#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Bhagya Lakshmi Serial: ಕಂಡವರ ಗಂಡನ್ನ ಕಿತ್ಕೊಂಡು ಬದುಕುತ್ತಿರುವವಳು ನೀನು: ಶ್ರೇಷ್ಠಾಳ ಮೈಚಳಿ ಬಿಡಿಸಿದ ಭಾಗ್ಯಾ

ಶ್ರೇಷ್ಠಾಳ ಮಾತು ಕೇಳುವಷ್ಟು ಕೇಳಿದ ಭಾಗ್ಯಾ ತಾಳ್ಮೆ ಕಳೆದುಕೊಂಡು, ನೀನು ಮರಿಯಾದೆ ಬಗ್ಗೆ ಮಾತಾಡ್ತಾ ಇದ್ದೀಯಾ.. ಇಷ್ಟು ದಿನ ಬೇರೆಯವರ ಸಂಸಾರವನ್ನು ಹಾಳು ಮಾಡಿದವಳು ಈಗ ಇನ್ನೊಬ್ಬರ ಸಂಸಾರದ ಬಗ್ಗೆ ಪಾಠ ಹೇಳಿ ಕೊಡ್ತಾ ಇದ್ದೀಯಾ.. ಕಂಡವರ ಗಂಡನ್ನ ಕಿತ್ಕೊಂಡು ಬದುಕುತ್ತಿರುವವಳು ನೀನು ಎಂದು ಹೇಳಿದ್ದಾಳೆ.

ಶ್ರೇಷ್ಠಾಳ ಮೈಚಳಿ ಬಿಡಿಸಿದ ಭಾಗ್ಯಾ

Bhagya Lakshmi serial

Profile Vinay Bhat Feb 8, 2025 12:29 PM

ಹಿಂದಿನ ವಾರ ಟಿಆರ್​ಪಿಯಲ್ಲಿ ಕುಸಿತ ಕಂಡ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ( Bhagya Lakshmi Serial ) ಇದೀಗ ಹೊಸ ದಿಕ್ಕಿನತ್ತ ಸಾಗುತ್ತಿದೆ. ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡಲಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಧಾರಾವಾಹಿ ಹೊಸ ತಿರುವನ್ನು ಪಡೆದುಕೊಳ್ಳಲಿದ್ದು, ಭಾಗ್ಯಾಳ ಹೊಸ ಪಯಣ ಶುರುವಾಗಲಿದೆ. ಸದ್ಯ ತಾಂಡವ್ ತನ್ನ ಮಗಳ ಫೀಸ್ ಕಟ್ಟಿದ ವಿಚಾರ ಶ್ರೇಷ್ಠಾಳಿಗೆ ತಿಳಿದಿದ್ದು, ಕೆರಳಿ ಕೆಂಡವಾಗಿದ್ದಾಳೆ. ಭಾಗ್ಯಾಳ ಮನೆಗೆ ಬಂದು ಶ್ರೇಷ್ಠಾ ರಂಪಾಟ ಮಾಡಿದ್ದಾಳೆ.

ತನ್ವಿ ಕಾಲೇಜಿನಲ್ಲಿ ಕೋರ್ಸ್‌ಗೆ ಸೇರಲು 80,000 ರೂಪಾಯಿ ಬೇಕಾಗಿದೆ, ನಾಳೆಯೇ ಕೊನೆಯ ದಿನ ಎಂದು ಹೇಳುತ್ತಾಳೆ. ಭಾಗ್ಯಾಳ ಕೈಯಲ್ಲಿ ಹಣ ಇರುವುದಿಲ್ಲ. ಫೀಸ್ ಕಟ್ಟಬೇಕು ಎಂದು ತನ್ವಿ ತನ್ನ ತಂದೆ ತಾಂಡವ್​ಗೆ ಹೇಳಿದ್ದಾಳೆ. ಆಗ ತಾಂಡವ್ ತಕ್ಷಣ ಕಾಲೇಜಿಗೆ ಬಂದು ಎಲ್ಲ ಕೋರ್ಸ್​ನ ಮಾಹಿತಿ ಪಡೆದು ಫೀಸ್ ಕಟ್ಟಿದ್ದಾನೆ. ಇದಾದ ಬಳಿಕ ತಾಂಡವ್, ನಿನ್ಗೆ ಯಾವತ್ತೂ ಏನು ಹೆಲ್ಪ್ ಬೇಕಿದ್ರೂ ನಿನ್ ಪಪ್ಪಾನ ಕೇಳ್ಬೇಕು.. ನಾನು ಯಾವತ್ತೂ ನಿನ್ ಜೊತೆ ಇರುತ್ತೇನೆ ಎಂದು ತನ್ವಿಗೆ ಮೆಸೇಜ್ ಮಾಡುತ್ತಾನೆ.

ಆಗ ಶ್ರೇಷ್ಠಾ ಬಂದು ತಾಂಡವ್ ಬಳಿ ಇದ್ದ ಮೊಬೈಲ್ ಎಳೆದುಕೊಂಡು ಯಾರಿಗೆ ಮೆಸೇಜ್ ಮಾಡುತ್ತಿದ್ದೀಯಾ ಎಂದು ಕೇಳಿ.. ಎಲ್ಲ ಮೆಸೇಜ್​ಗಳನ್ನು ಓದುತ್ತಾಳೆ. ವಿಷಯ ತಿಳಿದ ಶ್ರೇಷ್ಠಾಗೆ ಕೋಪ ನೆತ್ತಿಗೇರುತ್ತದೆ. ಮಾತಿಗೆ ಮಾತು ಬೆಳೆದು ಜಗಳ ನಡೆಯುತ್ತದೆ. ತನ್ವಿ ನನ್ನ ಮಗಳು.. ಅವಳ ಫೀಚರ್​ನಲ್ಲಿ ನಂದೂ ಪಾಲಿದೆ. ಅವಳ ವಿಷಯದಲ್ಲಿ ನಾನು ಏನು ಮಾಡ್ಬೇಕು.. ಏನು ಮಾಡಬಾರದು ಅಂತ ನೀನು ನನ್ಗೆ ಹೇಳೋಕೆ ಬರ್ಬೇಡ.. ನಿನ್ನ ಕೆಲಸ ಎಷ್ಟಿದೆ ಅಷ್ಟು ನೋಡ್ಕೊ ಎಂದು ತಾಂಡವ್ ಶ್ರೇಷ್ಠಾಗೇ ಹೇಳುತ್ತಾನೆ.

ಇದೆಲ್ಲ ಭಾಗ್ಯಾಳ ಪ್ಲ್ಯಾನ್ ಎಂದು ಶ್ರೇಷ್ಠಾ ನೇರವಾಗಿ ಭಾಗ್ಯಾ ಇರುವ ಮನೆಗೆ ಹೋಗಿ ನೀನು ನನ್ನ ಮನೇನ ದರೋಡೆ ಮಾಡ್ತಾ ಇದ್ರೆ ಈ ಶ್ರೇಷ್ಠಾ ಸುಮ್ನೆ ನೋಡ್ಕೊಂಡು ಕೂರಲ್ಲ.. ಮಕ್ಕಳನ್ನು ಮುಂದೆ ಇಡ್ಕೊಂಡು ನನ್ನವರನ್ನ ದೋಚೊ ಕೆಲಸ ಮಾಡ್ತಾ ಇದ್ದಾಳಲ್ಲ ಭಾಗ್ಯಾ ಅದನ್ನ ನಿಲ್ಸಿ ಸ್ವಲ್ಪ ಮಾನ ಮರಿಯಾದೆಯಿಂದ ಬದುಕೊ ಅಂತ ಹೇಳೋಕೆ ಬಂದಿದ್ದೇನೆ. ಇನ್ನೊಂದು ಸಲ ಮಕ್ಳು-ಮರಿ ಅಂತ ಪ್ಲ್ಯಾನ್ ಮಾಡ್ಕೊಂಡು ನನ್ನ ಗಂಡನ ಹತ್ರ ದುಡ್ಡು ಕೇಳೋ ಪ್ಲ್ಯಾನ್ ಮಾಡಿದ್ರೆ ಸರಿಯಿರಲ್ಲ ಎನ್ನುತ್ತಾಳೆ.



ಶ್ರೇಷ್ಠಾಳ ಮಾತು ಕೇಳುವಷ್ಟು ಕೇಳಿದ ಭಾಗ್ಯಾ ತಾಳ್ಮೆ ಕಳೆದುಕೊಂಡು, ನೀನು ಮರಿಯಾದೆ ಬಗ್ಗೆ ಮಾತಾಡ್ತಾ ಇದ್ದೀಯಾ.. ಇಷ್ಟು ದಿನ ಬೇರೆಯವರ ಸಂಸಾರವನ್ನು ಹಾಳು ಮಾಡಿದವಳು ಈಗ ಇನ್ನೊಬ್ಬರ ಸಂಸಾರದ ಬಗ್ಗೆ ಪಾಠ ಹೇಳಿ ಕೊಡ್ತಾ ಇದ್ದೀಯಾ.. ಕಂಡವರ ಗಂಡನ್ನ ಕಿತ್ಕೊಂಡು ಬದುಕುತ್ತಿರುವವಳು ನೀನು ಎಂದು ಹೇಳಿದ್ದಾಳೆ. ಇದಕ್ಕೆ ಶ್ರೇಷ್ಠಾ, ಹೌದು ನಾನು ಮರಿಯಾದೆ ಕೆಟ್ಟವಳೆ.. ಈಗ ನಿನ್ ಗಂಡ ನನ್ನ ಜೊತೆ ಬಂದಾಗಿದೆ ಅಲ್ವಾ.. ನಿನ್ಗೆ ನನ್ನ ಗಂಡನ ಹತ್ರ ಏನು ಕೇಲಸ ಎಂದು ಕೇಳುತ್ತಾಳೆ. ಗಂಡ ಬಿಟ್ಟುಹೋದ ಮೇಲೂ ಅವನ ಹತ್ರ ದುಡ್ಡು ಕೇಳೋದು ಮರಿಯಾದಸ್ತರ ಕೆಲಸನಾ ಎಂದು ಕೇಳುತ್ತಾಳೆ.

ಶ್ರೇಷ್ಠಾಳ ಈ ಮಾತಿನಿಂದ ಕೆರಳಿದ ಕುಸುಮಾ ತಾಂಡವ್​ಗೆ ಕರೆ ಮಾಡಿ, ತನ್ವಿ ತಾನೆ ನಿನ್ನ ಹತ್ರ ದುಡ್ಡು ಕೇಳಿದ್ದು.. ಭಾಗ್ಯಾ ಕೇಳಿದ್ದಾಳ.. ಈಗ ಈ ಶ್ರೇಷ್ಠಾನ ಇಲ್ಲಿಗೆ ರಂಪಾಟ ಮಾಡಿಸೋಕೆ ಕರೆಸಿದ್ದೀಯಾ ಎಂದು ಕೇಳಿದ್ದಾರೆ. ಶ್ರೇಷ್ಠಾ ಅಲ್ಲಿಗೆ ತೆರಳಿರುವ ವಿಷಯ ತಿಳಿದು ಶಾಕ್ ತಾಂಡವ್ ನೇರವಾಗಿ ಮನೆಗೆ ಬರುತ್ತಾನೆ.



ತಾಂಡವ್ ಬಂದ ಕೂಡಲೇ ಶ್ರೇಷ್ಠಾ, ಇವತ್ತು ನಿಮ್ಮ ಮನೆಯವರ ಅಸಲಿ ಮುಖ ತೋರಿಸಲಿಕೆ ಬಂದಿದ್ದೇನೆ ತಾಂಡವ್.. ಇವರೆಲ್ಲ ನಾಟಕ ಆಡ್ತಾ ಇದ್ದಾರೆ ಕಣೋ ಎಂದು ಹೇಳುತ್ತಾಳೆ. ಆಗ ತಾಂಡವ್ ಶ್ರೇಷ್ಠಾಳ ಕೆನ್ನೆಗೆ ಬಾರಿಸುತ್ತಾನೆ. ನಿನ್ಗೆ ನನಗಿಂತ ಅವರೇ ಹೆಚ್ಚಾದ್ರ ಎಂದು ಶ್ರೇಷ್ಠಾ ಕೇಳುತ್ತಾಳೆ. ಇದಕ್ಕೆ, ನನಗೆ ನೀನು ಮತ್ತು ನನ್ನ ಅಪ್ಪ-ಅಮ್ಮ-ಮಕ್ಕಳು ಅಂತ ಚಾಯ್ಸ್ ಬಂದ್ರೆ ನಾನು ಅವರನ್ನೇ ಆಯ್ಕೆ ಮಾಡೋದು ಎಂದು ಹೇಳಿದ್ದಾನೆ. ಸದ್ಯ ಇಂದಿನ ಸಂಚಿಕೆಯಲ್ಲಿ ದೊಡ್ಡ ಹೈ-ಡ್ರಾಮವೇ ನಡೆಯಲಿದೆ. ಪೆಟ್ಟು ತಿಂದ ಶ್ರೇಷ್ಠಾ ಈಗ ಏನು ಮಾಡುತ್ತಾಳೆ?, ತಾಂಡವ್​ನ ವಿರುದ್ಧವೂ ಸೇಡು ತೀರಿಸಿಕೊಳ್ಳಲು ಶುರುಮಾಡುತ್ತಾಳ ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

Gauthami Jadav, BBK 11: ಮಂಜುವನ್ನು ಕರೆದುಕೊಂಡು ಶಕ್ತಿ ದೇವತೆ ಬಳಿ ತೆರಳಿದ ಗೌತಮಿ: ಫೋಟೋ ವೈರಲ್