Rukmini Vasanth: ಬೆಂಗಳೂರಿನಲ್ಲಿ ಅತ್ಯಂತ ದೊಡ್ಡ ಎಕ್ಸ್ಪೀರಿಯೆನ್ಸ್ ಹಬ್ ಪ್ರಾರಂಭ; ನಟಿ ರುಕ್ಮಿಣಿ ವಸಂತ್ ಅವರಿಂದ ಉದ್ಘಾಟನೆ
ಎರಡು ಮಹಡಿಗಳಲ್ಲಿ 6,200 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಕೇಂದ್ರವು ಮ್ಯಾಜಿಕ್ ಹೋಮ್ ನ ಅತ್ಯಂತ ದೊಡ್ಡ ಹಾಗೂ ತಲ್ಲೀನಗೊಳಿಸುವ ತಾಣವಾಗಿದ್ದು ಗೃಹ ಮಾಲೀಕರು ಆವಿಷ್ಕರಿಸುವ, ಅನುಭವ ಪಡೆದುಕೊಳ್ಳುವ ಮತ್ತು ಒಳಾಂಗಣಗಳನ್ನು ಆಯ್ಕೆ ಮಾಡುವ ವಿಧಾನವನ್ನು ಸಂಪೂರ್ಣ ಮರು ರೂಪಿಸಲು ವಿನ್ಯಾಸಗೊಳಿಸಲಾಗಿದೆ.
-
ಬೆಂಗಳೂರು: ಮಾಡ್ಯುಲರ್ ಹೋಮ್ ಇಂಟೀರಿಯರ್ ಬ್ರಾಂಡ್ ಬೆಂಗಳೂರಿನ ಎಚ್.ಎಸ್.ಆರ್. ಲೇಔಟ್ ನಲ್ಲಿ ತನ್ನ ಮುಂಚೂಣಿಯ ಎಕ್ಸ್ಪೀರಿಯೆನ್ಸ್ ಹಬ್ ಅನ್ನು ಅನಾವರಣಗೊಳಿಸಿದ್ದು ಇದನ್ನು ನಟಿ ರುಕ್ಮಿಣಿ ವಸಂತ್(Sandalwood Actress Rukmini Vasanth) ಉದ್ಘಾಟಿಸಿದರು. ಎರಡು ಮಹಡಿಗಳಲ್ಲಿ 6,200 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಕೇಂದ್ರವು ಮ್ಯಾಜಿಕ್ ಹೋಮ್ ನ ಅತ್ಯಂತ ದೊಡ್ಡ ಹಾಗೂ ತಲ್ಲೀನಗೊಳಿಸುವ ತಾಣವಾಗಿದ್ದು ಗೃಹ ಮಾಲೀಕರು ಆವಿಷ್ಕರಿಸುವ, ಅನುಭವ ಪಡೆದುಕೊಳ್ಳುವ ಮತ್ತು ಒಳಾಂಗಣಗಳನ್ನು ಆಯ್ಕೆ ಮಾಡುವ ವಿಧಾನವನ್ನು ಸಂಪೂರ್ಣ ಮರು ರೂಪಿಸಲು ವಿನ್ಯಾಸಗೊಳಿಸಲಾಗಿದೆ.
ಈ ಸಂದರ್ಭಕ್ಕೆ ತಾರಾ ಆಕರ್ಷಣೆ ಮತ್ತು ಸಾಂಸ್ಕೃತಿಕ ಸ್ಪರ್ಶ ನೀಡಿದ ನಟಿ ರುಕ್ಮಿಣಿ ವಸಂತ್ ಬೆಂಗಳೂರಿನಲ್ಲಿ ಆಧುನಿಕ ನಗರ ಜೀವನದ ವಿನ್ಯಾಸ, ಜೀವನಶೈಲಿಯ ಸಂಯೋಜನೆಯ ಸಂಭ್ರಮ ಕ್ಕೆ ಸಾಕ್ಷಿಯಾದರು.
ಈ ಎಕ್ಸ್ಪೀರಿಯೆನ್ಸ್ ಹಬ್ ಒಳಗಡೆ ನಡೆದಾಡುವುದು ನಿಜವಾದ ಮನೆಯಲ್ಲಿ ನಡೆದಂತೆಯೇ ಭಾಸವಾಗುತ್ತದೆ. ಸಂದರ್ಶಕರು ಪೂರ್ಣ ಪ್ರಮಾಣದ 2ಬಿಎಚ್.ಕೆ. ಮಾಕ್-ಅಪ್ ಅನುಭವ ಪಡೆದುಕೊಳ್ಳಬಹುದು, ಪ್ರಶಸ್ತಿ ಪುರಸ್ಕೃತ ಕಿಚನ್ ನಿಂದ ಆಲೋಚನಾಯುಕ್ತವಾಗಿ ಒಗ್ಗೂಡಿಸಿದ ಲಿವಿಂಗ್ ಮತ್ತು ಸ್ಟಡಿ ಏರಿಯಾ, ಸ್ಲೈಡಿಂಗ್ ವಾರ್ಡ್ ರೋಬ್ ಹಾಗು ಸೋಫಾ ಬೆಡ್ ನೊಂದಿಗೆ ಗೆಸ್ಟ್ ಬೆಡ್ ರೂಂ ಹಾಗೂ ಫ್ಲೋರ್-ಟು-ಸೀಲಿಂಗ್ ವಾರ್ಡ್ ರೋಬ್ ಗಳನ್ನು ಹೊಂದಿದೆ.
ಇದನ್ನೂ ಓದಿ: Rukmini Vasanth: ಸರಳ ಸುಂದರಿ ರುಕ್ಮಿಣಿ ವಸಂತ್ ಈಗ ʻಮೆಲ್ಲಿಸಾʼ; ಟಾಕ್ಸಿಕ್‌ನಲ್ಲಿ ಖಡಕ್ ಲುಕ್!
ಇದು ಮ್ಯಾಜಿಕ್ ಹೋಮ್ ನ ಪೇಟೆಂಟ್ ಪಡೆಯಲಾದ, ಮಕ್ಕಳ ಸುರಕ್ಷತೆಯ ಪಿಯು ಫಿನಿಷ್ ಗಳು, ಪ್ರೀಮಿಯಂ ಆಕ್ರಿಲಿಕ್ ಗಳು ಮತ್ತು ವಿಸ್ತಾರ ಶ್ರೇಣಿಯ ಲ್ಯಾಮಿನೇಷನ್ ಗಳನ್ನು ಹೊಂದಿದ್ದು ವೈಯಕ್ತಿಕಗೊಳಿಸಿದ ಒಳಾಂಗಣಗಳಿಗೆ 50,000 ವಿನ್ಯಾಸದ ಸಾಧ್ಯತೆಗಳನ್ನು ತೆರೆದಿದೆ.
ಈ ಅನುಭವವನ್ನು ಮತ್ತಷ್ಟು ಉನ್ನತಗೊಳಿಸುವುದು ಡಿಸೈನ್ ಎಕ್ಸ್ಪೀರಿಯೆನ್ಸ್ ಝೋನ್ ಇದ್ದು ಇದರಲ್ಲಿ ಪಿವೋಟಿಂಗ್ ಪ್ಯಾನೆಲ್ ಮ್ಯಾಟ್ರಿಕ್ಸ್ ಮತ್ತು ಫ್ಯಾಬ್ರಿಕ್ ಲೈಬ್ರರಿ ಹೊಂದಿದ್ದು ಗ್ರಾಹಕರು ನಿಜವಾದ ಪ್ರಮಾಣದಲ್ಲಿ ಮತ್ತು ಬೆಳಕಿನಲ್ಲಿ ಮೆಟೀರಿಯಲ್ ಗಳು ಹೇಗೆ ಕಾಣುತ್ತವೆ ಎನ್ನುವುದನ್ನು ಅನುಭವ ಪಡೆದು ಹೋಲಿಕೆ ಮಾಡಿ ನೋಡಬಹುದು.
ಈ ಪ್ರಾರಂಭ ಕುರಿತು ಮ್ಯಾಜಿಕ್ ಹೋಮ್ ಅಧ್ಯಕ್ಷ ಇಂದ್ರಕುಮಾರ್ ಪದ್ಮನಾಥನ್, “ಮ್ಯಾಜಿಕ್ ಹೋಮ್ ಸದಾ ಮಹತ್ತರ ಒಳಾಂಗಣವು ಮಹತ್ತರ ಅರ್ಥ ಮಾಡಿಕೊಳ್ಳುವುದರಿಂದ ಪ್ರಾರಂಭ ವಾಗುತ್ತದೆ ಎಂದು ನಂಬಿದೆ. ಈ ಎಕ್ಸ್ಪೀರಿಯೆನ್ಸ್ ಹಬ್ ಆ ನಂಬಿಕೆಯ ಭೌತಿಕ ಅಭಿವ್ಯಕ್ತಿಯಾಗಿದೆ.
ಇದು ವಿನ್ಯಾಸ, ಮೆಟೀರಿಯಲ್ಸ್ ಮತ್ತು ನಿಜ ಜೀವನದ ತಾಣಗಳನ್ನು ಒಂದೇ ಸೂರಿನಡಿ ತರುತ್ತದೆ, ಇದರಿಂದ ಗ್ರಾಹಕರು ನಿಜಕ್ಕೂ ಅವರ ಭವಿಷ್ಯದ ಮನೆ ಹೇಗಿರುತ್ತದೆ ನೋಡಿ, ಸ್ಪರ್ಶಿಸಿ ಮತ್ತು ಅನುಭವ ಪಡೆದುಕೊಳ್ಳಬಹುದು. ಬೆಂಗಳೂರು ಈ ಮುಂದಿನ ಅಧ್ಯಾಯಕ್ಕೆ ಅತ್ಯಂತ ಸಹಜ ನಗರವಾಗಿದೆ. ಇದು ವಿನ್ಯಾಸವನ್ನು ಪ್ರಶಂಸಿಸುತ್ತದೆ, ಗುಣಮಟ್ಟಕ್ಕೆ ಮೌಲ್ಯ ನೀಡುತ್ತದೆ ಮತ್ತು ಸತತವಾಗಿ ವಿಕಾಸಗೊಳ್ಳುತ್ತದೆ” ಎಂದರು.
ಮ್ಯಾಜಿಕ್ ಹೋಮ್ ಉಪಾಧ್ಯಕ್ಷ ಗಣೇಶ್ ವಿಸ್ವನಾಥನ್, “ಇಂದು ಗ್ರಾಹಕರು ಅಪಾರ ಆಯ್ಕೆಗಳಿಂದ ಗೊಂದಲಕ್ಕೆ ಒಳಗಾಗಲು ಬಯಸುವುದಿಲ್ಲ. ಅವರಿಗೆ ಮಾರ್ಗದರ್ಶನ, ಪಾರದರ್ಶಕತೆ ಮತ್ತು ಸಕ್ರಿಯ ಪ್ರಕ್ರಿಯೆ ಅಗತ್ಯ. ಈ ಮಳಿಗೆಯನ್ನು ಅದಕ್ಕಾಗಿಯೇ ನಿರ್ಮಿಸಲಾಗಿದೆ. ನಮ್ಮ 2 ಬಿ.ಎಚ್.ಕೆ. ಮಾಪ್ ಅಪ್ ನಿಂದ ಡಿಸೈನ್ ಎಕ್ಸ್ಪೀರಿಯೆನ್ಸ್ ಝೋನ್ ವರೆಗೆ ಪ್ರತಿ ಅಂಶವನ್ನೂ ನಿರ್ಧಾರವನ್ನು ಸರಳೀಕರಿಸಲು ವಿನ್ಯಾಸಗೊಳಿಸಲಾಗಿದೆ. ಬೆಂಗಳೂರು ಪ್ರಬುದ್ಧ, ವಿನ್ಯಾಸದ ಅರಿವಿನ ಮಾರುಕಟ್ಟೆ ಯಾಗಿದೆ ಮತ್ತು ಈ ಕೇಂದ್ರವು ನಮಗೆ ಅದೇ ಪ್ರಮಾಣದಲ್ಲಿ ಸೇವೆ ಒದಗಿಸಲು ಅಲ್ಲದೆ ಭವಿಷ್ಯದ ಪ್ರಗತಿಗೆ ತಳಹದಿ ನಿರ್ಮಿಸಲು ನೆರವಾಗಿದೆ” ಎಂದರು.
ಈ ಕೇಂದ್ರ ಕುರಿತು ರುಕ್ಮಿಣಿ ವಸಂತ್, “ಈ ತಾಣದ ಕುರಿತು ನನಗೆ ಇಷ್ಟವಾಗಿದ್ದು ಅದು ಎಷ್ಟು ನೈಜವಾಗಿದೆ ಎನ್ನುವುದು. ನೀವು ಬರೀ ನಮೂನೆಗಳು ಮತ್ತು ಡಿಸ್ಪ್ಲೇಗಳನ್ನು ನೋಡುವುದಲ್ಲ, ಬದಲಿಗೆ ಮನೆಯ ಒಳಗಡೆ ನಡೆದಂತಿದ್ದು ಪ್ರತಿ ವಿನ್ಯಾಸವೂ ಪ್ರತಿನಿತ್ಯದ ಜೀವನದಲ್ಲಿ ಹೇಗೆ ಜೋಡಣೆಯಾಗುತ್ತದೆ ಎಂದು ಅರ್ಥ ಮಾಡಿಕೊಳ್ಳುವುದಾಗಿದೆ. ಇದು ನಿಮ್ಮ ಮನೆಯ ಯೋಜನೆ ಯನ್ನು ಸರಳ, ವೈಯಕ್ತಿಕ ಮತ್ತು ಅತ್ಯಂತ ಉತ್ಸಾಹಕಾರಿಯಾಗಿಸುತ್ತದೆ” ಎಂದರು.