T20 World Cup 2026: ಒಮನ್ ವಿರುದ್ಧ 105 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದ ಶ್ರೀಲಂಕಾ!
SL vs OMN Match Highlights: ದಸೂನ್ ಶಾನಕ, ಪವನ್ ರತ್ನನಾಯಕೆ ಹಾಗೂ ಕುಸಾಲ್ ಮೆಂಡಿಸ್ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ಶ್ರೀಲಂಕಾ ತಂಡ,ಒಮಾನ್ ವಿರುದ್ಧ 105 ರನ್‌ಗಳ ಗೆಲುವು ದಾಖಲಿಸಿತು. ಆ ಮೂಲಕ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಪಡೆದು ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ.
ಒಮಾನ್ ವಿರುದ್ಧ ಶ್ರೀಲಂಕಾ ತಂಡಕ್ಕೆ 105 ರನ್‌ಗಳ ಜಯ. -
ಪಲ್ಲೆಕೆಲೆ: ದಸೂನ್ ಶಾನಕ, ಪವನ್ ರತ್ನನಾಯಕೆ (Pavan Rathnayake) ಹಾಗೂ ಕುಸಾಲ್ ಮೆಂಡಿಸ್ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ಶ್ರೀಲಂಕಾ ತಂಡ, ಒಮಾನ್ ವಿರುದ್ಧದ ಪಂದ್ಯದಲ್ಲಿ (SL vs OMN) 105 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯಲ್ಲಿ ಸತತ ಎರಡು ಗೆಲುವು ಪಡೆದು ಟೂರ್ನಿಯ ಬಿ ಗುಂಪು ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿತು. ಇನ್ನು ಎದುರಾಳಿ ಒಮಾನ್ ತಂಡ ಸತತ ಎರಡು ಪಂದ್ಯಗಳ ಸೋಲಿನ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.
ಗುರುವಾರ ಇಲ್ಲಿನ ಪಲ್ಲೆಕ್ಕೆಲೆ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಶ್ರೀಲಂಕಾ ತಂಡ, ಕುಸಾಲ್ ಮೆಂಡಿಸ್ , ಪವನ್ ರತ್ನ ನಾಯಕೆ ಹಾಗೂ ದಸೂನ್ ಶಾನಕ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 225 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಒಮಾನ್ ತಂಡಕ್ಕೆ 226 ರನ್‌ಗಳ ಕಠಿಣ ಗುರಿಯನ್ನು ನೀಡಿತು.
ಅಂಪೈರ್ ಜತೆ ವಾಗ್ವಾದ; ಆಲ್‌ರೌಂಡರ್ ನಬಿಗೆ ಭಾರೀ ದಂಡ
ಬಳಿಕ ಗುರಿಯನ್ನು ಹಿಂಬಾಲಿಸಿದ ಒಮಾನ್ ತಂಡ, ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಮಧ್ಯಮ ಕ್ರಮಾಂಕದಲ್ಲಿ ಮೊಹಮ್ಮದ್ ನದೀಮ್ (53) ಹಾಗೂ ವಸೀಮ್ ಅಲಿ (27) ಅವರನ್ನು ಹೊರತುಪಡಿಸಿ ಇನ್ನುಳಿದವರು ವಿಫಲರಾದರು. ಇದರ ಪರಿಣಾಮ ಒಮಾನ್ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 9 ವಿಕೆಟ್‌ಗಳ ನಷ್ಟಕ್ಕೆ 120 ರನ್‌ಗಳಿಗೆ ಸೀಮಿತವಾಯತು. ಆ ಮೂಲಕ ದೊಡ್ಡ ಅಂತರದಲ್ಲಿ ಸೋಲು ಅನುಭವಿಸಿತು.
The Lions roar in Pallekele, beating Oman by 105 runs. The perfect start continues! 🦁🏏
— Sri Lanka Cricket 🇱🇰 (@OfficialSLC) February 12, 2026
✅ Win 1 ✅ Win 2 ⏳ Two more to go.#SriLankaCricket #SLvOMA #T20WorldCup pic.twitter.com/PcM6JJoC4B
ಮೆಂಡಿಸ್, ಶಾನಕ, ರತ್ನನಾಯಕೆ ಅರ್ಧಶತಕ
ಶ್ರೀಲಂಕಾ ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಕುಸಾಲ್ ಮೆಂಡಿಸ್, ದಸೂನ್ ಶಾನಕ ಹಾಗೂ ಪವನ್ ರತ್ನನಾಯಕೆ ಬ್ಯಾಟಿಂಗ್‌ನಲ್ಲಿ ಮಿಂಚಿದರು. ಮೊದಲಿಗೆ ಕುಸಾಲ್ ಮೆಂಡಿಸ್ ಅವರು 45 ಎಸೆತಗಳಲ್ಲಿ 7 ಬೌಂಡರಿಯೊಂದಿಗೆ 61 ರನ್‌ಗಳನ್ನು ಸಿಡಿಸಿದರು. ಅವರು ರನ್ ಔಟ್ ಆಗುವುದಕ್ಕೂ ಮುನ್ನ ಪವನ್ ರತ್ನ ನಾಯಕೆ ಅವರ ಜೊತೆ 94 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿದರು. ನಂತರ ದಸೂನ್ ಶಾನಕ ಅವರ ಜೊತೆಯೂ 63 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಆ ಮೂಲಕ ಶ್ರೀಲಂಕಾ ತಂಡದ ಮೊತ್ತವನ್ನು 200ರ ಗಡಿ ದಾಟಿಸಿ ರನ್‌ಔಟ್ ಆದರು.
A maiden T20I fifty for Pavan Rathnayake! 🦁🏏 A special knock from a special talent. Keep it going, Pavan! 🙌✨ #LionsRoar #SLC #PavanRathnayake #SLvOMA pic.twitter.com/M8XhvohMjX
— Sri Lanka Cricket 🇱🇰 (@OfficialSLC) February 12, 2026
ಒಂದು ತುದಿಯಲ್ಲಿ ಕುಸಾಲ್‌ಗೆ ದೀರ್ಘಾವಧಿ ಸಾಥ್ ನೀಡಿದ್ದ ಪವನ ರತ್ನ ನಾಯಕೆ ಅವರು ಕೂಡ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಆಡಿದ ಕೇವಲ 28 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 60 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಶ್ರೀಲಂಕಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಲ್ಲದೆ ಕೊನೆಯಲ್ಲಿ ಅಬ್ಬರಿಸಿದ ದಸೂನ್ ಶಾನಕ,ಕೇವಲ20 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಶ್ರೀಲಂಕಾ ಪರ ವೇಗದ ಅರ್ಧಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು.
A battling half-century from Mohammad Nadeem for Oman against Sri Lanka👏
— ICC (@ICC) February 12, 2026
It is one of the @marriottbonvoy Milestones of the #T20WorldCup 2026.
📝: https://t.co/Vpv1Ytwuwo pic.twitter.com/9e6gLkOkfc
ಮೊಹಮ್ಮದ್ ನದೀಮ್ ಅರ್ಧಶತಕ
226 ರನ್‌ಗಳ ಗುರಿಯನ್ನು ಹಿಂಬಾಲಿಸಿದ ನೇಪಾಳ ತಂಡದ ಪರ ಮೊಹಮ್ಮದ್ ನದೀಮ್ ಏಕಾಂಗಿ ಹೋರಾಟ ನಡೆಸಿದರು. ಅವರು ಆಡಿದ 56 ಎಸೆತಗಳಲ್ಲೀ 53 ರನ್‌ಗಳನ್ನು ಗಳಿಸಿದರು. ಇವರ ಜೊತೆಗೆ ವಸೀಮ್ ಅಲಿ 26 ಎಸೆತಗಳಲ್ಲಿ 27 ರನ್‌ಗಳನ್ನು ಗಳಿಸಿದರು. ಇವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್‌ಮನ್ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಉಳಿಯಲಿಲ್ಲ. ಶ್ರೀಲಂಕಾ ಪರ ದುಷ್ಮಾಂತ ಚಮೀರಾ ಹಾಗೂ ಮಹೇಶ್ ತೀಕ್ಷಣ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.