತಾಲ್ಲೂಕು ಕಚೇರಿ ಪಕ್ಕದಲ್ಲಿ ಜಾಗವನ್ನು ಮಂಜೂರು ಮಾಡಿಸಿಕೊಡುತ್ತೇವೆಂದು ಶಾಸಕ ಸಿ.ಬಿ.ಸುರೇಶಬಾಬು ಸಭೆಯಲ್ಲಿ ತಿಳಿಸಿದ್ದರು. ಆದರೆ ಪರಿಶಿಷ್ಟ ಜಾತಿ ಮುಖಂಡರ ಗಮನಕ್ಕೆ ಬಾರದಂತೆ ನಿರ್ಮಾಣದ ಸ್ಥಳವನ್ನು ರದ್ದುಗೊಳಿಸಲಾಗಿದೆ ಎಂದು ಆರೋಪಿಸಿದರು. ಸಭೆಯ ತೀರ್ಮಾನದ ಪತ್ರವನ್ನು ಹಿಂದಿನಂತೆ ಮರುದಾಖಲೆ ಮಾಡದಿದ್ದಲ್ಲಿ ಅಧಿಕಾರಿಗಳ ವಿರುದ್ದ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು.
ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ವಿರೋಧ
ಮಾತಂಗ ಪರಿವಾರದ ಸಾಲಕಟ್ಟೆ ಗುರುಮೂರ್ತಿ ಮಾತನಾಡಿ ಸಿಡಿಪಿಓ ಕಚೇರಿ ಬಳಿ ನಿರ್ಮಿಸಲು ಉದ್ದೇಶಿಸಿರುವ ಬಾಬು ಜಗಜೀವರಾಂ ಭವನ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರು. ಏ. 14 ಸೋಮವಾರ ಬೆಳಗ್ಗೆ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಶಾಸಕರಿಗೆ ನಮ್ಮ ಬಗ್ಗೆ ಕಾಳಜಿ ಇದ್ದಲ್ಲಿ ಭವನ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮ ರದ್ದುಪಡಿಸಬೇಕು ಎಂದು ಮನವಿ ಮಾಡಿದರು. ಅಗಸರಹಳ್ಳಿ ನರಸಿಂಹಮೂರ್ತಿ, ಯರೇಕಟ್ಟೆ ರಮೇಶ್, ಮುರುಳಿ, ಮಂಜುನಾಥ್, ಶ್ರೀನಿವಾಸ್, ಹೊನ್ನೆಬಾಗಿ ರಾಮಯ್ಯ, ರಾಮನಹಳ್ಳಿ ಶಾರದಮ್ಮ ಹಾಗು ಇತರರು ಸುದ್ದಿಗೋಷ್ಠಿಯಲ್ಲಿದ್ದರು.