ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Balochistan Blast: ಪಾಕ್‌ ಸೇನೆಗೇ ಬಾಂಬ್‌ ಇಟ್ಟ ಬಲೂಚಿಸ್ತಾನ ಹೋರಾಟಗಾರರು, 8 ಪಾಕ್‌ ಸೈನಿಕರ ಸಾವು

Balochistan Blast: ಈ ಬಾಂಬ್‌ ಸ್ಫೋಟವು‌ ಪಾಕ್ ಸೇನಾ ವಾಹನವನ್ನು ಧ್ವಂಸಗೊಳಿಸಿತು. ಹಲವಾರು ಸಿಬ್ಬಂದಿಯನ್ನು ಕೊಂದಿತು. ಪಾಕಿಸ್ತಾನ ಸಶಸ್ತ್ರ ಪಡೆಗಳ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗ, ಐಎಸ್‌ಪಿಆರ್, ದಾಳಿಯಲ್ಲಿ ಭಾರತ ಭಾಗಿಯಾಗಿದೆ ಎಂದು ಆರೋಪಿಸಿದೆ.

ಬಲೂಚಿಸ್ತಾನ ಹೋರಾಟಗಾರರಿಂದ ಪಾಕ್‌ ಸೇನೆಗೇ ಬಾಂಬ್‌, 8 ಪಾಕ್‌ ಸೈನಿಕರ ಸಾವು

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ May 8, 2025 7:40 AM

ನವದೆಹಲಿ: ಬಲೂಚಿಸ್ತಾನದ ಮಾಚ್ ಕಚ್ಚಿ ಜಿಲ್ಲೆಯಲ್ಲಿ ಪಾಕಿಸ್ತಾನ ಸೇನಾ (Pakistan army) ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ಬಲೂಚ್ ಲಿಬರೇಷನ್ ಆರ್ಮಿ (ಬಿಎಲ್‌ಎ) ಹೋರಾಟಗಾರರು ನಡೆಸಿದ ಐಇಡಿ ಸ್ಫೋಟದಲ್ಲಿ (Balochistan Blast) ವಿಶೇಷ ಕಾರ್ಯಾಚರಣೆ ಕಮಾಂಡರ್ ಸೇರಿದಂತೆ ಕನಿಷ್ಠ ಎಂಟು ಪಾಕ್‌ ಸೈನಿಕರು ಸಾವನ್ನಪ್ಪಿದ್ದಾರೆ. ಆರು ಮಂದಿ ಗಾಯಗೊಂಡಿದ್ದಾರೆ. ಬಿಎಲ್‌ಎ, ತನ್ನ ಸ್ವಾತಂತ್ರ್ಯ ಹೋರಾಟಗಾರರು ರಿಮೋಟ್-ನಿಯಂತ್ರಿತ ಸಾಧನವನ್ನು ಬಳಸಿಕೊಂಡು ಸೇನಾ ಬೆಂಗಾವಲು ಪಡೆಯನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ ಎಂದು ಹೇಳಿದೆ.

ಈ ಬಾಂಬ್‌ ಸ್ಫೋಟವು ಸೇನಾ ವಾಹನವನ್ನು ಧ್ವಂಸಗೊಳಿಸಿತು. ಹಲವಾರು ಸಿಬ್ಬಂದಿಯನ್ನು ಕೊಂದಿತು. ಪಾಕಿಸ್ತಾನ ಸಶಸ್ತ್ರ ಪಡೆಗಳ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗ, ಐಎಸ್‌ಪಿಆರ್, ದಾಳಿಯಲ್ಲಿ ಭಾರತ ಭಾಗಿಯಾಗಿದೆ ಎಂದು ಆರೋಪಿಸಿದೆ. ಇಂತಹ ಘಟನೆಗಳು ನಡೆದಾಗ ಅದು ಸದಾ ಭಾರತವನ್ನು ದೂಷಿಸುತ್ತದೆ. “ಭಾರತೀಯ ಪ್ರಾಕ್ಸಿ, ಬಲೂಚ್ ಲಿಬರೇಷನ್ ಆರ್ಮಿ ಎಂದು ಕರೆಯಲ್ಪಡುವ ಭಯೋತ್ಪಾದಕರು, ಮಾಚ್-ಕಚ್ಚಿ ಜಿಲ್ಲೆಯ ಪ್ರದೇಶದಲ್ಲಿ ಭದ್ರತಾ ಪಡೆಗಳ ವಾಹನಗಳನ್ನು ಸುಧಾರಿತ ಸ್ಫೋಟಕ ಸಾಧನದೊಂದಿಗೆ ಸ್ಫೋಟಿಸಿದರು. ಪರಿಣಾಮವಾಗಿ ಏಳು ಸಿಬ್ಬಂದಿ ಹುತಾತ್ಮರಾದರು" ಎಂದು ಐಎಸ್‌ಪಿಆರ್ ಹೇಳಿದೆ.

ಸ್ಥಳೀಯ ಅಧಿಕಾರಿಗಳು ಬಿಡುಗಡೆ ಮಾಡಿದ ಮೃತರ ಪಟ್ಟಿಯ ಪ್ರಕಾರ ದಾಳಿಯಲ್ಲಿ ಎಂಟು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಸ್ಥಳೀಯ ಅಧಿಕಾರಿಗಳ ಪ್ರಕಾರ, ಗೆಸ್ಟ್ರಿ ಪ್ರದೇಶದ ಅಮೀರ್ ಪೋಸ್ಟ್ ಮತ್ತು ಅಲಿ ಖಾನ್ ನೆಲೆಯ ನಡುವೆ ಸೇನಾ ವಾಹನದ ಮೇಲೆ ದಾಳಿ ನಡೆದಿದೆ. ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸೇನೆಯ ವಿರುದ್ಧದ ಸರಣಿ ದಾಳಿಗಳಲ್ಲಿ ಈ ದಾಳಿ ಇತ್ತೀಚಿನದು. ಇದು ಈ ಪ್ರದೇಶದಲ್ಲಿ ನಡೆಯುತ್ತಿರುವ ಕ್ಷೋಭೆಯನ್ನು ಮತ್ತಷ್ಟು ಬಹಿರಂಗಪಡಿಸಿದೆ.

ಮೂರು ದಿನಗಳ ಹಿಂದೆ, ಬಿಎಲ್‌ಎ ಪ್ರಮುಖ ಹೆದ್ದಾರಿಯನ್ನು ತಡೆದು ಜೈಲು ವ್ಯಾನ್‌ ಮೇಲೆ ದಾಳಿ ಮಾಡಿತು. ಕೈದಿಗಳನ್ನು ಬಿಡುಗಡೆ ಮಾಡಿ, ಐದು ಪೊಲೀಸರನ್ನು ಒತ್ತೆಯಾಳಾಗಿ ಇರಿಸಿಕೊಂಡಿತ್ತು.

ರಕ್ಷಣಾ ವೆಚ್ಚ ಹೆಚ್ಚಳ

ಭಾರತದೊಂದಿಗಿನ ಉದ್ವಿಗ್ನತೆಯಿಂದಾಗಿ ಪಾಕಿಸ್ತಾನದ ಸಮ್ಮಿಶ್ರ ಸರ್ಕಾರವು ಮುಂದಿನ ಬಜೆಟ್‌ನಲ್ಲಿ ರಕ್ಷಣಾ ವೆಚ್ಚದಲ್ಲಿ ಶೇ.18 ರಷ್ಟು ಹೆಚ್ಚಳ ಮಾಡಿದ್ದು, ₹2.5 ಟ್ರಿಲಿಯನ್‌ಗೆ ಹೆಚ್ಚಿಸಲು ಅನುಮೋದಿಸಿದೆ ಎಂದು ಮಂಗಳವಾರ ಮಾಧ್ಯಮ ವರದಿಯೊಂದು ತಿಳಿಸಿದೆ. ಜುಲೈ 1 ರಿಂದ ಹೊಸ ಹಣಕಾಸು ವರ್ಷ ಪ್ರಾರಂಭವಾಗುವ ಮುನ್ನ ಸರ್ಕಾರವು ಮುಂದಿನ ತಿಂಗಳ ಮೊದಲ ವಾರದಲ್ಲಿ 2025-26 ರ ಬಜೆಟ್ ಅನ್ನು ಅನಾವರಣಗೊಳಿಸಲಿದೆ.

ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಮುಖ್ಯಸ್ಥ ಬಿಲಾವಲ್ ಭುಟ್ಟೋ ಜರ್ದಾರಿ ನೇತೃತ್ವದ ಪಿಪಿಪಿ ತಂಡವು ಸೋಮವಾರ ಬಜೆಟ್ ಕುರಿತು ಚರ್ಚಿಸಲು ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಅವರ ಆರ್ಥಿಕ ತಂಡವನ್ನು ಭೇಟಿ ಮಾಡಿದೆ. ಪಿಎಂಎಲ್-ಎನ್ ನೇತೃತ್ವದ ಸರ್ಕಾರ ಸುಮಾರು ₹17.5 ಟ್ರಿಲಿಯನ್ ಮೌಲ್ಯದ ಹೊಸ ಬಜೆಟ್ ಚೌಕಟ್ಟನ್ನು ಪಿಪಿಪಿಯೊಂದಿಗೆ ಹಂಚಿಕೊಂಡಿತು. ಇದು ರಕ್ಷಣಾ ವೆಚ್ಚದಲ್ಲಿ ಶೇ.18ರಷ್ಟು ಹೆಚ್ಚಳಕ್ಕೆ ಒಪ್ಪಿಕೊಂಡಿತು.

ಭಾರತದೊಂದಿಗಿನ ಇತ್ತೀಚಿನ ಉದ್ವಿಗ್ನತೆಯಿಂದಾಗಿ ರಕ್ಷಣಾ ಬಜೆಟ್ ಅನ್ನು ಹೆಚ್ಚಿಸಲು ಮಿತ್ರಪಕ್ಷಗಳ ನಡುವೆ ಒಮ್ಮತ ಮೂಡಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ, ಸರ್ಕಾರವು ರಕ್ಷಣೆಗಾಗಿ 2,122 ಶತಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ. ಸಾಲ ಪಾವತಿಯ ನಂತರ ರಕ್ಷಣಾ ವಲಯದ ವೆಚ್ಚಗಳು ವಾರ್ಷಿಕ ವೆಚ್ಚದ ಎರಡನೇ ಅತಿದೊಡ್ಡ ಅಂಶವಾಗಿದೆ.

ಇದನ್ನೂ ಓದಿ: Operation sindoor: ತನ್ನ ವಾಯುಪ್ರದೇಶ ಪೂರ್ತಿ ಮುಚ್ಚಿದ ಪಾಕ್‌, ಮರುದಾಳಿಗೆ ಸಿದ್ಧತೆ?