ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜಿಲ್ಲಾದ್ಯಂತ ಕೊರೆಯುವ ಚಳಿ, ಬೆಚ್ಚನೆಯ ಇಡುವ ಬೆಂಕಿ ಮೊರೆ

ಚಳಿಯ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಬೆಳಗ್ಗೆ ಹಾಗೂ ಸಂಜೆ ವಾಕಿಂಗ್ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಬೆಳ್ಳಂ ಬೆಳಗ್ಗೆ ವಾಕಿಂಗ್ ಮಾಡುತ್ತಿರುವವರು ಸೂರ್ಯನ ಉದಯದ ಬಳಿಕ ವಾಕಿಂಗ್ ಮಾಡುತ್ತಿದ್ದರೆ, ಸಂಜೆ ಸೂರ್ಯಾಸ್ತದ ಒಳಗಾಗಿ ಕೆಲವರು ವಾಕಿಂಗ್ ಮಾಡು ತ್ತಿದ್ದಾರೆ. ಚಳಿ ಕಾರಣ ದಿಂದ ಹೆಚ್ಚಿನವರು ವಾಕಿಂಗ್ನಿಂದ ದೂರ ಉಳಿದಿದ್ದಾರೆ.

ಜಿಲ್ಲಾದ್ಯಂತ ಕೊರೆಯುವ ಚಳಿ, ಬೆಚ್ಚನೆಯ ಇಡುವ ಬೆಂಕಿ ಮೊರೆ

-

Ashok Nayak
Ashok Nayak Dec 15, 2025 10:06 AM

ಅಭಿಷೇಕ ಪಾಟೀಲ ಬಾಗಲಕೋಟೆ

ಮನೆಯಿಂದ ಆಚೆ ಹೋಗಲು ಜನ ಹಿಂದೇಟು

ಸ್ವೆಟರ್, ಜಾಕೆಟ್‌ಗಳಿಗೆ ಬೇಡಿಕೆ

ಜಿಲ್ಲೆಯಲ್ಲಿ ಕಳೆದ ವಾರದಿಂದ ಹೆಚ್ಚಿನ ಚಳಿ ಪ್ರಾರಂಭವಾಗಿದ್ದು, ಜನರು ಬೆಳಗ್ಗೆ ಹಾಗೂ ಸಂಜೆಯ ನಂತರ ಹೊರಗೆ ಬರುವುದನ್ನು ಕಡಿಮೆ ಮಾಡಿದ್ದಾರೆ. ಜಿಲ್ಲಾದ್ಯಂತ ಡಿ.10ರ ನಂತರ ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಿದ್ದು, ಕನಿಷ್ಠ ತಾಪಮಾನ 7.6 ಡಿಗ್ರಿ ದಾಖಲಾಗಿದೆ. ಹೊಸ್ತಿಲ ಹುಣ್ಣಿಮೆಗೆ ಮನೆಯ ಹೊಸ್ತಿಲು ನಡಗುತ್ತದೆ ಎಂಬ ಮಾತು ಜಿಲ್ಲೆಯಲ್ಲಿ ನಿಜವಾಗಿದೆ.

ಚಳಿಯ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಬೆಳಗ್ಗೆ ಹಾಗೂ ಸಂಜೆ ವಾಕಿಂಗ್ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಬೆಳ್ಳಂ ಬೆಳಗ್ಗೆ ವಾಕಿಂಗ್ ಮಾಡುತ್ತಿರುವವರು ಸೂರ್ಯನ ಉದಯದ ಬಳಿಕ ವಾಕಿಂಗ್ ಮಾಡುತ್ತಿದ್ದರೆ, ಸಂಜೆ ಸೂರ್ಯಾಸ್ತದ ಒಳಗಾಗಿ ಕೆಲವರು ವಾಕಿಂಗ್ ಮಾಡು ತ್ತಿದ್ದಾರೆ. ಚಳಿ ಕಾರಣದಿಂದ ಹೆಚ್ಚಿನವರು ವಾಕಿಂಗ್ನಿಂದ ದೂರ ಉಳಿದಿದ್ದಾರೆ.

ಇನ್ನೂ ಮೈ ಕೊರೆಯುವ ಚಳಿಯಿಂದ ತಪ್ಪಿಸಿಕೊಳ್ಳಲು ಜನರು ಸ್ವೇಟರ್,ಕ್ಯಾಪ್, ಜಾಕೆಟ್ ಹಾಗೂ ಶಾಲುಗಳ ಮೋರೆ ಹೋಗುತ್ತಿದ್ದಾರೆ. ಇದರಿಂದ ಈ ವಸ್ತುಗಳ ಮಾರಾಟ ಜೋರಾಗಿದೆ.

ಪ್ರತಿ ವರ್ಷ ಡಿಸಂಬರ್‌ತಿಂಗಳಲ್ಲಿ 12 ರಿಂದ 16 ಡಿಗ್ರಿ ಸೆಲ್ಸಿಯಸ್ ವರೆಗೂ ತಾಪಮಾನ ಇರುತ್ತದೆ. ಈ ಬಾರಿ ಡಿಸೆಂಬರ್‌ತಿಂಗಳ ಮೊದಲ ವಾರದಿಂದಲೇ ಥಂಡಿ ಪ್ರಮಾಣ ಪ್ರತಿ ದಿನ ಹೆಚ್ಚಾಗುತ್ತಿದೆ. ಜತೆಗೆ ಶೀತ ಗಾಳಿ ಕೂಡ ಪ್ರಾರಂಭವಾಗಿರುವುದರಿಂದ ಮೈ ಕೋರೆಯುವ ಚಳಿ ಆರಂಭವಾಗಿದ್ದು, ಮಧ್ಯಾಹ್ನದ ಬಿಸಿಲಿನ ಸಂದರ್ಭದಲ್ಲೂ ಚಳಿಯ ಅನುಭವವಾಗುತ್ತಿದೆ.

ಇದನ್ನೂ ಓದಿ: Karnataka Weather: ಬೆಂಗಳೂರಿನಲ್ಲಿ ಮೈ ಕೊರೆಯುವ ಚಳಿ, 10 ವರ್ಷದಲ್ಲಿ ಕನಿಷ್ಠ ತಾಪಮಾನ ದಾಖಲು

ಡಿ.1ರಿಂದ 8ರ ವರೆಗೆ 19 ರಿಂದ 12ರ ವರೆಗೆ ಡಿಗ್ರಿ ಸೆಲ್ಸಿಯಸ್ ಇದ್ದ ವಾತಾವರಣ, ಡಿ.9 ರಂದು 11.9, 10 ರಂದು 9.3, 11 ರಂದು 8.9, 12ರಂದು ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಳೆದ ಆರು ವರ್ಷಗಳಲ್ಲಿ ಇದು ಅತೀ ಕಡಿಮೆ ತಾಪಮಾನವಾಗಿದೆ.

ಹಲವರಿಗೆ ಕೆಮು--, ನೆಗಡಿ, ಜ್ವರ

ಜಿಲ್ಲೆಯಲ್ಲಿ ಚಳಿ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವ ಪರಿಣಾಮ ಚಿಕ್ಕ ಮಕ್ಕಳಲ್ಲಿ ಹಾಗೂ ವಯಸ್ಸಾದವರಲ್ಲಿ ಜ್ವರ, ಕೆಮ್ಮೆ, ನೆಗಡಿ ಹಾಗೂ ಮೈ-ಕೈ ನೋವು ಸಾಮಾನ್ಯ ವಾಗಿದೆ. ಚಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚಿಗಿನ ಬಟ್ಟೆಗಳ ಮೋರೆ ಹೋಗುವ ಜತೆಗೆ ವಯಸ್ಸಾ ದವರು ಆದಷ್ಟು ಮನೆಯಲ್ಲಿರಬೇಕು. ಮನೆಯಲ್ಲೂ ಸಹ ಬೆಚ್ಚಗಿರಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.