ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಈ ಬಾರಿಯೂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಂಸ್ಕರಿತ ನೀರು

ಈ ವರ್ಷವೂ ನಗರದ 80 ವಾರ್ಡ್‌ಗಳಲ್ಲಿ ಅಂತರ್ಜಲ ಕುಸಿಯುವ ಸಾಧ್ಯತೆ ಬಗ್ಗೆ ಐಐಎಸ್‌ಸಿ ವಿಜ್ಞಾನಿಗಳು ಮುನ್ಸೂಚನೆ ನೀಡಿದ್ದಾರೆ. ಹೀಗಾಗಿ ಜನರಲ್ಲಿ ಸಂಸ್ಕರಿಸಿದ ನೀರು ಬಳಕೆಯ ಜಾಗೃತ್ತಿ ಮೂಡಿಸಲು ಈ ಬಾರಿಯೂ ಸ್ಟೇಡಿಯಂಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಂಸ್ಕರಿಸಿದ ನೀರನ್ನು ಪೂರೈಸಲಿದ್ದೇವೆ ಎಂದು ಮನೋಹರ್ ತಿಳಿಸಿದರು.

ಈ ಬಾರಿಯೂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಂಸ್ಕರಿತ ನೀರು

Profile Abhilash BC Mar 11, 2025 3:55 PM

ಬೆಂಗಳೂರು: ಕಳೆದ ಬಾರಿಯ ಐಪಿಎಲ್‌(IPL) ಟೂರ್ನಿಯ ಪಂದ್ಯದಂತೆ ಈ ಬಾರಿಯೂ(IPL 2025) ಕೂಡ ಬೆಂಗಳೂರು ಚರಣದ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ(Chinnaswamy stadium) ಬೆಂಗಳೂರು ಜಲಮಂಡಳಿ ಸಂಸ್ಕರಿಸಿದ ನೀರನ್ನು ಪೂರೈಸಲಿದೆ. ಈ ಮೂಲಕ ನಗರದ ಜಲ ಸಂಪನ್ಮೂಲಗಳು ಕ್ಷೀಣಿಸುತ್ತಿರುವ ಬಗ್ಗೆ ಜನರಲ್ಲಿ ನೀರಿನ ಸಂರಕ್ಷಣೆ ಮತ್ತು ಮರುಬಳಕೆಯನ್ನು ಉತ್ತೇಜಿಸುವ ಪ್ರಯತ್ನವನ್ನು ಮಾಡಲು ಜಲಮಂಡಳಿ ನಿರ್ಧರಿಸಿದೆ ಎಂದು ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ ತಿಳಿಸಿದರು.

ಐಪಿಎಲ್‌ ಪಂದ್ಯ ನಡೆಯುವ ವೇಳೆ ಕ್ರೀಡಾಂಗಣಕ್ಕೆ ನಿತ್ಯ 75 ಸಾವಿರ ಲೀಟರ್ ನೀರು ಬೇಕಾಗುತ್ತದೆ. ಈ ಸಂಬಂಧ ಕೆಎಸ್‌ಸಿಎ ಕಬ್ಬನ್‌ ಪಾರ್ಕ್‌ನ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ನೀರು ಪೂರೈಸುವಂತೆ ಮನವಿ ಮಾಡಿತ್ತು. ಅದರಂತೆ ನೀರು ಪೂರೈಸಲಾಗುತ್ತಿದೆ ಎಂದು ಮನೋಹರ್ ತಿಳಿಸಿದರು. ಈ ಬಾರಿ ಬೆಂಗಳೂರಿನಲ್ಲಿ ಒಟ್ಟು 7 ಪಂದ್ಯಗಳು ನಿಗದಿಯಾಗಿದೆ.

ಇದನ್ನೂ ಓದಿ IPL 2025: ಐಪಿಎಲ್ ವೇಳೆ ತಂಬಾಕು, ಮದ್ಯದ ಜಾಹೀರಾತಿಗೆ ನಿರ್ಬಂಧ!

ಕಳೆದ ವರ್ಷ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರವಾಗಿತ್ತು. ಹೀಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಗದಿಯಾದ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎನ್ನುವ ಕೂಗು ಎದ್ದಿತ್ತು. ಆದರೆ ಮೈದಾನಕ್ಕೆ ಶುದ್ದ ನೀರಿ ಬಳಕೆ ಮಾಡುತ್ತಿಲ್ಲ ಬದಲಾಗಿ ಸಂಸ್ಕರಿಸಿದ ನೀರನ್ನು ಬಳಲಾಗುತ್ತದೆ ಎಂದು ಜಲಮಂಡಳಿ ಸ್ಪಷ್ಟನೆ ನೀಡಿತ್ತು.

ಈ ವರ್ಷವೂ ನಗರದ 80 ವಾರ್ಡ್‌ಗಳಲ್ಲಿ ಅಂತರ್ಜಲ ಕುಸಿಯುವ ಸಾಧ್ಯತೆ ಬಗ್ಗೆ ಐಐಎಸ್‌ಸಿ ವಿಜ್ಞಾನಿಗಳು ಮುನ್ಸೂಚನೆ ನೀಡಿದ್ದಾರೆ. ಹೀಗಾಗಿ ಜನರಲ್ಲಿ ಸಂಸ್ಕರಿಸಿದ ನೀರು ಬಳಕೆಯ ಜಾಗೃತ್ತಿ ಮೂಡಿಸಲು ಈ ಬಾರಿಯೂ ಸ್ಟೇಡಿಯಂಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಂಸ್ಕರಿಸಿದ ನೀರನ್ನು ಪೂರೈಸಲಿದ್ದೇವೆ ಎಂದು ಮನೋಹರ್ ತಿಳಿಸಿದರು.